Wednesday, November 6, 2019

ಇಬ್ಬರು ಸನ್ಯಾಸಿಗಳು & ಸುಂದರ ತರುಣಿ

ಬ್ರಹ್ಮಚಾರಿ ಶಿಷ್ಯನು ಹುಡುಗಿಯನ್ನು ಹೊತ್ತು ಕೊಳ್ಳ ಬೇಕಾದ ಸಂದರ್ಭ...!
**
ಒಮ್ಮೆ ಬುದ್ಧನ ಪ್ರೀತಿಯ ಶಿಷ್ಯನಾದ ಆನಂದನು ‌ತನ್ನ ಇನ್ನೊಬ್ಬ ಸಹಪಾಠಿ ಯೊಂದಿಗೆ ನದಿಯನ್ನು ದಾಟುತ್ತಿದ್ದ.., ಆ ಸಮಯದಲ್ಲಿ ಒಬ್ಬಂಟಿ‌ ಸುಂದರವಾದ ವಯಸ್ಸಿನ ತರುಣಿಯೊಬ್ಬಳು ಬಂದು ತನ್ನನ್ನು ಸಹಾ ನದಿ ದಾಟಿಸುವಂತೆ ಗೋಗರೆದಳು.., ಆಕೆ ಒಬ್ಬಂಟಿಯಾಗಿದ್ದು ಇವರೇನಾದರೂ ಸಹಾಯ ಮಾಡದೇ ಹೋಗಿದ್ದರೆ ಅಲ್ಲಿಯೇ ಅಳುತ್ತಾ ಕೂರಬೇಕಾಗಿತ್ತು..

ಇವರು ಸನ್ಯಾಸಿಗಳಾಗಿದ್ದುದರಿಂದ ಹೆಣ್ಣನ್ನು ಮುಟ್ಟಿಸಿಕೊಳ್ಳುವಂತಿರಲಿಲ್ಲ ಮತ್ತು ಆ ರೀತಿಯ ವ್ರತವನ್ನು ಪಾಲಿಸುತ್ತಿದ್ದರು... ಹೀಗಾಗಿ ಸಹಪಾಠಿಯು ಸಹಾಯ ಮಾಡಲು ನಿರಾಕರಿಸಿದನು..

ಆದರೆ ಆನಂದನು ಆಕೆಯನ್ನು ಭುಜದ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿಸಿದನು.. ಆಕೆಯು ಧನ್ಯವಾದಗಳನ್ನು ತಿಳಿಸಿ ಹೊರಟುಹೋದಳು..

ಇವರಿಬ್ಬರೂ ಅಲ್ಲಿಂದ ಹೊರಟು ಒಂದು ಊರನ್ನು ಸೇರಿಕೊಂಡು ಅಲ್ಲಿನ ಜನರು‌ ಕೊಟ್ಟ ಬಿಕ್ಷೆಯನ್ನು‌ ಸ್ವೀಕರಿಸಿ ರಾತ್ರಿ ಒಂದು ಧರ್ಮಛತ್ರದಲ್ಲಿ ತಂಗಿದರು...,

ಆನಂದನು ಚೆನ್ನಾಗಿ ನೆಮ್ಮದಿಯ ನಿದ್ದೆ ಮಾಡಿದನು..., ಆದರೆ ‌ಗೆಳೆಯನಿಗೆ ನಿದ್ದೆ ಬರಲಿಲ್ಲ.., ಮನದಲ್ಲಿ ಏನೋ ತಳಮಳ....,  ಮಧ್ಯರಾತ್ರಿಯಲ್ಲಿ ಆನಂದನನ್ನು ಎಬ್ಬಿಸಿ ಈ ರೀತಿ ಕೇಳಿದನು...,

"ಅಲ್ಲಾ ಕಣೋ... ನಾವು ಸನ್ಯಾಸಿಗಳು... ನಾವು ಹೆಣ್ಣನ್ನು ಮುಟ್ಟುವಂತಿಲ್ಲ..., ಆದರೆ ನೀನು ಆ ತರುಣಿಯನ್ನು‌ ಹೊತ್ತುಕೊಂಡಿದ್ದೆಯಲ್ಲ... ಇದು ಸರಿಯೇ.. " ಎಂದು ‌ಕೇಳಿದನು...

ಅದಕ್ಕೆ ಆನಂದನು... " ಹೌದಪ್ಪಾ ನಾನು ಅವಳನ್ನು ‌ಹೊತ್ತುಕೊಂಡಿದ್ದು ನಿಜ... ಆದರೆ ಅವಳನ್ನು ನದಿ ದಾಟಿಸಿದ ನಂತರ ಅಲ್ಲಿಯೇ ಇಳಿಸಿಬಿಟ್ಟೆ......, ಆದರೆ........ ನೀನು‌ ಇನ್ನೂ ಹೊತ್ತುಕೊಂಡೇ ಇದ್ದೀಯಲ್ಲಪ್ಪಾ....!!!!"
ಎಂದು ಉತ್ತರಿಸಿದನು.
**

20 ವರ್ಷಗಳ ಹಿಂದೆ ಚಂದಮಾಮ ಪುಸ್ತಕ ದಲ್ಲಿ ಓದಿದ್ದು..

By-
Maruthi Vardhan



By - ಮಾರುತಿವರ್ಧನ್

No comments:

Post a Comment