Thursday, August 15, 2019

ಅನುಭವ : ಇಬ್ಬರು ಮಹಿಳೆಯರು.

ಒಮ್ಮೆ ನಮ್ಮ ಅಪ್ಪನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಗೂಳಿಯೊಂದು ಗುದ್ದಿ ಸಾಕಷ್ಟು ರಕ್ತ ಹೋಗಿ... ಪಕ್ಕೆಲುಬು ಮುರಿದು ಗೌರಿಬಿದನೂರಿನ "ಪ್ರಸಾದ್ ಹಾಸ್ಪಿಟಲ್" 10-15 ದಿನ ಅಡ್ಮಿಟ್ ಮಾಡಿದ್ದೆವು..., ಆ ಸಮಯದಲ್ಲಿ ಅಪ್ಪನನ್ನು‌ ನೋಡಿಕೊಳ್ಳಲು ನಾನು ಅಲ್ಲಿಯೇ ಇರಬೇಕಾಗಿತ್ತು..,

ನನಗೆ ಮಾಡಲು ಏನು ಕೆಲಸವಿಲ್ಲದಿದ್ದುದರಿಂದ ಸಾಯಂಕಾಲಗಳಲ್ಲಿ ಗೌರಿಬಿದನೂರನ್ನು ಸರ್ವೆ ಮಾಡುವಂತೆ ತಿರುಗಾಡಿಕೊಂಡಿರುವುದು ನನ್ನ ಅಭ್ಯಾಸವಾಗಿತ್ತು...,

ಒಮ್ಮೆ ಶಂಕರ್ ಟಾಕೀಸ್ ಮುಂಬಾಗದ ರಸ್ತೆಯ ಮೂಲಕ ರೈಲ್ವೆ ಸ್ಟೇಷನ್ ಕಡೆ ನಡೆದುಕೊಂಡು ಹೋಗುತ್ತಾಇದ್ದೆ...

ಆ ಸಮಯದಲ್ಲಿ ತುಂಬಾ ಸೊಗಸಾಗಿ ಕಟ್ಟಿದ ಮನೆಯೊಂದರ ಮುಂಭಾಗದಲ್ಲಿ  ಸುಮಾರು 65 -70 ವರ್ಷದ ವೃದ್ದೆಯೊಬ್ಬಳು ಕುಳಿತಿದ್ದಳು... ಆಕೆ ಪ್ರಾಯದಲ್ಲಿದ್ದಾಗ ಬಹಳ ಸುಂದರಳಾಗಿದ್ದಳೆಂದು ನೋಡಿದರೆ ಗೊತ್ತಾಗುತ್ತಿತ್ತು.., ಬೆಲೆಬಾಳುವ ಸೀರೆ ಆಕೆಗೆ ಒಂದು ಪ್ರೌಡ ಕಳೆ ಕೊಟ್ಟಿತ್ತು...!!❤

ನಾನು ಹತ್ತಿರ ಸಮೀಪಿಸುತ್ತಿದ್ದಂತೆ ಆಕೆ ನನ್ನತ್ತ ಒಮ್ಮೆ ಧೈನ್ಯದಿಂದ "ಅಮ್ಮಾ ಭಿಕ್ಷೆ" ಎಂದಳು..

ನನಗೆ ಆಶ್ಚರ್ಯ.. ಶಾಕ್ ಎರಡೂ ಒಟ್ಟಿಗೆ ಆದವು..., ಆಕೆ ಮತ್ತೊಮ್ಮೆ ಕೈ ಮುಂದೆ ಮಾಡಿ ಬೇಡಿದಳು..

ಎರಡನೆಯ ಯೋಚನೆಗೆ ಆಸ್ಪದವೇ ಇಲ್ಲದಂತೆ ನನ್ನ ಕೈ ನನಗೆ ಗೊತ್ತಿಲ್ಲದಂತೆ ಜೇಬಿನೊಳಗೆ ಹೋಗಿ 20 ರೂಪಾಯಿನ ನೋಟಿನೊಂದಿಗೆ ಹೊರಬಂದಿತು...!

ಉದ್ವೇಗ ಭಾವವನ್ನು ಮೀರಿದ ಭಯದೊಂದಿಗೆ ನಾನು ಆ ನೋಟನ್ನು ಆಕೆಯ ಕೈಯಲ್ಲಿಟ್ಟೆ..., ಆಕೆಯ ‌ಮುಖ ಸಂತೋಷದಿಂದ ಅರಳಿತು..., ಮೊದಲೇ ಸುಂದರವಾದ ಪ್ರೌಢ ಕಳೆ ಹೊಂದಿದ್ದ ಆಕೆ ಆ ನಗುವಿನಲ್ಲಿ ಸಾಕ್ಷಾತ್ ದೇವಿಯಂತೆಯೇ ಕಾಣಿಸಿದಳು..😯😯😯

ನಾನು ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬಾಗಿ ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಒಳಗಡೆಯಿಂದ ಆಲ್ಮೋಸ್ಟ್ ಕಿರಿಚುವ ದನಿಯೊಂದಿಗೆ ಒಬ್ಬ 30 ರ ಆಸುಪಾಸಿನ ಬಹಳ ಸುಂದರವಾದ ಯುವತಿಯೊಬ್ಬಳು ಹೊರಬಂದಳು.... ಆಕೆ ತುಂಬಾ ಸುಂದರವಾಗಿದ್ದರೂ ಆಕೆಯ ಹಮ್ಮು‌ಬಿಮ್ಮು ಅಹಂಕಾರಗಳನ್ನು ಗುರುತಿಸಬಹುದಾಗಿತ್ತು...

ಈ ಯುವತಿ ವೃದ್ದೆಯ ಮಗಳೋ ಅಥವಾ ಸೊಸೆಯೋ ಇರಬೇಕು...!!

ಆಕೆ ವೃದ್ದೆಯ ಹತ್ತಿರ ಹೋಗಿ ಸ್ವಲ್ಪ ಕಷ್ಟಪಟ್ಟು ಹಣವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಳು... ಆದರೆ ಆ ವೃದ್ದೆ ಬಿಡುತ್ತಿರಲಿಲ್ಲ..!!

ನನಗೆ ತುಂಬಾ ಭಯ ಆಗಿ ನಾನು ಅಲ್ಲಿಂದ ಓಡುವ ನಡಿಗೆಯಲ್ಲಿ ಮುಂದೆ ಸಾಗಲೆತ್ನಿಸಿದೆ..

ಯುವತಿ ಜೋರಾಗಿ ಕಿರುಚಿ ನಿಲ್ಲುವಂತೆ ಆಜ್ಞೆ ‌ಮಾಡಿದಳು..

ಹರಸಾಹಸ ಪಟ್ಟು ವೃದ್ದೆಯಿಂದ‌ ಹಣ ಕಿತ್ತುಕೊಂಡ ಆಕೆ ನನಗೆ ಆ ನೋಟನ್ನು ವಾಪಸ್ ಕೊಡಲು ಬಂದಳು....

ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದೆ...

ಆಕೆ ಕೋಪದಿಂದ ಬುಸುಗುಟ್ಟಿ ಆ ವೃದ್ದೆಯು ಆ ಮನೆಯ ಯಜಮಾನಿಯೆಂದು ಕೆಲುವು ಕೋಟಿ ಬಾಳುವ ಆಸ್ತಿ ಪಾಸ್ತಿ ಆಕೆಯ ಹೆಸರಲ್ಲಿ ಇದೆಯೆಂದು ನನಗೆ ತಿಳಿಸಿ ಬಲವಂತವಾಗಿ ಅದನ್ನು ನನ್ನ ಕೈಯಲ್ಲಿ ತುರುಕಿದಳು...

ಆಮೇಲೆ ಡವಗುಟ್ಟುವ ಎದೆಯೊಂದಿಗೆ ನಾನು ಅಲ್ಲಿಂದ ಕದಲಿ ರೈಲ್ವೆ ಸ್ಟೇಷನ್ನಿಗೆ ಬಂದು ಕುಳಿತೆ... ತುಂಬಾ ನಿರಾಸೆಯ ಜೊತೆ ಉಸಿರನ್ನು ತಹಬಂದಿಗೆ ತೆಗೆದುಕೊಂಡು ಒಂದು ಕಡೆ ಕುಳಿತು ವೃದ್ದೆಯ ಬಗ್ಗೆ ಯೋಚಿಸಿದೆ....

ನನ್ನ ಮನಸ್ಸಿನಲ್ಲಿ ಆಕೆಯ ಬಗ್ಗೆ ಒಂದು ವಿಶ್ಲೇಷಣೆ ಮೂಡಲಾರಂಬಿಸಿತು..

ಆಕೆ ಶ್ರೀಮಂತಳಾದುದರಿಂದ ಬಹುಶಃ ತನ್ನ ಪ್ರಾಯದ ಕಾಲದಲ್ಲಿ ಸಾಕಷ್ಟು ಹಣಕಾಸಿನ ಲೇವಾದೇವಿಯನ್ನು ನಡೆಸಿದ್ದಾಳೆ.. ಪ್ರತಿದಿನವೂ ಆಕೆಯ ಕೈಯಲ್ಲಿ ಸಾಕಷ್ಟು ಹಣ ಓಡಾಡುತ್ತಿತ್ತು...

ಆದರೆ ಈಗ ಆಕೆಗೆ ವಯಸ್ಸಾದುದರಿಂದ ಮನೆಯ ವ್ಯವಹಾರ ಮತ್ತು ಯಜಮಾನಿಕೆ ಸೊಸೆಯ ಪಾಲಾಗಿದೆ.... ಈಕೆಗೆ ಯಾವುದೇ ರೀತಿಯ ಹಕ್ಕು ಇಲ್ಲ..!,

ಆದರೆ ಸಮಯಕ್ಕೆ ಸರಿಯಾಗಿ ಊಟ, ಬಟ್ಟೆ ದೊರಕುತ್ತಿದೆ.., ಈಕೆಯ ಬೇಕು ಬೇಡಗಳನ್ನು ಕಿರಿಯರೇ ನೋಡಿಕೊಳ್ಳುತ್ತಿರುವುದರಿಂದ ಈಕೆಗೆ ಯಾವುದೇ ರೀತಿಯ ಹಣ ಸಿಗುತ್ತಿಲ್ಲ... ಸೊಸೆ ಪೂರ್ತಿಯಾಗಿ ಡಾಮಿನೇಟ್ ಮಾಡಿದ್ದಾಳೆ...

ಆದರೆ ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುವ ಮೋಹದಿಂದ ಹೊರಬರುವ ಬಗೆಯೆಂತು... ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ...!!??

ಹೀಗಾಗಿ ಹಣದ ಮೇಲಿನ ಮೋಹದಿಂದ ಭಿಕ್ಷೆ ಬೇಡಲಿಕ್ಕೂ ಈಕೆ ಸಿದ್ದವಾದಳು.... ಈ ರೀತಿಯಾಗಿ ನನ್ನ ‌ಮನಸ್ಸಿನಲ್ಲಿ ವೃದ್ದೆಯ ಚಿತ್ರ ಮೂಡಿತು..., ಇದೊಂದು ಸೈಕಲಾಜಿಕಲ್ ಪ್ರಾಬ್ಲಮ್... ಹಣವನ್ನು ಹೊಂದಬೇಕೆಂಬ ಉತ್ಕಟ ಆಕಾಂಕ್ಷೆ...!!

ನನ್ನ ಮನಸ್ಸು ಭಾರವಾಗಿತ್ತು... ನನಗೂ ವಯಸ್ಸಾದ ಮೇಲೆ ನನ್ನ ಮಕ್ಕಳು ಹೀಗೆಯೇ ಮಾಡಬಹುದೇನೊ ಎಂಬ ಜಿಜ್ಞಾಸೆ ಶುರುವಾಯಿತು....!!

ಸಮಯ ಸರಿದದ್ದೇ ತಿಳಿಯಲಿಲ್ಲ...
ರೈಲ್ವೆ ಸ್ಟೇಷನ್ ನಲ್ಲಿ ಒಂದು ಟೀ ಮತ್ತು ಪಕೋಡ ತಿಂದು ಆಸ್ಪತ್ರೆಯತ್ತ ಹೆಜ್ಜೆ ಹಾಕಿದೆ.... ಆದರೆ ನನಗರಿವಿಲ್ಲದಂತೆಯೇ ನನ್ನ ಕಾಲುಗಳು ಆ ವೃದ್ದೆಯ ‌ಮನೆಯ ಕಡೆ ಎಳೆದವು..!!

ಭಯದಿಂದಲೂ... ಕುತೂಹಲದಿಂದಲೂ ಆ ಮನೆಯತ್ತ ದೃಷ್ಟಿಸಿದೆ...!,

ಓಹ್ ಮೈ ಗುಡ್ ನೆಸ್ ವೃದ್ದೆ ಹೊರಗೆ ಕುಳಿತಿದ್ದಳು... ಎದೆಯಲ್ಲಿ ತಂಗಾಳಿ ಬೀಸಿದಂತಾಯಿತು...!!

ನಾನು ಮನೆಯ ಮುಂದೆ ಸರಿಯುತ್ತಿದ್ದಂತೆ ಆಕೆ ಮತ್ತೆ ದೈನ್ಯವನ್ನು ಕಣ್ಣಲ್ಲಿ ತುಂಬಿಕೊಂಡು ಬಾಯಿ ತೆರೆಯಲನುವಾದಳು..,

ನಾನು ಶ್....!!! ಎಂದು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿ ಹತ್ತಿರಕ್ಕೆ ಸಾಗಿದೆ..!!

ಯುವತಿ ಮತ್ತೆ ಬಂದರೇನು ಗತಿ ಎಂಬ ಭಯ ಹೆಚ್ಚಾಗಿತ್ತು..., ಎದೆ ಢವಢವಿಸುತ್ತಿತ್ತು....

ನನಗೆ ಈ ಅಡ್ವೆಂಚರ್‌ ಮಾಡಲು ಕಾರಣವೇನೆಂದರೆ ನಾನು ವಿಷ್ಣುವರ್ಧನ್ ಅಭಿಮಾನಿಯಾಗಿದ್ದುದು.. ಚಲನಚಿತ್ರಗಳಲ್ಲಿ ವಿಷ್ಣು ಸಾಹಸ ಮಾಡುವಂತೆ ನಾನು ಮಾಡಬೇಕೆಂಬ ನನ್ನ ಸೈಕಾಲಾಜಿಕಲ್‌ ಪ್ರಾಬ್ಲಮ್..

ನನ್ನ ಕೈ ಲೈಟ್ನಿಂಗ್ ವೇಗದೊಂದಿಗೆ ಜೇಬಿನೊಳಗೆ ಹೋಗಿ ನೋಟಿನೊಂದಿಗೆ ಹೊರಬಂತು ಅದು ಎಷ್ಟರ ನೋಟು ಎಂಬುದನ್ನು ಸಹಾ ನೋಡಲೋಗದೆ ವೃದ್ದೆಯ ಕೈಯಲ್ಲಿ ಅದನ್ನು ಇಟ್ಟೆ....,

ತಾಯಿ ಮಗುವನ್ನು ಬಚ್ಚಿಟ್ಟುಕೊಳ್ಳುವಂತೆ ಅದನ್ನು ಸೆರಗಿನಲ್ಲಿ ಬಚ್ಚಿಟ್ಟುಕೊಂಡಳು...  ಕಣ್ಣಿನಲ್ಲಿ ಹೊಳಪು... ಸಂತೋಷ..

ಆ ನಗುಮುಖವನ್ನು ಮನಸ್ಸಿನಲ್ಲಿ ತುಂಬಿಕೊಂಡು ಅಲ್ಲಿಂದ ಓಡಿದೆನೋ ಅಥವಾ ನಡೆದೆನೋ ಎನ್ನುವ ರೀತಿಯಲ್ಲಿ  ಗಾಳಿಯಲ್ಲಿ ತೇಲುವಂತೆ ಆಸ್ಪತ್ರೆ ತಲುಪಿದೆ... ಅಪ್ಪನ ವಾರ್ಡಿನತ್ತ ಹೋದೆ...

ಅಪ್ಪ ಅರ್ದ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು..., ನಾಲ್ಕೈದು ನೋಟುಗಳನ್ನು ಮತ್ತು ಸ್ವಲ್ಪ ಚಿಲ್ಲರೆ ಹಣವನ್ನು ಅಪ್ಪನ ಷರ್ಟ್ ಜೇಬಿಗೆ ಅಪ್ಪನಿಗೆ ಚೆನ್ನಾಗಿ ಕಾಣಿಸುವಂತೆ ಮತ್ತು ಶಬ್ದವಾಗುವಂತೆ ಸೇರಿಸಿದೆ...  ಅಪ್ಪನ ‌ಮುಖ‌ ಗೆಲುವಾಯಿತು...!!!

Maruthi Vardhan
***************🌹🌹🌹
ನನ್ನ ಫೇಸ್‌ಬುಕ್‌ ನಿಂದ ತೆಗೆದು ಪ್ರಕಟಿಸಿದ್ದು.

ಹಾಸ್ಯ ಅನುಭವ

ಹಾಸ್ಯ ಅನುಭವ:
ನಾನು ಮಾರುತಿ 10th ಪಾಸ್ ಆಗಿ PUC ಗೆ ಅಡ್ಮಿಷನ್ ಮಾಡ್ಸೋಕೆ ಅಂತ ಗೌರಿಬಿದನೂರಿನ ಆಚಾರ್ಯ ಕಾಲೇಜಿಗೆ ಹೋಗಿದ್ದೆ, ನನ್ನ ಮಾವ ಶಿವಶಂಕರ ಜೊತೆಗೆ ಸಹಾಯ ಮಾಡಲಿಕ್ಕೆ ಬಂದಿದ್ದವನು ಕ್ಲರ್ಕ್ ಬರೋದು ತಡವಾಗಿದ್ದಕ್ಕೆ ಹಿಂಗಿಂಗೆ ಮಾಡು ಎಂದು ಹೇಳಿ ಇನ್ಸಟ್ರಕ್ಷನ್ ಕೊಟ್ಟು ಎಸ್ಕೇಪ್😠 ಆಗಿಬಿಟ್ಟ...,
ನನಗೋ ಅಷ್ಟಾಗಿ ಬುದ್ದಿ ಇರಲಿಲ್ಲ.. (ಈಗ ಬುದ್ದಿ ಇದೆ, ಆದರೆ ನಮ್ಮ ಕುಟುಂಬ ಸದಸ್ಯರು ಇದನ್ನು ಒಪ್ಪುವುದಿಲ್ಲ😠)

ನನಗೆ "ಅಡ್ಮಿಷನ್" ಎಂಬ ಒಂದು ಕೆಲಸ ತುಂಬಾ ದೊಡ್ಡದು.. ಅದರಲ್ಲಿ ಏನೇನೋ ಇರುತ್ತದೆ.. ತುಂಬಾ ಪ್ರೊಸೀಜರ್ ಇರುತ್ತವೆ.. ಈ ಕೆಲಸ ಬಾರಿ ಕಾಂಪ್ಲಿಕೇಟೆಡ್ ಎಂಬ ಅನಿಸಿಕೆಗಳಿದ್ದವು..

 ಹೀಗಾಗಿ ನನಗೆ ತುಂಬಾ ಭಯ ಆಗಿ ಶಿವಶಂಕರನನ್ನು ಬಾಯಿ ಬಂದಂತೆ ಬೈದುಕೊಳ್ಳುತ್ತಾ ಕ್ಲರ್ಕ್ ವೆಂಕಟಸ್ವಾಮಿ ಹತ್ತಿರ ಒಬ್ಬನೇ ಹೋದೆ..,

ಅವರು ನನ್ನನ್ನೊಮ್ಮೆ ನೋಡಿ "ಮಿಡ್ಲಸ್ಕೂಲ್ ಆ ಕಡೆ ಇದೆ ಹೋಗಪ್ಪ..!!"  ಎಂದ.
ನನಗೆ ಮತ್ತಷ್ಟು ಭಯವಾಗಿ ಪಿ....ಯು........ ಸ್..ಸಿ ಎಂದು ತೊದಲಿದೆ..,
ಕ್ಲರ್ಕ್ ವೆಂಕಟಸ್ವಾಮಿ ಒಮ್ಮೆ ಕರೆಂಟ್ ಶಾಕ್ ಹೊಡೆಸಿಕೊಂಡವನಂತೆ ನನ್ನ ಕಡೆ ನೋಡಿ.. ನನ್ನ ಕೈಯಲ್ಲಿದ್ದ ಮಾರ್ಕ್ ಕಾರ್ಡ್, ಟಿ.ಸಿ. ತೆಗೆದುಕೊಂಡು ನೋಡಿ.. ಅದು ನನ್ನದೋ ಅಲ್ಲವೋ  ಕನ್ಫರ್ಮೇಷನ್ ಗಾಗಿ ಸ್ಕೂಲಿನ ಹೆಸರು.. ತಂದೆಯ ಹೆಸರು ಎರಡೆರಡು ಬಾರಿ ಕೇಳಿದ.. ನಾನು ಸರಿಯಾಗಿ ಉತ್ತರಿಸಿದ್ರಿಂದ ಸಮಾದಾನಗೊಂಡು ಎಲ್ಲಾ ಡಾಕ್ಯುಮೆಂಟ್ಸ್ ಮತ್ತು ಪಾಸ್‌ಪೋರ್ಟ್ ಸೈಜಿನ ಫೋಟೋ ತೆಗೆದುಕೊಂಡು, ಫೀಸ್ ಅನ್ನು ಕಟ್ಟಿಸಿ ಕೊಂಡು A- section ಎಂದು ಹೇಳಿ ಹೊರಡಲು ಹೇಳಿದ..,

 ಆ್ಯಕ್ಚುಯಲಿ ನನಗೆ ಎರಡ್ಮೂರು ಫೋಟೊ ಇಸಕೊಂಡು.. ಟಿಸಿ, ಮಾರ್ಕಶೀಟ್ ಅನ್ನು ಎತ್ತಿ ಒಂದು ಸೈಡಿಗೆ ಇಟ್ಟುಕೊಂಡು ಅಡ್ಮಿಷನ್ ಮುಗೀತು ಹೋಗು ಎಂದರೆ ನಾನು ನಂಬಲು ತಯಾರಿರಲಿಲ್ಲ.., ಬದಲಿಗೆ ನನಗೆ ಅಡ್ಮಿಷನ್ ಎಂಬುದು ಒಂದು ಅತಿ ಕ್ಲಿಷ್ಟಕರ ಮತ್ತು ದೊಡ್ಡ ಸಂಗತಿಯಾಗಿದ್ದು ಈ ವೆಂಕಟಸ್ವಾಮಿ ಅದನ್ನು ಮಾಡಿಲ್ಲವೆಂಬುದು ನನಗೆ  ೧೦೦% ಕಾನ್ಫಿಡೆನ್ಸ್ ಇತ್ತು..., ಹೀಗಾಗಿ ನಾನು ನಿಂತಿದ್ದ ಜಾಗದಿಂದ ಕದಲಲಿಲ್ಲ...,

ವೆಂ. ಮತ್ತೇನು.. ಎನ್ನುವಂತೆ ಮುಖ ನೋಡಿದ.., ನಾನು "ಸಾರ್ ಅಡ್ಮಿಷನ್...!!" ಎಂದು ರಾಗ ಎಳೆದೆ...,

 "ಮುಗೀತಲ್ಲಯ್ಯಾ ಹೋಗಯ್ಯಾ...!" ಎಂದು ಗದರಿಸಿದ,

ಅಷ್ಟಕ್ಕೂ ಅವನ ಗದರಿಕೆಗೆ ಹೆದರಿ ಅಲ್ಲಿಂದ ಹೋಗುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ...,
ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದ ಶಿವಶಂಕರ ನನ್ನು ಮನೆಗೆ ವಾಪಸಾದ ಮೇಲೆ ಹೊಡೆದು ಚಚ್ಚಿಹಾಕಬೇಕು ಎಂಬ ಕೋಪದೊಡನೆ, ಇಲ್ಲಿನ ಪರಿಸ್ಥಿತಿ ಕುರಿತು ಭಯವೂ ಆಗಿ ವೆಂ. ಯನ್ನು ಒಪ್ಪಿಸಿ ಅಡ್ಮಿಷನ್ ಅನ್ನು ಮುಗಿಸಿಕೊಂಡು ಹೋಗದಿದ್ದರೆ ನಾನು ಸಾಹಸ ಸಿಂಹ ವಿಷ್ಣುವರ್ಧನ್ ಅಲ್ಲ ಎಂದು ನಿರ್ದಾರ ಮಾಡಿಬಿಟ್ಟಿದ್ದೆ 😯😯😯.

ವೆಂ. ಗೆ ತನ್ನ ಟೈಮ್ ಸರಿಯಿಲ್ಲದಿದ್ದರಿಂದಲೇ ಬೆಳಿಗ್ಗೆ ಬೆಳಿಗ್ಗೆಯೇ ಇವನು ಬಂದು ತಗಲಿ ಹಾಕಿಕೊಂಡಿದ್ದಾನೆಂಬುದು ಸ್ಪಷ್ಟವಾಗಿ ಅರ್ಥವಾದಂತಿತ್ತು..
 ಹಾಗೂ ಈ ಸಮಯದಲ್ಲಿ ಅಡ್ಮಿಷನ್ ಅದೂ ಇದೂ ಅಂತ ರಾಶಿ ಕೆಲಸ ಬೀಳಿಸಿಕೊಂಡಿದ್ದ ವೆಂಕಟಸ್ವಾಮಿಗೆ ನನ್ನನ್ನು ಅಲ್ಲಿಂದ ಕದಲಿಸುವುದು ಕಷ್ಟ ಎಂದು ಅರಿವಾಗಲು ಮುಂದಿನ ಅರ್ದಗಂಟೆ ಸಮಯ ಹಿಡಿಯಿತು...,

ಇದರಲ್ಲಿ ನನ್ನ ತಪ್ಪೇನೂ ಇರಲಿಲ್ಲ.. ಆಗಿನ ನನ್ನ ಅನುಭವ, ಪ್ರಪಂಚ ಜ್ಞಾನ, ಜಾಗರೂಕತೆ ಹಾಗೂ ಮೊಂಡುತನಗಳು ಮತ್ತು ನಾನು ವಿಷ್ಣುವರ್ಧನ್ ಅಭಿಮಾನಿಯಾಗಿದ್ದುದು ಸೇರಿ ನನ್ನನ್ನು ಆ ಮಟ್ಟಿಗೆ ತಯಾರು ಮಾಡಿದ್ದವು..😧😧😧.

 ವೆಂ. ಬೈದು.. ಸಿಡುಕಿ... ಎಗರಾಡಿ... ಕೊನೆಗೆ ಹೊಡೆಯುವುದು ಒಂದನ್ನು ಬಾಕಿ ಉಳಿಸಿಕೊಂಡಿದ್ದ... ಕೊನೆಗೆ ನನ್ನ ಎದುರಿಗೇ ಬಂದು ಅಡ್ಮಿಷನ್ ಮಾಡಿಸಿಕೊಂಡು ಹೋದ ನಾಲ್ಕೈದು ಸ್ಟೂಡೆಂಟ್ಸ್ ಅನ್ನು ಉದಾಹರಣೆಯಾಗಿ ತೋರಿಸಿ ಅಡ್ಮಿಷನ್ ಅಂದರೆ ಇಷ್ಟೆ.. ಎಂದು ಕನ್ವಿನ್ಸ್ ಮಾಡುವಲ್ಲಿ ವೆಂ. ಯಶಸ್ವಿಯಾಗಿ ಬಿಟ್ಟ...

ಅಲ್ಲಿಂದ ನಾನು ನೆಕ್ಸ್ಟ್ ಬಂದಿದ್ದು ಪ್ರಿನ್ಸಿಪಾಲ್ ಚೇಂಬರ್ ಮುಂಭಾಗಕ್ಕೆ.. ಅವರಿಗೂ ಒಮ್ಮೆ ತೋರಿಸಿ ಕನ್ಫರ್ಮ್ ಮಾಡಿಕೊಳ್ಳೋಣ ಎಂದು.., ಆಚಾರ್ಯ ಕಾಲೇಜಿನ ಪ್ರಿನ್ಸಿಪಾಲ್ ರ ಅದೃಷ್ಟವೋ ಅಥವಾ ಮುನ್ಸಿಪಲ್ ಕಾಲೇಜಿನ ಕ್ಲರ್ಕ್ ನ ಅದೃಷ್ಟವೋ ಗೊತ್ತಿಲ್ಲ ಪ್ರಿನ್ಸಿಪಾಲರು ಆವತ್ತು ರಜೆಯಲ್ಲಿದ್ದರು...
 (ಯಾಕೆಂದರೆ ಇವರಿಗೆ ತಲೆಕೆಟ್ಟು ನನ್ನ ಅಡ್ಮಿಷನ್ ಕ್ಯಾನ್ಸೆಲ್ ಮಾಡಿದ್ದರೆ... ನಂತರ  ನಾನು ಅಲ್ಲಿಂದ ಮುನ್ಸಿಪಲ್ ಕಾಲೇಜಿನ ಕ್ಲರ್ಕ್ ನ್ನು ಹುಡುಕಿಕೊಂಡು ಹೋಗಬೇಕಾಗಿತ್ತು...😧.)

So ಆವತ್ತು ಇವರು ರಜೆಯಲ್ಲಿ ಇದ್ದುದರಿಂದ ನಾನು ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನೆ ಹೊರಟು ಹೋದೆನೆಂದು ನೀವು ಭಾವಿಸುವುದಿಲ್ಲ ಎಂದು ನನಗೆ ಗೊತ್ತು..
ನಿಮ್ಮ ಅನಿಸಿಕೆ ಸರಿ... ನಾನು ಅಲ್ಲಿಯೇ ಠಳಾಯಿಸಿಕೊಂಡಿದ್ದೆ..😠😠

 ನನ್ನನ್ನು ನೋಡಿ ಅನುಮಾನಗೊಂಡ ಪಿಒನ್ ಒಬ್ಬನು ಹತ್ತಿರ ಕರೆದು ಏನು ಸಮಾಚಾರ ಎಂದು ವಿಚಾರಿಸಿದ..., ನಾನು ಅ...ಡ್ಮಿ...ಷನ್...... ಎಂದೆ...,

ಅವನು ನನ್ನ ಫೀಸ್ ಕಟ್ಟಿದ್ದ ರಶೀತಿಯನ್ನು ಚೆಕ್ ಮಾಡಿ "ವೆರಿ ಗುಡ್" ಎಂದು ಹೇಳಿದ.. ನಂತರ

" ಅಡ್ಮಿಷನ್ ಆಗಿದೆ ಸೋಮವಾರದಿಂದ ಕಾಲೇಜಿಗೆ ಬಾ... " ಎಂದು ಹೇಳಿದ..

ನಾನು "ಎಲ್ಲಿಗೆ ಬರಬೇಕು " ಕೇಳಿದೆ..

ಇವನನ್ನು ವೆರಿಗುಡ್ ಎಂದಿದ್ದು ತಪ್ಪಾಯಿತೆಂದು ಅವನಿಗೆ ಮನದಟ್ಟಾಯಿತು... ಅವನು ವೆಂಕಟಸ್ವಾಮಿ‌ಯಂತೆ ಮೆದು ಆಸಾಮಿಯಲ್ಲ ... ಸ್ವಲ್ಪ ಚುರುಕು ಬಡ್ಡಿಮಗ...

"ಶಂಕರ್ ಟಾಕೀಸ್ ಗೆ ಬಾ... " ಎಂದು ಹೇಳಿ.. ತನ್ನ ಜೋಕಿಗೆ ತಾನೇ ಜೋರಾಗಿ ನಕ್ಕು "ಇನ್ನೆಲ್ಲಿಗೆ ಬರ್ತೀಯ... ಇದೇ ಕಾಲೇಜು.. ಇಲ್ಲಿಗೆ ಬಾರೋ..." ಎಂದು ಗದರಿದ..

"ಹೆಂಗೆ ಬರಬೇಕು.." ನನ್ನ ಮುಂದಿನ ಪ್ರಶ್ನೆ

ಅವನಿಗೆ ರೇಗಿ ಹೋಯಿತು... "ಕಾಲೇಜಿನ ದೊಡ್ಡ ಕಾಂಪೌಂಡ್ ಗೇಟನ್ನು ತೋರಿಸಿ... ಅದನ್ನು ಎಗರಿ ಬಾ...." ಎಂದನು.

😧😧😧😧😧😧😧😧

ಈಗ ಇದನ್ನೆಲ್ಲಾ ನೆನೆಸಿಕೊಂಡರೆ ನಗು ಬರುತ್ತದೆ... ಆದರೆ ಆ ಸಮಯದಲ್ಲಿ ಭಯ, ಆತಂಕ, ಅಡ್ಮಿಷನ್ ಆಗಿಲ್ಲವೇನೋ ಎಂಬ ದುಗುಡಗಳು ನನ್ನನ್ನು ಹೈರಾಣು ಮಾಡಿದ್ದವು... ಆ ಸಮಯದಲ್ಲಿ ಇವೆಲ್ಲವೂ ನನಗೆ ಖಂಡಿತವಾಗಿಯೂ ಹಾಸ್ಯವಾಗಿರಲಿಲ್ಲ.. ಬದಲಿಗೆ ಕಷ್ಟಕರ ಪರಿಸ್ಥಿತಿಯಾಗಿದ್ದಿತು..

ಅದಕ್ಕೆ ದೊಡ್ಡವರು ಹೇಳಿರುವುದು...

"ಅನುಭವಗಳು ಯಾವತ್ತೂ ಸಿಹಿಯಲ್ಲ ಅವು ಬಹಳ ಕಹಿ..., ಆದರೆ ಈ ಅನುಭವಗಳ ಸವಿನೆನಪು ಬಲು ಸಿಹಿ...❤❤❤" ಎಂದು.

By- Lion
Maruthi Vardhan

ನನ್ನ ಫೇಸ್‌ಬುಕ್‌ ವಾಲ್‌ನ ಲೇಖನದ ಲಿಂಕ್

https://m.facebook.com/story.php?story_fbid=1995894263759413&id=100000165778532

ಲೇಖಕರು:
Maruthi Vardhan
Owner @ Apthamithra Tutorials
& Computer Training & Spoken Languages
Konappana Agrahara
Near Yallamma Temple
Electronic City
Bengaluru.-560100
Mobile-9008453065