Wednesday, January 19, 2011

ಕನ್ನಡ ಚಿತ್ರರಂಗ

ಶ್ರೀಮತಿ ರಾಧಿಕಾರವರು ವಿಷ್ಣುವರ್ಧನ್ ಚಲನಚಿತ್ರವೊಂದಕ್ಕೆ ನಟಿಸಲು ಕೇಳಿದಾಗ ಆ ಅವಕಾಶವನ್ನು ತಿರಸ್ಕರಿಸಿದರು, ಅದು ಅವರ ವೈಯಕ್ತಿಕ..., ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ.

ಆದರೆ ಅದಕ್ಕೆ ಅವರ ಕುಟುಂಬ ಕೊಟ್ಟ ಕಾರಣ ನಿಜವಾಗಿಯೂ ಅಹಂಕಾರದ್ದು... ಅಭಿಮಾನಿಗಳಿಗೆ ಬೇಸರ ನೋವು ತರಿಸುವಂಥದ್ದು ಆಗಿದೆ.

ಮಂಚೆ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಈ ಸುದ್ದಿಯನ್ನು ಓದಿ, ಕೊನೆಯಲ್ಲಿ ನನ್ನ ಉತ್ತರ ಇದೆ.
***

ಮುದುಕರ ಜತೆ ಸರಸವಿದೇನೆ ರಾಧಿಕಾ?

* ಗಣೇಶ್ ಕಾಸರಗೋಡು

ಗುರುವಾರ, ಅಕ್ಟೋಬರ್ 20, 2011, 19:16 [I


ಗಣೇಶ್ ಕಾಸರಗೋಡು

ಗುರುವಾರ, ಅಕ್ಟೋಬರ್ 20, 2011.
www.thatskannada.com ವೆಬ್ಸೈಟ್ ನಲ್ಲಿ...
****


"ಗಣೇಶ್ ಕಾಸರಗೋಡು ಈಗಲೂ ಫೀಲ್ಡ್‌ನಲ್ಲಿ ಇದ್ದಾರಾ? ಅವರು ಪ್ರೆಸ್‌ಮೀಟ್‌ಗಳಿಗೆ ಈಗಲೂ ಬರ್ತಿದ್ದಾರಾ?" ಎಂದು ಕೇಳಿದ್ದು ಒಬ್ಬರು.
ಕೇಳಿಸಿಕೊಂಡವರು 'ಉದಯವಾಣಿ'ಯ ಕಿರಿಯ ಮಿತ್ರ ರವಿಪ್ರಕಾಶ್ ರೈ. ವರದಿ ಒಪ್ಪಿಸಿ ನನ್ನ ಮುಖವನ್ನೇ ದಿಟ್ಟಿಸಿದರು ರೈ.

ನಾನೆಂದೆ: ನೆನಪಿದೆಯಾ ಆಕೆಗೆ? ಮರೆಯುವುದು ಹೇಗೆ ಸಾಧ್ಯ? ರಾಧಿಕಾರವರ, ಮತ್ತು ಆಕೆಯ ಹೆತ್ತವರ ಬಗ್ಗೆ ಒಂದು ಪುಟ್ಟ ಸುದ್ದಿ ಬರೆದಿದ್ದೆ. ಇದು ಎಂಟು ವರ್ಷಗಳ ಹಿಂದಿನ ಮಾತು. ಆಗ ರಾಧಿಕಾ 'ಮಣಿ' ಚಿತ್ರದ ಶೂಟಿಂಗ್‌ಗಾಗಿ ಕಾಸರಗೋಡಿಗೆ ಹೋಗಿದ್ದರು. ಅದು ಯೋಗರಾಜ್ ಭಟ್ಟರ ಮೊದಲ ಚಿತ್ರ. ಕರಿಸುಬ್ಬು ನಿರ್ಮಿಸಿದ ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದದ್ದು ಕರಾವಳಿ ತೀರದಲ್ಲಿ..." ಇಷ್ಟು ಹೇಳುವಷ್ಟರಲ್ಲಿ ರವಿಪ್ರಕಾಶ್ ರೈ ಆಸಕ್ತಿ ಕಳೆದುಕೊಂಡಿದ್ದರು.

ನಾನು ನೆನಪಿನಾಳಕ್ಕೆ ಇಳಿದು ಹೋದೆ. ಎಂಟು ವರ್ಷಗಳ ಹಿಂದೆ ಪ್ರಕಟವಾಗಿದ್ದ ರಾಧಿಕಾ ಬಗೆಗಿನ ಸುದ್ದಿಯ ಸಾರ ಹೀಗಿದೆ: ಛೀ ....ಥೂ...! ಒಮ್ಮೆ ಕ್ಯಾಕರಿಸಿ 'ಥೂ' ಎಂದರು ದೇವರಾಜ್. ಪಕ್ಕವಾದ್ಯ ಎಂಬಂತೆ ಅವರ ಧರ್ಮಪತ್ನಿ ಸುರೇಖಾ ಶಕ್ತಿಮೀರಿ 'ಛೀ' ಎಂದರು. ಈ ದೇವರಾಜ್ ಮತ್ತು ಸುರೇಖಾ ದಂಪತಿಗಳು ಬೇರಾರು ಅಲ್ಲ; ಈಗ ಕನ್ನಡ ಚಿತ್ರರಂಗದಲ್ಲಿ ನಂ.1 ಸ್ಥಾನದಲ್ಲಿರುವ ಕಲಾವಿದೆ ರಾಧಿಕಾ ಅವರ ಹೆತ್ತವರು.

ವಿಷ್ಣು, ರವಿಚಂದ್ರನ್ ಜತೆ ರಾಧಿಕಾ ಅಭಿನಯಿಸಲಿಲ್ಲ ಯಾಕೆ?

ಇವರಿಬ್ಬರೂ ಸೇರಿ ಛೀ...ಥೂ ಅಂದದ್ದು ಯಾರಿಗೆ ಅಂತ ಎಲ್ಲರಿಗೂ ಗೊತ್ತು. ಮಂಗಳೂರಿನ ರೌಡಿಗಳಿಂದ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ಅವರು ಫೂತ್ಕರಿಸುತ್ತಿದ್ದರು. ಸ್ವಲ್ಪ ತಡೆದು ದೇವರಾಜ್ ಮತ್ತೆ ಜಬರ್‌ದಸ್ತಿನಿಂದ ಮತ್ತು ಅಷ್ಟೇ ಆತ್ಮವಿಶ್ವಾಸದಿಂದ ಹೇಳಿದರು: ಮೊದಲಾಗಿದ್ದರೆ ಒಂಟಿಯಾಗಿದ್ದೆ. ಎಂಥಾ ರೌಡಿಸಂನ್ನು ಹೇಗೆ ಮಟ್ಟ ಹಾಕಬೇಕೆಂದು ನನಗೆ ಗೊತ್ತಿದೆ. ಪೋ ಲಿಟಿಷಿಯನ್‌ಗಳ ಪರಿಚಯವಾದ ಮೇಲೆ ತುಂಬಾ ಸುಧಾರಿಸಿಕೊಂಡಿದ್ದೇನೆ. ಯಾರಾದರೂ ಆವಾಜ್ ಹಾಕಿದರೆ ಗಂಟಲು ಹಿಡಿದಿಡುವಷ್ಟು ಶಕ್ತಿ ಬಂದಿದೆ..." ಎಂದು ಹೇಳುತ್ತಾ ಒಮ್ಮೆ ನಾಲಿಗೆಯನ್ನು ಬಿಗಿಯಾಗಿ ತುಟಿಗಳೆಡೆಯಲ್ಲಿ ಬಂಧಿಸಿದರು. ಮತ್ತು ಮುಂದುವರಿದರು: ಈಗ ಅಂಥಾದ್ದೇನಿಲ್ಲ. ಹೆದರಿದರೆ ಹೆದರಿಸುತ್ತಾರೆ, ಹೆದಸಿದರೆ ಹೆದರುತ್ತಾರೆ. ಲೋಕ ಹೀಗಿದೆ. ಹಾಗೆ ಹೆದರಿಸುವವನೇ ಸತ್ತು ಹೋದನಲ್ಲಾ? ಅವನ ಛೇಲಾಗಳ ಬಾಯಿಯೂ ಕಟ್ಟಿ ಹೋಯಿತು..." ಎಂದು ಮಾತು ನಿಲ್ಲಿಸಿ ಮತ್ತೆ ಅಸಹ್ಯದ ಮುಖ ಮಾಡಿಕೊಂಡು ಥೂ ಅಂದರು. ಪಕ್ಕವಾದ್ಯ ಛೀ ಅಂದಿತು!

ತಂಗಾಳಿ ಬೀಸುತ್ತಿತ್ತು. ಎದುರು ಜಲರಾಶಿ. ಸುತ್ತಲೂ ತೆಂಗಿನ ಮರಗಳ ಸಾಲು. ಅದು ಕೇರಳವೆನ್ನಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು? ನೀಲೇಶ್ವರದ ಬೋಟ್‌ಹೌಸ್‌ನ ಮುಂದಿರುವ ಆಫೀಸಿನ ಹಜಾರದಲ್ಲಿ ದಂಪತಿಗಳು ಕುಳಿತಿದ್ದರು. ಬೆಂಗಳೂರಿನ ಧಗೆಯಿಂದ ಪಾರಾಗಿ ಕರಾವಳಿಯ ಕುಳಿರ್ಗಾಳಿಗೆ ಮೈಯೊಡ್ಡಿದ್ದರು.

ಸಲ್ವಾರ್ ಕಮೀಜ್ ಧರಿಸಿದ ಸುರೇಖಾ ಮತ್ತು ಕೆ ಜಿ ಗಟ್ಟಲೆ ಬಂಗಾರದ ಆಭರಣ ಧರಿಸಿದ್ದ ನಲವತ್ತರ ಹರೆಯದ ದೇವರಾಜ್ ಸಮಸ್ಯೆಯ ಮತ್ತೊಂದು ಮುಖವನ್ನು ನಮ್ಮ ಮುಂದೆ ಹರಡಿದ್ದು ಹೀಗೆ: "ಹೊಸಬರ ಜತೆ ನಟಿಸುತ್ತಿರುವ ನಮ್ಮ ರಾಧಿಕಾ ಹೆಸರು ಮಾಡಿದವರ ಜತೆ ಅಭಿನಯಿಸಬೇಕೆಂಬ ಆಸೆಯಿತ್ತು.
ಹೀಗೆ ಯೋಚಿಸುತ್ತಿರುವಂತೆಯೇ ವಿಷ್ಣು ಸಾರ್ ಕಡೆಯಿಂದ ಫೋನ್ ಬಂತು

ಏನೆಂದು ಉತ್ತರಿಸಲಿ?
ರವಿಚಂದ್ರನ್ ಕೂಡ ಕರೆದರು. ಕಳುಹಿಸಿಕೊಟ್ಟರೆ ಮಾರನೇ ಮುಂಜಾನೆಯೇ ಫೋನ್ ಮಾಡಿ ಕಾಲ್‌ಷೀಟ್ ಕೇಳಿದರು. ನೀವೇ ಹೇಳಿ. ನನ್ನ ವಯಸ್ಸು ನಲವತ್ತು. ಅಂದರೆ ರಾಧಿಕಾ ಅಪ್ಪನ ವಯಸ್ಸೇ ನಲವತ್ತಾಗಿರುವಾಗ ಇವರೆಲ್ಲಾ ಅದೇ ರಾಧಿಕಾಳನ್ನು ತಮ್ಮ ನಾಯಕಿಯಾಗುವಂತೆಒತ್ತಾಯಿಸಿದರೆ ನಾವೇನು ಉತ್ತರಿಸೋಣ? 

ಉಪೇಂದ್ರ, ಸುದೀಪ್, ದರ್ಶನ್ ಆಗಿದ್ದರೆ  ಪರ್ವಾಗಿರಲಿಲ್ಲ. ರಾಧಿಕಾಗೆ ಈಗ ಇಪ್ಪತ್ತು ತುಂಬಿತು ಅಷ್ಟೇ. ಈಗಲೇ ಮುದುಕರೊಂದಿಗೆ ನಟಿಸಲು ಒಪ್ಪಿಕೊಂಡರೆ ನಮ್ಮ ಪಾಡೇನು ನೀವೇ ಹೇಳಿ...? ಎಂದು ಹೇಳುತ್ತಾ 'ಥೂ' ಎಂದರು ದೇವರಾಜ್. 'ಛೀ' ಎಂದಿತು ಪಕ್ಕವಾದ್ಯ.

"ಮಗಳ ಸಂಪಾದನೆಯನ್ನು ಬಿಟ್ಟು ನೀವು ಬೇರೇನಾದರೂ ವ್ಯವಹಾರ ಮಾಡಿಕೊಂಡಿದ್ದೀರಾ?" ಎಂಬರ್ಥದ ಪ್ರಶ್ನೆಯನ್ನು ದೇವರಾಜ್‌ಗೆ ಕೇಳಿದಾಗ ಅದರೊಳಗಿನ ವ್ಯಂಗ್ಯ ಅವರಿಗರ್ಥವಾಗಲಿಲ್ಲ.
ಅವರು ಹೆಮ್ಮೆಯಿಂದಲೇ ಉತ್ತರಿಸಿದರು: "ಒಂದು ಹೋಟೆಲು ಮಾಡಬೇಕೆಂದುಕೊಂಡಿದ್ದೇನೆ.

ಅದು ರಾಧಿಕಾ ತಂದೆಯ ಹೋಟೆಲು ಅಂದಾಗ ಜನರ ನಿರೀಕ್ಷೆ ಸಹಜ. ಹೀಗಾಗಿ ಚಿಕ್ಕಪುಟ್ಟ ಹೋಟೆಲು ಮಾಡಲು ಮನಸ್ಸಿಲ್ಲ. ಪಾಶ್ ಆಗಿರಬೇಕು; ಲುಕ್ ಇರಬೇಕು. ಖರ್ಚು ದೊಡ್ಡದಿದೆ. ಈಗ ಕೈಯಲ್ಲಿ ದುಡ್ಡಿಲ್ಲ. ಇದ್ದುದರಲ್ಲಿ ಎರಡು ಕಾರು ಕೊಂಡೆವು. ಹದಿಮೂರು ಸಾವಿರ ರೂಪಾಯಿ ಬಾಡಿಗೆಗೆ ಮನೆ ಮಾಡಿಕೊಂಡೆವು. ಅಂತಸ್ತಿಗೆ ತಕ್ಕ ಹಾಗೆ ಬದುಕ ಬೇಡವೇ ಮನೆ ಕಟ್ಟೋಣವೆಂದರೆ ಕೋಟಿ ಬೇಕು. ಕೋಟಿ ಯಾರಲ್ಲಿದೆ? ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದರೆ ಕೋಟಿ ದುಡಿಯಬಹುದು. ಈಗಾಗಲೇ ಒಂದು ಚಿತ್ರದಲ್ಲಿ ನಟಿಸಿದ್ದಾಳೆ. ಆಫರ್ ಬಂದರೆ ಹೋಗಿ ಅಲ್ಲೇ ಸೆಟ್ಲ್ ಆಗೋಣ ಅಂತಿದ್ದೇವೆ. ಆದ್ರೆ ಶನಿಮಹರಾಯ ಬಿಡಬೇಕಲ್ಲಾ?" ಎಂದು ಪ್ರಶ್ನಿಸುತ್ತಾ ಮತ್ತೆ 'ಥೂ' ಅಂದರು ದೇವರಾಜ್. ಸುರೇಖಾ 'ಛೀ' ಎಂದು ಹೇಳಿ ಪಕ್ಕವಾದ್ಯ ಸೇರಿಸಿದರು!

ಇದೆಲ್ಲಾ ಆಗಿ ವರ್ಷಗಳೇ ಕಳೆದಿವೆ. ಕಾಲ ಬದಲಾಗಿದೆ. ರಾಧಿಕಾರವರೇ ಫೀಲ್ಡ್‌ನಲ್ಲಿಲ್ಲ.

ತೆರೆಯ ಮೇಲಿನ ಅಭಿನಯಕ್ಕೆ ಛೀ, ಥೂ ಎಂದು ಉಗಿದಿದ್ದ ದೇವರಾಜ್ ದಂಪತಿಗಳು ಈಗ ನಿಜ ಬದುಕಿನಲ್ಲಿ ವಯಸ್ಸಾದ ಅಳಿಯನ ಅತ್ತೆ, ಮಾವ ಆಗಿದ್ದಾರೆ.

****
ಅಭಿಮಾನಿಗಳ ಪ್ರತಿಕ್ರಿಯೆ
ಶ್ರೀಮತಿ ರಾಧಿಕರವರು ಡಾ.ಶಿವರಾಜ್ ಕುಮಾರರವರ ಜೊತೆ ತವರಿಗೆ ಬಾ ತಂಗಿ ಚಲನಚಿತ್ರದಲ್ಲಿ ತಂಗಿಯಾಗಿ ನಟಿಸಿ ಗೆಲ್ಲುತ್ತಿದ್ದಂತೆ  ಒಳ್ಳೆಯ ಹೆಸರು ಬಂದಿತು, ತಂಗಿಯ ಪಾತ್ರ ಹೆಚ್ಚು ಜನಪ್ರಿಯತೆ ಗಳಿಸಿತು.
ಇಂಥಹ ಸಂಧರ್ಭದಲ್ಲಿ ವಿಷ್ಣುವರ್ಧನ್ ರವರು ಪಿ. ವಾಸು ರವರ ನಿರ್ದೇಶನ ದಲ್ಲಿ "ಹೃದಯವಂತ" ಎಂಬ ಚಿತ್ರವನ್ನು ಮಾಡುತ್ತಿದ್ದರು,  ಇದು ಸಹಾ ಅಣ್ಣ ಮತ್ತು ತಂಗಿಯ ಅನುಬಂಧಕ್ಕೆ ಸಂಬಂದಿಸಿದ ಕಥೆಯಾಗಿದ್ದು ಚಿತ್ರದಲ್ಲಿ ವಿಷ್ಣು ಗೆ ಜೋಡಿಯಾಗಿ ನಟಿಸಿದ್ದ ನಾಯಕಿ 'ನಗ್ಮಾ" ರವರ ಪಾತ್ರಕ್ಕಿಗಿಂತಲೂ ತಂಗಿಯ ಪಾತ್ರಕ್ಕೆ ಹೆಚ್ಚು ಮಹತ್ವ ಇದ್ದಿತು, ಹೀಗಾಗಿ ರಾಧಿಕರವರನ್ನು ಆ ಪಾತ್ರಕ್ಕೆ ಹಾಕಿಕೊಂಡರೆ ಹೇಗೆ?

ಎಂಬ ವಿಚಾರ ಅವರಲ್ಲಿ ಬಂದು ರಾಧಿಕರವರ ತಂದೆಯನ್ನು ಕಾಂಟ್ಯಾಕ್ಟ್ ಮಾಡಿದರು, ಅವರು ಮೊದಲು ಉದ್ದಟತನ ದ ಉತ್ತರ ನೀಡಿ ಆಮೇಲೆ ಸ್ಸಾರಿ ಕೇಳಿದ್ದು ಆಯಿತು,

ನಂತರ ಹೃದಯವಂತ ಚಿತ್ರದಲ್ಲಿ "ಅನು ಪ್ರಭಾಕರ್" ರವರನ್ನು ಆ ಚಿತ್ರಕ್ಕೆ ಒಪ್ಪಿಸಿ ಚಿತ್ರ ಮೂಡಿ ಬಂತು ,

ವಿಷ್ಣು ರವರು ಸಂಗೀತ ಬಿಜಲಾನಿ ಜೊತೆ "ಪೋಲಿಸ್ ದಾದಾ "ನಲ್ಲಿ ನಟಿಸಿದ್ದಾರೆ. ಹೇಮಮಾಲಿನಿ ಯಾ ಜೊತೆ "ಏಕ ನಯ ಇತಿಹಾಸ್ " ಎಂಬ ಹಿಂಧಿ ಚಿತ್ರದಲ್ಲಿ ನಟಿಸಿದ್ದಾರೆ,
ಅಂತ ಸುಪರ್ ಹಿರೋಹಿನ್ ಜೊತೆ ನಟಿಸಿದ ಸಿಂಹಕ್ಕೆ ಈ  ಇವೆಲ್ಲ ಬೇಕೆ..?
ರವಿಚಂದ್ರನ್‌ರವರ ಜೊತೆ "ಹಠವಾದಿ" ಚಿತ್ರದಲ್ಲಿ ತುಂಬಾ ಇಂಟಿಮೇಟ್ ಅನಿಸುವ ದೃಶ್ಯಗಳಲ್ಲಿ ನಟಿಸುವಾಗ ಏನು ಅನ್ನದ ಅವರ ತಂದೆಯವರು ಈಗ ತಂಗಿಯ ಪಾತ್ರಕ್ಕೆ ಇಷ್ಟೆಲ್ಲಾ ಹೇಳಿ ನಮ್ಮ ಮನಸಿಗೆ ‌ನೋವು ಮಾಡುವ ಅವಶ್ಯಕತೆ ಇತ್ತೇ?





2) CLICK HERE... ! MY VIEWS AFTER AND BEFORE DWARAKISH VISHNUVARDHAN MOVIE CRITICS

No comments:

Post a Comment