Monday, December 9, 2019

The Forbidden Kingdom in English, हिन्दी , తెలుగు., Tamil. English, Hindi, Tamil Telugu

English, हिन्दी , తెలుగు., Tamil.
English, Hindi, Tamil Telugu

The Forbidden Kingdom

Greatest Movie of Jockie Chan & Jetli.

presentation, narration, story representation is the best in the world.

Don't miss the fight between legends at 37.00 minutes

Hindi- https://youtu.be/BJVAnC1MV8A
English - https://youtu.be/qGRHBzEP_oM
HD- https://youtu.be/6upvc7QTAxI
Tamil- https://youtu.be/QukYyzse9Ic
Telugu- https://youtu.be/MbN_KnlPbes













Sunday, December 8, 2019

ಡಾ.ವಿಷ್ಣುವರ್ಧನ್ ಈ ಮಾತನ್ನು ಹೇಳಿದ್ದು ಯಾಕೆ?, "ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈ‌ತೋಟದಲ್ಲಿ ಇದ್ದ ಮಾಲಿ ಅಷ್ಟೇ..!!".

ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈ‌ ತೋಟದಲ್ಲಿ ಕಾವಲ ಇದ್ದ ಮಾಲಿ ಅಷ್ಟೇ" ಎಂಬ ಮಾತು ವಿಷ್ಣುವರ್ಧನ್ ಅವರು ಹೇಳಿದ್ದು ಎಲ್ಲಿ?

**

ಶಶಿಕುಮಾರ್  ಅವರ ಮೊದಲ ಚಿತ್ರ ಚಿರಂಜೀವಿ ಸುಧಾಕರ, ಆದರೆ ಎರಡನೆಯ ಚಿತ್ರವಾದ ಯುದ್ಧಕಾಂಡದಲ್ಲಿ ಅವರು ಸಿನಿಪ್ರಿಯರ ಗಮನ ಸೆಳೆದದ್ದು. ಅದರಲ್ಲಿ  ವಿಲನ್ ಆದರೂ  ಡಾನ್ಸರ್ ಪಾತ್ರ. ಆನಂತರ ಕೆಲವು ಚಿತ್ತಗಳಲ್ಲಿ ವಿಲನ್ ಆಗಿಯೇ ಇದ್ದರು. ಬಳಿಕ ಹೀರೋ ಆಗಿ ಭಡ್ತಿ ಪಡೆದರೂ ಆ ಚಿತ್ರಗಳು ಅಷ್ಟೇನೂ ಸಕ್ಸಸ್ ಆಗಿರಲಿಲ್ಲ. ಆದರೆ ಮಾಲಾಶ್ರೀಯೊಂದಿಗೆ ನಟಿಸಿದ 'ಪೊಲೀಸನ ಹೆಂಡ್ತಿ' ಸೂಪರ್ ಡೂಪರ್ ಆದಾಗ ಅವರು ಜನಪ್ರಿಯ ಆದರು. ಶಸಿ-ಮಾಲಾಶ್ರೀ ಅಂದಿನ ಸೂಪರ ಜೋಡಿಯಾದರು. ಆ ಜೋಡಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದರು. ರೆಡಿಮೇಡ್ ಗಂಡ, ಕನಸಿನ ರಾಣಿ, ರಾಣಿಮಹಾರಾಣಿ, ಕೊಲ್ಲೂರ ಕಾಳ.  ಶಶಿಕುಮಾರ್ ಸುಪ್ರೀಂ ಹೀರೋ ಆಗಿ ಬೆಳೆದರು.

ದುರದೃಷ್ಟವಶಾತ್ ಅವರಿಗೆ ಅಪಘಾತ ಆಯಿತು, ಮುಖದ ಸೌಂದರ್ಯ ಹಾಳಾಯಿತು,

ಇನ್ನೇನು ಎಲ್ಲವೂ ಮುಗಿಯಿತು ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಶಶಿಕುಮಾರ್ ರವರಿಗೆ ಒಂದು ಸುವರ್ಣಾವಕಾಶ ಸಿಕ್ಕಿತು.

 "ಹಬ್ಬ" ಸಿನಿಮಾ. ಈ ಚಿತ್ರ ಸುಪ್ರೀಂ ಹೀರೋ ಜೀವನದಲ್ಲಿ ನಿರೀಕ್ಷೆಗೂ ಮೀರಿ ಬದಲಾವಣೆ ತಂದಿತು. ಡಾ ವಿಷ್ಣುವರ್ಧನ್, ಅಂಬರೀಷ್, ದೇವರಾಜ್, ರಾಮ್ ಕುಮಾರ್ ಮತ್ತು ಶಶಿ ಕುಮಾರ್ ನಟಿಸಿದ ಹಬ್ಬ ಚಿತ್ರವು ಸೂಪರ್ ಹಿಟ್ ಆಯ್ತು. ಅಲ್ಲಿಂದ ಮತ್ತೆ ಶಶಿ ಕುಮಾರ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಆದರು.

ಶಶಿಕುಮಾರ್ ಅವರು ಹಬ್ಬ ಸಿನಿಮಾದಲ್ಲಿ ನಟಿಸಿದ್ದು ಶಶಿಕುಮಾರ್ ಅವರ ಪತ್ನಿಗೂ ಖುಷಿ ಇತ್ತಂತೆ. ಯಾಕೆಂದರೆ, ಈ ಚಿತ್ರದಲ್ಲಿ ಶಶಿಕುಮಾರ್ ನಟಿಸಿದ್ದು ಅವರ ನಿಜ ಜೀವನಕ್ಕೆ ಬಹಳ ಹತ್ತಿರವಾಗಿತ್ತಂತೆ. ಸುಳ್ಳನ್ನೇ ಹೇಳದ ವ್ಯಕ್ತಿ ಪಾತ್ರದಲ್ಲಿ ಹಬ್ಬ ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದರು. 1999 ಏಪ್ರಿಲ್ 16 ರಂದು ಬಿಡುಗಡೆಯಾದ ಹಬ್ಬ ಚಿತ್ರವನ್ನು ಡಿ ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದರು. ಹಂಸಲೇಖ ಸಂಗೀತ ನೀಡಿದ್ದರು.

ಕನ್ನಡದ ನಟ, ಸುಪ್ರಿಂ ಹೀರೋ ಶಶಿಕುಮಾರ್ ಬದುಕಿನಲ್ಲಿ ನಡೆದ ಆ ಅಪಘಾತ ನಟನ ಬದುಕನ್ನೇ ಬದಲಾಯಿಸಿಬಿಟ್ಟತು. 1998 ಜುಲೈ 31 ರಂದು ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಸುಪ್ರೀಂ ಹೀರೋ ಶಶಿ ಕುಮಾರ್ ಅವರ ಕಾರು ಅಪಘಾತವಾಯಿತು.ಆ ಆಕ್ಸಿಡೆಂಟ್‌ನಲ್ಲಿ ನಟ ಶಶಿ ಕುಮಾರ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿ ಮೂಗಿಗೆ ಹೆಚ್ಚು ಡ್ಯಾಮೇಜ್ ಆಯಿತು.

ಸತತ 8 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಒಂದು ಹಂತಕ್ಕೆ ಶಶಿಕುಮಾರ್ ಅವರ ಮುಖದಲ್ಲಿ ಸ್ವಲ್ಪ ಚೇತರಿಕೆಯಾಯಿತು. ಆದರೆ, ಅದರಿಂದ ಶಶಿಕುಮಾರ್ ಅವರಿಗೆ ಡ್ಯಾನ್ಸ್ ಮಾಡೋಕೆ ಆಗಲ್ಲ, ಫೈಟ್ ಮಾಡೋಕೆ ಆಗಲ್ಲ, ಅದೂ ಇದೂ ಎಂದು ಪತ್ರಿಕೆಗಳಲ್ಲಿ ವರದಿಯಾದ ಪರಿಣಾಮ ಯಾವ ಸಿನಿಮಾ ಅವಕಾಶವೂ ಅವರಿಗೆ ಸಿಗಲಿಲ್ಲ.ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಶಿಕುಮಾರ್ ಗೆ ಆಗ ಮದುವೆ ಆಗಿ ಇಬ್ಬರು ಮಕ್ಕಳು ಕೂಡ ಇದ್ದರು.

ವಿಷ್ಣುವರ್ಧನ್ ಅವರ ಜೊತೆ ಉತ್ತಮ ಭಾಂದವ್ಯವಿದ್ದ ಶಶಿಕುಮಾರ್ ಇವರಿಬ್ಬರ ಕಾಂಬಿನೇಶನ್‌ನ ಎಲ್ಲಾ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ.

ಕುಂತೀಪುತ್ರ
ತುಂಬಿದ ಮನೆ
ಹಬ್ಬ
ಯಜಮಾನ
ಸಾಹುಕಾರ

ವಿಷ್ಣುವರ್ಧನ್ ಚಿತ್ರದಲ್ಲಿ ಇದ್ದಾರೆ ಎಂದಕೂಡಲೇ ಆ ಚಿತ್ರಕ್ಕೆ ಕಾಲ್‌ಶೀಟ್ ಕೊಡುತ್ತಿದ್ದರು ಶಶಿಕುಮಾರ್.

**
ಸಾಹುಕಾರ ಚಿತ್ರದ ಒಂದು ಪಾತ್ರಕ್ಕಾಗಿ ನಿರ್ದೇಶಕರು ಇವರನ್ನು ಸಂಪರ್ಕಿಸಿದಾಗ, ಸಾಹುಕಾರನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದರೆ ಮಾತ್ರ ನಾನು ಈ ಚಿತ್ರದ ಜೂನಿಯರ್ ಸಾಹುಕಾರ್ ಪಾತ್ರ ಮಾಡ್ತೇನೆ ಎಂದು ಹಠ ಹಿಡಿದಿದ್ದರಂತೆ ಶಶಿಕುಮಾರ್, ಹೀಗಾಗಿ ರವಿಚಂದ್ರನ್ ಅವರು ‌ದ್ವಿಪಾತ್ರದಲ್ಲಿ ನಟಿಸಬೇಕಾಗಿದ್ದ ಈ ಚಿತ್ರದ ಹಿರಿಯ ತಂದೆಯ ಪಾತ್ರಕ್ಕೆ ವಿಷ್ಣು ಅವರ ಪ್ರವೇಶವಾಯಿತು...
ಈ ಚಿತ್ರದ ವಿಷ್ಣುವರ್ಧನ್ ಪಾತ್ರ ಸೇಮ್ ಟು ಸೇಮ್ ಸಾಯಿಬಾಬಾ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು.

ಹೀಗೆ ರವಿಚಂದ್ರನ್ ಅವರಿಗೆ ಒಂದು ಪಾತ್ರ ತಪ್ಪಿಸಿದ್ದರು, ಹೀಗಾಗಿ ತಂದೆಯ ಪಾತ್ರವನ್ನು ವಿಷ್ಣುವರ್ಧನ್ ಅವರಿಗೆ ಬಿಟ್ಟುಕೊಟ್ಟು ಮಗನ ಪಾತ್ರದಲ್ಲಿ ರವಿಚಂದ್ರನ್ ನಟಿಸಿದರು,

ಅವರ ಮೇಲಿನ ಪ್ರೀತಿಗಾಗಿ ವಿಷ್ಣುವರ್ಧನ್ ಈ ಹಿಂದೆಯೇ ಪ್ರೇಮಲೋಕ, ಯಾರೇ ನೀನು ಚೆಲುವೆ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು..

(ಆ ಕಾಲದಲ್ಲೇ ತಮಿಳು ತೆಲುಗು ಚಿತ್ರಗಳಲ್ಲಿ ನಟಿಸಿದ ಕೆಲವೇ ಕೆಲವು ನಟರಲ್ಲಿ ಶಶಿಕುಮಾರ್ ಕೂಡಾ ಒಬ್ಬರು! - ಪಾಳೇಗಾರ ವಾಸು.

ಶಸಿಕುಮಾರ್ ಒಳ್ಳೆಯ ಡಾನ್ಸರ್ ಕೂಡ. ಅವರ ಮೊದಲ ಚಿತ್ರ ಚಿರಂಜೀವಿ ಸುಧಾಕರ ಆದರೆ ಎರಡನೆಯ ಚಿತ್ರವಾದ ಯುದ್ಧಕಾಂಡದಲ್ಲಿ ಅವರು ಸಿನಿಪ್ರಿಯರ ಗಮನ ಸೆಳೆದದ್ದು. ಅದರಲ್ಲಿ  ವಿಲನ್ ಆದರೂ  ಡಾನ್ಸರ್ ಪಾತ್ರ. ಆನಂತರ ಕೆಲವು ಚಿತ್ತಗಳಲ್ಲಿ ವಿಲನ್ ಆಗಿಯೇ ಇದ್ದರು. ಬಳಿಕ ಹೀರೋ ಆಗಿ ಭಡ್ತಿ ಪಡೆದರೂ ಆ ಚಿತ್ರಗಳು ಅಷ್ಟೇನೂ ಸಕ್ಸಸ್ ಆಗಿರಲಿಲ್ಲ. ಆದರೆ ಮಾಲಾಶ್ರೀಯೊಂದಿಗೆ ನಟಿಸಿದ 'ಪೊಲೀಸನ ಹೆಂಡ್ತಿ' ಸೂಪರ್ ಡೂಪರ್ ಆದಾಗ ಅವರು ಜನಪ್ರಿಯ ಆದರು. ಶಸಿ-ಮಾಲಾಶ್ರೀ ಅಂದಿನ ಸೂಪರ ಜೋಡಿಯಾದರು. ಆ ಜೋಡಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದರು. ರೆಡಿಮೇಡ್ ಗಂಡ, ಕನಸಿನ ರಾಣಿ, ರಾಣಿಮಹಾರಾಣಿ, ಕೊಲ್ಲೂರ ಕಾಳ.  ಶಸಿಕುಮಾರ್ ಸುಪ್ರೀಂ ಹೀರೋ ಆಗಿ ಬೆಳೆದರು. - ಮೊಹಮದ್ ಇಕ್ಬಾಲ್ ಕರಿಂಗಳ.

ಶಶಿಕುಮಾರ್ ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳುವ ಚಿತ್ರ ಅಥವಾ ನಿರ್ದೇಶಕ ಬರಲಿಲ್ಲ, ಹಾಗಾಗಿ ಅವರು ಆರಕ್ಕೇರದೆ ಮೂರಕ್ಕಿಳಿಯದೆ ಇದ್ದು ಬಿಟ್ಟರು.

ಶಶಿ ಎರಡು ನಾಯಕರಿರುವ ಅಥವಾ ಮಹಿಳಾ ಪ್ರಧಾನ ಕತೆಗಳಲ್ಲಿ ಅಭಿನಯಿಸಿದ್ದೇ ಅವರ ಹಿನ್ನಡೆಗೆ ಕಾರಣ,
-GK ಅಡ್ಯಂತಾಯ)

ಅದು ಹೌದು, ಅಭಿಜಿತ್ ಸಹಾ ಹೀಗೆ ಮೂಲೆಗುಂಪಾಗಿದ್ದು.

ಶಶಿಕುಮಾರ್ ಕುಂತೀಪುತ್ರದಲ್ಲಿ ವಿಷ್ಣುವರ್ಧನ್ ಅವರಿಗಿಂತ ಹೆಚ್ಚು ಸ್ಕೋಪ್ ಇದ್ದ ಪಾತ್ರ ಸಿಕ್ಕಿತ್ತು ಇವರಿಗೆ, ಇವರಿಗೆ ಪ್ರಮುಖ ಪಾತ್ರ ನೀಡಿದ್ದ ವಿಷ್ಣುವರ್ಧನ್ ತಮಗೆ ಅನಾವಶ್ಯಕ ಬಿಲ್ಡಪ್ ಕೊಡಲು ಹೋಗಿ ಕಥೆಯನ್ನು ಹಾಳುಮಾಡಬೇಡಿ ಎಂದು ನಿರ್ದೇಶಕರಿಗೆ ಮೊದಲೇ ತಾಕೀತು ಮಾಡಿದ್ದರು, ಹೀಗಾಗಿ ಶಶಿಕುಮಾರ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಮತ್ತು ಪ್ರೇಮಿಯಾಗಿ ಮಿಂಚಿದ್ದರು.

ಅದರಲ್ಲಿ ಬರುವ ಒಂದು ಡೈಲಾಗ್ "ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈ‌ತೋಟದಲ್ಲಿ ಇದ್ದ ಮಾಲಿ ಅಷ್ಟೇ" ಎಂಬ ಡೈಲಾಗ್ ಗಮನ ಸೆಳೆಯುತ್ತದೆ.

ಈ ಬಗ್ಗೆ ಒಮ್ಮೆ ರೂಪತಾರಾದಲ್ಲಿ ನನಗೆ ಸಿಕ್ಕಿರುವ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ವಿಷ್ಣು ಅವರಂಥಹ ನಿಸ್ವಾರ್ಥ ಸಹನಟ ಇದುವರೆಗೂ ಸಿಕ್ಕಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.
ಅಪಘಾತವಾಗದಿದ್ದರೆ ಅವರು ಇನ್ನಷ್ಟು ಒಳ್ಳೆಯ ಚಿತ್ರಗಳಲ್ಲಿ ‌ನಟಿಸುತ್ತಿದ್ದರು....,

ಬೆಸ್ಟ್ ಆಫ್ ಲಕ್ ಶಶಿಕುಮಾರ್ ಸರ್

By
Maruthivardhan

Friday, December 6, 2019

ಗ್ರಾಹಕನ ಬಗೆಗಿನ ಗಾಂಧೀಜಿ ಯವರ ಪುಟ್ಟ ಮನಮುಟ್ಟುವ ಅಭಿಪ್ರಾಯ, Gandhiji's views about a customer

"ಗ್ರಾಹಕನು ನಮ್ಮ ಕಛೇರಿಗೆ ಬರುವ ಬಹಳ ಮುಖ್ಯವಾದ ಅತಿಥಿಯಾಗಿದ್ದಾನೆ.

ಅವನು ನಮ್ಮ ಮೇಲೆ ಅವಲಂಬಿತನಾಗಿಲ್ಲ. ನಾವು ಅವನ ಮೇಲೆ ಅವಲಂಬಿತರಾಗಿದ್ದೇವೆ.
ಅವನು ನಮ್ಮ ಕೆಲಸದಲ್ಲಿ ಅಡ್ಡಿಪಡಿಸುವವನಲ್ಲ - ನಮ್ಮ ಕೆಲಸದ ಉದ್ದೇಶವೇ ಅವನು.

ನಾವು ಅವನಿಗೆ ಸೇವೆ ಸಲ್ಲಿಸುವ ಮೂಲಕ ಅವನಿಗೆ ಉಪಕಾರ ಮಾಡುತ್ತಿಲ್ಲ.
ಬದಲಾಗಿ ಆತನ ಸೇವೆ ಮಾಡಲು ನಮಗೆ ಅವಕಾಶ ನೀಡುವ ಮೂಲಕ ಆತನೇ ನಮಗೆ ಉಪಕಾರ ಮಾಡುತ್ತಿದ್ದಾನೆ.,

 ಆತನು ಇಲ್ಲದಿರುತ್ತಿದ್ದರೆ ನಿನಗೆ ಈ ಹುದ್ದೆಯೂ ಇರುತ್ತಿರಲಿಲ್ಲ, ನಿನಗೆ ಸಂಬಳವೂ ಇರುತ್ತಿರಲಿಲ್ಲ, ನಿನ್ನ ಜೀವನವು ಹಸಿವಿನಿಂದ ಕಳೆಯಬೇಕಾಗಿತ್ತು, ಅದಕ್ಕಾಗಿ ಗ್ರಾಹಕನಿಗೆ ಋಣಿಯಾಗಿರು.

ಅವನು ಬಂದಾಗ‌ ಮುಖ ಸಿಂಡರಿಸಿಕೊಳ್ಳದೆ ಅವನ‌ಕೆಲಸ ಮಾಡಿಕೊಟ್ಟು ನಿನಗೆ ಆ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕಾಗಿ  ಧನ್ಯವಾದ ಹೇಳು.

- ಮಹಾತ್ಮ ಗಾಂಧಿ "

“A customer is the most important visitor on our premises.  He is not dependent on us. We are dependent on him.  He is not an interruption in our work – he is the purpose of it.  We are not doing him a favor by serving him. He is doing us a favor by giving us the opportunity to serve him.

– Mahatma Gandhi”



Tuesday, December 3, 2019

ಸಕ್ಕರೆ ಖಾಯಿಲೆ & ಕ್ಯಾನ್ಸರ್ ಅನ್ನು ಗುಣಪಡಿಸಬೇಕಾದದ್ದು ಹಿಂದೂ ಧರ್ಮವೇ ಅಥವಾ ಆಸ್ಪತ್ರೆಯೇ?


*ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಕ್ಯಾನ್ಸರ್ ಗುಣವಾಗುತ್ತದೆ.

*ಗೋಮೂತ್ರವನ್ನು ಸೇವಿಸುವುದರಿಂದ ಸಕ್ಕರೆ ಖಾಯಿಲೆ ಗುಣವಾಗುತ್ತದೆ ಎಂಬಂಥಹ ಹೇಳಿಕೆಗಳನ್ನು ಕೆಲವರು ಕೊಡುತ್ತಾರೆ,
ಬೇರೆಯವರು ಅದನ್ನು ನೋಡಿ ಉರುಳಾಡಿಕೊಂಡು ನಕ್ಕು ಚರ್ಚೆ ಮಾಡಲು ಬಂದಾಗ ಅವರ ಮೇಲೆ ಜಗಳಕ್ಕೆ ಹೋಗುತ್ತಾರೆ.
ರೋಗಗಳನ್ನು ಗುಣಪಡಿಸುವುದು  ಧರ್ಮದ ಕೆಲಸ ಅಲ್ಲ, ಆದರೂ ಇವರು ರೋಗ ವಾಸಮಾಡುವ ಹೊಣೆಗಾರಿಕೆಯನ್ನು ಅನಾವಶ್ಯಕವಾಗಿ ತಲೆಯ ಮೇಲೆ ಎಳೆದುಕೊಳ್ಳುತ್ತಾರೆ ಮತ್ತು ತಮ್ಮ ಹೊಣೆಯನ್ನು ನಿಭಾಯಿಸಲು ಒದ್ದಾಡಿ, ನಂತರ ಸಫಲತೆ-ವಿಫಲತೆಗಳ ಬಗ್ಗೆ ಚರ್ಚೆಮಾಡಿ ಬಿಪಿ ರೈಸ್ ಮಾಡಿಸಿಕೊಂಡು ಕೂಗಾಡುವುದು ಏಕೆ?
ಸಿಂಪಲ್ ಆಗಿ ಕ್ಯಾನ್ಸರ್ ಅಥವಾ ಷುಗರ್ ಅನ್ನು ಗುಣಪಡಿಸುವುದು ಧರ್ಮದ ಕೆಲಸ ಅಲ್ಲವೆಂಬ ಸತ್ಯವನ್ನು ಜನರಿಗೆ ತಿಳಿಯಪಡಿಸಿ ಆ ಮೂಲಕ ತಾವು ಪ್ರಾಮಾಣಿಕತೆಯನ್ನು ನಿರೂಪಿಸಿ ಜನರ ಎದುರು ದೊಡ್ಡವರಾಗುವ ಕೆಲವನ್ನೇಕೆ ಮಾಡುವುದಿಲ್ಲವೋ ಅರ್ಥವಾಗುತ್ತಿಲ್ಲ.
**
ಇನ್ನೊಂದು ಕಡೆ ಯಾರೋ ಬ್ರೈನ್ ವಾಷ್ ಮತಾಂತರ ಕಂಪನಿಯವರು ಕೊಳಗೇರಿಗಳಲ್ಲಿ ಒಂದು ಬಾಡಿಗೆ ಮನೆಯನ್ನು ಹಿಡಿಯುತ್ತಾರೆ, ಅಲ್ಲಿ ಕೆಳಜಾತಿಗಳನ್ನವರನ್ನೆಲ್ಲ ಗುಂಪುಗೂಡಿಸಿ ಅವರ ತಂದೆ ತಾಯಿ ಅಜ್ಜ ಅಜ್ಜಿ ಆಚರಿಸಿದ್ದ ಆಚರಣೆಗಳನ್ನು ಹೀಗಳೆದು ಬ್ರೈನ್ ವಾಷ್ ಮಾಡುತ್ತಾರೆ ಆಮೇಲೆ ಪ್ರತಿ ಭಾನುವಾರ ಪ್ರಾರ್ಥನೆ ಮಾಡಿಸುತ್ತಾರೆ,  
ಪ್ರಾರ್ಥನೆ ಮಾಡಿಸುವ ಅವನು ಮೈಕ್ ಹಿಡಿದುಕೊಂಡು ಕೈಯನ್ನು ಜಾಡಿಸಿದರೆ ಎದುರುಗಡೆ ಇರುವವರು ಫಿಟ್ಸ್ ಬಂದಂತೆ ಆ್ಯಕ್ಟಿಂಗ್ ಮಾಡಿ ನೆಲಕ್ಕೆ ಬಿದ್ದು ಉರುಳಾಡುತ್ತಾರೆ.
ಮನುಷ್ಯನಾದವನಿಗೆ ಒಂದು ಸಮಸ್ಯೆ ಇರುತ್ತದೆ, ಅದು ಮಂಡಿ ನೋವಿನ‌ ಸಮಸ್ಯೆ, ತಲೆನೋವು ಬರುವುದು, ಕಣ್ಣು ‌ಮಂಜಾಗುವುದು, ಮಾಡಿದ ಕೆಲಸ ಕೈ ಹಿಡಿಯದಿರದಿರುವುದು, ಇನ್ನೂ ಕೆಲವರಿಗೆ ಸತ್ತ ತಮ್ಮ ಬಂಧ ಬಳಗದವರು ಮಾತನಾಡಿಸಿದಂತೆ ಭ್ರಮೆ ಉಂಟಾಗುವುದು ಈ ರೀತಿಯಲ್ಲಿ ಭ್ರಮೆ ಹೊಂದಿ ಮಾನಸಿಕವಾಗಿ ವೀಕ್ ಆಗಿರುವ ಜನರನ್ನು ಪರಿಹಾರ ತೋರಿಸುವ ನೆಪದಲ್ಲಿ ಬ್ರೈನ್ ವಾಷ್ ಮಾಡಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಸುವುದೇ ಇವರ ಕೆಲಸ‌.
ರೋಗ ಗುಣಪಡಿಸಿದ್ದೇವೆಂಬ ಭ್ರಮೆ ಉಂಟುಮಾಡುತ್ತಾರೆ.
**
ಇನ್ನೊಂದು ಕಡೆ ನಮ್ಮ ದೇವರೇ ಸರ್ವಸ್ವ, ನಮ್ಮ ದೇವರನ್ನು ನಂಬದ ಮತ್ತು ಬೇರೆ ಯಾವುದೇ ದೇವರನ್ನು ಪೂಜಿಸುವ ಜನರಿಗೆ ನರಕದಲ್ಲಿ ಫ್ರೈ ಮಾಡಲಾಗುತ್ತದೆ ಎಂದು ನಂಬಿಸಲಾಗುತ್ತದೆ. (ಎಲ್ಲರೂ ಅಲ್ಲ, ಕೆಲ‌ ಮತಾಂಧರು ಮಾತ್ರ, ಅದೃಷ್ಟವಶಾತ್ ಅವರ ಸಂಖ್ಯೆ ಕಡಿಮೆ ಇದೆ)
ಬೇರೆ ದೇವರ ಅನುಯಾಯಿಗಳನ್ನು ಕೊಂದರೆ ಮೇಲೆ ಸ್ವರ್ಗದಲ್ಲಿ ಉತ್ತಮ ಸ್ಥಾನಮಾನಗಳನ್ನು ಕೊಡಲಾಗುತ್ತದೆ ಎಂದು ನಂಬಿಸಿ..‌ ಅವನಿಗೆ ಬಾಂಬ್ ಕಟ್ಟಿ ಸೂಸೈಡ್ ಬಾಂಬರ್ ಆಗಿ ಬದಲಾಯಿಸಿ ಮಾರ್ಕೆಟ್, ಬಸ್ಟಾಂಡ್ ಈ ರೀತಿಯ ಜನನಿಬಿಡ ಸ್ಥಳಗಳಲ್ಲಿ ಬ್ಲಾಸ್ಟ್ ಮಾಡಿಕೊಳ್ಳುವಂತೆ ಬ್ರೈನ್ ವಾಷ್ ಮಾಡಲಾಗುತ್ತದೆ, ಪಾಪ ಈ ಜನ್ಮದಲ್ಲಿ ಮನುಷ್ಯನಾಗಿ ಜನಿಸಿದ್ದ ಇವನು ಅಷ್ಟೊಂದು ಸೂಸೈಡ್ ಬಾಂಬಿಂಗ್‌ನಲ್ಲಿ ಎಷ್ಟೋ ಮುಗ್ಧ ಜನರ ಕೊಂದ ಪಾಪಕ್ಕಾಗಿ ನಾಯಿಯಾಗಿಯೋ ಹಂದಿಯಾಗಿಯೋ ಮುಂದಿನ ಜನ್ಮದಲ್ಲಿ ಹುಟ್ಟುತ್ತಾನೆ...
**
#ಉಪಸಂಹಾರ:
ಹಿಂದೂ ಧರ್ಮ ಒಂದು ಜೀವನ ವಿಧಾನ, ಜಗತ್ತಿನ ಜನರು ಗೌರವಿಸುವ ಏಕೈಕ ಶಾಂತಿ ಧರ್ಮ, ಸುಮಾರು ೧೦೦೦೦ ವರ್ಷಗಳ ಇತಿಹಾಸದಲ್ಲಿ ಭರತಖಂಡವು ಯಾವೊಬ್ಬ ದೇಶದ ಮೇಲೂ ತಾನಾಗಿ ದಂಡೆತ್ತಿ ಹೋಗಿಲ್ಲ, ಇತರರು ತನ್ನ ಮೇಲೆ ದಾಳಿಮಾಡಿದಾಗ ಸ್ವರಕ್ಷಣೆ ಮಾಡಕೊಂಡಿದೆ ಅಷ್ಟೇ.
ಆದರೆ ಕ್ಯಾನ್ಸರ್, ಸಕ್ಕರೆ ಖಾಯಿಲೆ ಇವು ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುವ ಹೆಚ್ಚು ನಿಗಾವಹಿಸಬೇಕಾದ ಖಾಯಿಲೆಗಳು, ಈ ರೋಗಿಗಳು ವೈದ್ಯರ ನಿರ್ದೇಶನದಂತೆ ನಡೆಯಬೇಕಾಗುತ್ತದೆ, ಹಾಗಿದ್ದಾಗ ಮಾತ್ರ ಸಾಮಾನ್ಯರಂತೆ ಜೀವನ‌ನಡೆಸಬಲ್ಲರು, ಇಲ್ಲದಿದ್ದರೆ  45-50ವಯಸ್ಸಿನಲ್ಲಿ ಸಾವಿಗೀಡಾಗುವರು, ಅವರನ್ನೇ ನಂಬಿಕೊಂಡ ಕುಟುಂಬದ, ಪತ್ನಿಯ ಗತಿಯೇನು? ಆಕೆ ಒಬ್ಬಂಟಿಯಾಗಿ ತನ್ನ ಜೀವನ ಸವೆಸಬೇಕೆ?
ಹಿಂದೂ ಧರ್ಮ ಕಾಯಿಲೆಗಳನ್ನು ವಾಸಿ ಮಾಡುವ ಆಸ್ಪತ್ರೆ ಅಲ್ಲ, ಇದು ಅದರ ಕರ್ತವ್ಯದ ಪರಿಧಿಯಲ್ಲಿ ಬರುವುದಿಲ್ಲ ಅಥವಾ ಕರ್ತವ್ಯದ ಭಾಗವೂ ಅಲ್ಲ, ಅಥವಾ ಯಾವುದೇ ಖಾಯಿಲೆಗೆ ಔಷದಿ ಕೊಡಲಿಲ್ಲವೆಂಬ ಕಾರಣಕ್ಕಾಗಿ ಹಿಂದೂಧರ್ಮವನ್ನು ತಿರಸ್ಕರಿಸಲೂ ಸಾದ್ಯವಿಲ್ಲ,
ಜನರು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿ ಯಶಸ್ಸಿಗಾಗಿ ದೇವರಲ್ಲಿ ಯಶಸ್ಸಿಗಾಗಿ‌ ಮೊರೆಯಿಡಬಹುದು, ಆದರೆ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಅಂದುಕೊಳ್ಳುವುದು ತಪ್ಪು, ವೈದ್ಯರ ಭೇಟಿಯ ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ...., ಯಾರೋ ಒಬ್ಬ ಢೋಂಗಿ ಗುರೂಜಿ ಹೇಳಿದಂತೆ ಗೋಮೂತ್ರ ಕುಡಿದು ಸುಮ್ಮನಿದ್ದರೆ ಕ್ಯಾನ್ಸರ್ ಉಲ್ಭಣಿಸುತ್ತದೆ, ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ,
ಸಾಮಾನ್ಯವಾಗಿ ಇಂತಹ ಗುರೂಜಿಗಳು ರೋಗದ ಗುಣಕ್ಕಾಗಿ ಯಾಗ, ಯಜ್ಞ ಮಾಡಿಸುವುದು... ಸಾಕಷ್ಟು ಹಣ ಖರ್ಚು ಮಾಡಿಸುತ್ತಾರೆ.
ಇಂಥಹವರು ಧರ್ಮದ ಹೆಸರಿನಲ್ಲಿ ಜನರೆ ತಪ್ಪುದಾರಿಗೆ ಎಳೆದಾಗ ನಾವು ಅವರನ್ನು ವಿರೋಧಿಸಬೇಕು, ಇದೇ ನಿಜವಾದ ಧರ್ಮ ರಕ್ಷಣೆ, ಇದೇ ನಿಜವಾದ ಹಿಂದುತ್ವ.
ಒಂದು ವೇಳೆ ಪ್ರೋತ್ಸಾಹ ಕೊಟ್ಟರೆ ಅಥವಾ ಕಮೀಷನ್ ತೆಗೆದುಕೊಂಡರೆ ಅದು ಸ್ವಾರ್ಥ ಮತ್ತು ನಕಲಿ ಹಿಂದುತ್ವ.
***
ಸತಿಸಹಗಮನ ಪದ್ದತಿ ಈ ಹಿಂದೆ ಇತ್ತು, ಈಗ ಇಲ್ಲ, ರಾಜಾರಾಮ್ ಮೋಹನ ರಾಯ್, ದಯಾನಂದ ಸರಸ್ವತಿ ರವರು ಬ್ರಿಟೀಷರ ಕಾಲದಲ್ಲಿ ಅದರ ವಿರುದ್ಧ ಹೋರಾಡಿ ಸತಿನಿಷೇದ ಕಾನೂನು ತಂದರು.., ಒಂದು ಕಾಲದಲ್ಲಿ ಸತಿಸಹಗಮನ ಪದ್ದತಿಯನ್ನು ಸಮರ್ಥಿಸುತ್ತಿದ್ದ ಮಡಿವಂತ ಹಿಂದುಗಳೇ ಇಂದು ವಿರೋಧಿಸಿದ್ದಾರೆ, ಇದು ನಿಜವಾದ ಹಿಂದುವಿನ ಲಕ್ಷಣ.
ಬಾಲ್ಯವಿವಾಹ ಇತ್ತು ಈಗ ಇಲ್ಲ, ಮಡಿವಂತರೇ ಇದನ್ನು ಹೊಗಟ್ಟಿದ್ದಾರೆ..., ಇದು ನಿಜವಾದ ಬದಲಾವಣೆ.
ಎಲ್ಲಾ ಧರ್ಮಗಳಲ್ಲಿ ದೋಷಗಳು ಇವೆ, ಆದರೆ ದೋಷಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುವ ಕ್ರಮ ಯಾರೂ ತೆಗೆದುಕೊಂಡಿಲ್ಲ...
ಬದಲಾವಣೆ ಪ್ರಕ್ರಿಯೆಗೆ ಒಳಗಾದ ಏಕೈಕ ಧರ್ಮ ನಮ್ಮದೇ ಹಿಂದೂ ಧರ್ಮ.
ಯಾವ ಆಚರಣೆಗಳಿಂದ ಜನರಿಗೆ‌ ಕೆಡುಕುಂಟಾಗುವುದಿಲ್ಲವೋ ಅದು ಮೂಢನಂಬಿಕೆಯಾದರೂ ಸಹಾ ಅದಕ್ಕೆ ನನ್ನ ಬೆಂಬಲವಿದೆ...,
ಆದರೆ ಯಾವ ಆಚರಣೆಯ ಹೆಸರಿನಲ್ಲಿ ತೊಂದರೆ ಉಂಟಾಗುವುದೋ ಅದಕ್ಕೆ ಸಹಮತವಿಲ್ಲ.
ನಾಸ್ತಿಕರು ವಿರೋದಿಸುವ..., ಆದರೆ ನಾನು ಸಮರ್ಥಿಸುವ ಪೂಜೆ, ಅಭ್ಯಂಜನ, ಜಾತ್ರೆ, ತೇರು, ಭೂತಕೋಲ, ಮೆರವಣಿಗೆ, ಸಂಸ್ಕೃತಿಗಳ ಆಚರಣೆ ಇವೆಲ್ಲವನ್ನೂ ನಾನು ವೈಯಕ್ತಿಕವಾಗಿ ನಂಬುತ್ತೇನೆ... ಏಕೆಂದರೆ ಈ ಆಚರಣೆಗಳಿಂದ ಯಾರಿಗೂ ಕೆಡುಕಾಗುವುದಿಲ್ಲ..., ಹಣ ಖರ್ಚಾದರೆ ನಮ್ಮದೇ ಹೋಗಲಿ ಸ್ವಲ್ಪ ಖುಷಿ ನೆಮ್ಮದಿ ಸಿಗುತ್ತದೆ..., ಮತ್ತು ಈ ಆಚರಣೆಗಳಿಂದ ನೆಮ್ಮದಿ, ಖುಷಿ ಸಿಗುತ್ತದೆ.
"ಸಕ್ಕರೆ ಕಾಯಿಲೆ, ಕ್ಯಾನ್ಸರ್ ಅನ್ನು ವಾಸಿಮಾಡಬೇಕಾದದ್ದು ಹಿಂದೂಧರ್ಮದ ಕರ್ತವ್ಯವೋ?
by
Maruthi Vardhan

"ಹಾಲು, ಅಭಿಷೇಕ, ಹಾರ ವ್ಯರ್ಥವೇ!", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/6LEhMSLmW031?utm_source=android&utm_campaign=content_share
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ"
ಮಾಂಸಾಹಾರ ತಿಂದಿದ್ದ ವಿದ್ಯಾರ್ಥಿ ಪೂಜೆ ಮಾಡಲು ನಿರಾಕರಿಸಿದ್ದೇಕೆ...?", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/etjv9kgvg9y9?utm_source=android&utm_campaign=content_share
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
By - Maruthi Vardhan






Wednesday, November 6, 2019

ಅನಿರುದ್ದ್ ಯಾಕೆ ಇಷ್ಟ ಆದರು, ಅವರ ಸಾಧನೆಯಿಂದ ಅಲ್ಲ.. ಅವರ ಬಿಹೇವಿಯರ್ ಇಂದ..!! ಜೊತೆ ಜೊತೆಯಲಿ zee ಜೀ ಕನ್ನಡ

ಈ ಧಾರಾವಾಹಿಯಂತೂ ಧಾರಾವಾಹಿಯ ತರಹ ಖಂಡಿತಾ ಇಲ್ಲವೇ ಇಲ್ಲ, ಸಿನಿಮಾಗಿಂತ ವೇಗವಾದ ನಿರೂಪಣೆ ಇದೆ, ಎಲ್ಲವೂ ಫಾಸ್ಟ್... ಫಾಸ್ಟ್...!!, ಇತರೆ ಧಾರಾವಾಹಿಗಳಂತೆ ಇಲ್ಲಿ ದೃಶ್ಯಗಳನ್ನು ಎಳೆದು ಪದೇಪದೇ ತೋರಿಸುವುದೇ ಇಲ್ಲ... ಇದು ಇದರ ಒಂದು ಪ್ಲಸ್ ಪಾಯಿಂಟ್ ಆಗಿದೆ.

ಮತ್ತು ಇದು ಕಾಂಜೀಪೀಂಜಿ ಕಥೆಯಂತೂ ಖಂಡಿತಾ ಅಲ್ಲವೇ ಅಲ್ಲ...!!, ತುಂಬಾ ಪವರ್‌ಫುಲ್ ಕಥೆ.

ಒಬ್ಬ ಕಾರ್ಪೊರೇಟ್ ಜಗತ್ತಿನ ಸಕ್ಸಸ್‌ಫುಲ್ ಬಿಸಿನೆಸ್ ಮ್ಯಾನ್ ಮತ್ತು ಕಿರಿವಯಸ್ಸಿನ ಹುಡುಗಿಯ ನಡುವೆ ಉಂಟಾಗುವ ಭಾವನಾತ್ಮಕ ತಾಕಲಾಟ.

ವಯಸುಗಳ ನಡುವೆ ಮನಸುಗಳ ಮದುವೆ.

ಅವರ ಒಂದು  ಸಂದರ್ಶನ ಮತ್ತು ಕೆಲವು ಎಪಿಸೋಡ್  ನೋಡಿ ಹೃದಯ ತುಂಬಿ ಬಂದಿತು, ಅನಿರುದ್ದರವರು ಥೇಟ್ ಡಾ.ವಿಷ್ಣುವರ್ಧನ್‌ರವರೇ ಆಗಿ ಹೋಗಿದ್ದಾರೆ, ವಿಡಿಯೋ ನೋಡಿದ ನಂತರ ನೀವು ಈ‌ ಮಾತನ್ನು ೧೦೦% ಒಪ್ಪಿಕೊಳ್ತೀರಾ... ಚಾಲೆಂಜ್...!!

ಆರ್ಯವರ್ಧನ್ ಇಲ್ಲಿ ನಮಗೆ ಕಾಣಿಸುವುದು ಖಂಡಿತಾ ವಿಷ್ಣು ಛಾಯೆ.

ಏನೇ ಆದರೂ ನ್ಯಾಯದ ಪರ ನಿಲ್ಲುವುದು, ಹೆಣ್ಣುಮಕ್ಕಳನ್ನು ಗೌರವಿಸುವುದು.., ಆಶಕ್ತರ ಪರ ಯೋಚಿಸುವುದು.., ಅವರ ಗ್ರೇ ಕಲರ್ ಗಡ್ಡ, ಆ ಅಭಿನಯ..., ವಿಷ್ಣುವರ್ಧನ್ ಅವರನ್ನು ನೆನಪಿಸುವ ಉಡುಗೆ ತೊಡುಗೆಗಳು.

ಧಾರಾವಾಹಿ ಇದುವರೆಗಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಹೊಸ ದಾಖಲೆ ನಿರ್ಮಿಸಿದೆ.

ಇದುವರೆಗೂ ಒಮ್ಮೆಯೂ ಧಾರಾವಾಹಿ ನೋಡದವರು.., ಧಾರಾವಾಹಿಗಳನ್ನು ದ್ವೇಷಿಸುವವರು..., (ನನ್ನನ್ನೂ ಸೇರಿಸಿ) ಪ್ರತಿದಿನವೂ ಮರೆಯದೆ ನೋಡುವ ಮೊದಲ ಧಾರಾವಾಹಿ "ಜೊತೆ ಜೊತೆಯಲ್ಲಿ"

ಅನಿರುದ್ದ್ ಅವರನ್ನು ಜನರು ಈಗ ಆರ್ಯವರ್ಧನ್ ಎಂದೇ ಗುರುತಿಸುತ್ತಾರೆ, ಸಾವಿರಾರು ಹುಡುಗಿಯರು ಮಾತ್ರವಲ್ಲದೆ ಹುಡುಗರು ಸಹಾ ಇವರಿಗೆ  ಅಭಿಮಾನಿಗಳು ಆಗಿದ್ದಾರೆ.

ಪ್ರತಿದಿನವೂ ಮೆಸೇಜ್, ಚಾಟ್ ಮಾಡುತ್ತಿದ್ದಾರೆ... ಸತಿ ಹೆಚ್ಚಿನ ಟಿಆರ್‌ಪಿ ಗಳಿಸುವ ಮೂಲಕ ಸಿನಿಮಾಗಿಂತಲೂ ಹೆಚ್ಚಿನ ಲಾಭ ಗಳಿಸುತ್ತಿದೆ.. Zee ಕನ್ನಡದ ಈ ಧಾರಾವಾಹಿ.

ಆದರೆ ಕೆಲವು ಸೋ ಕಾಲ್ಡ್  ಡಬಲ್ ಸ್ಟಾಂಡರ್ಡ್ ವಿಷ್ಣು ಅಭಿಮಾನಿಗಳು  ತಮ್ಮ ಸ್ವಾರ್ಥಗಳಿಗಾಗಿ ವಿಷ್ಣು ಅಣ್ಣನ ಹೆಸರನ್ನು ಗುತ್ತಿಗೆಗೆ ತೆಗೆದುಕೊಂಡಂತೆ ವರ್ತಿಸುವ ಸ್ಟಾರ್‌ಗಳ ಚಿತ್ರಗಳಿಗೆ ಹರಕೆ, ಹಾರೈಕೆಗಳ ಲೇಖನ ಮಾಲೆಗಳನ್ನೇ ಅರ್ಪಿಸುತ್ತಿದ್ದೀರ..., ಆದರೆ ವಿಷ್ಣು ಅಣ್ಣನ ಕುಟುಂಬದ ಕುಡಿಯಾದ ಅನಿರುದ್ದರವರು ಈ ಮಟ್ಟಿಗೆ ಯಶಸ್ಸು ಗಳಿಸಿದ್ದರೂ ಒಂದು ಚಿಕ್ಕ ವಿಶ್ ಕೂಡಾ ಮಾಡದೆ ಬಾಯಿಗೆ ಬೀಗಹಾಕಿಕೊಂಡಂತೆ ವರ್ತಿಸುತ್ತಿರುವುದು... ನಿಜಕ್ಕೂ ದುಃಖ ಕೋಪ ಉಂಟುಮಾಡುತ್ತದೆ.

ನೀನೆಲ್ಲೋ ನಾನೆಲ್ಲೋ ಎಂಬ ದಿನೇಶ್‌ಬಾಬು ನಿರ್ದೇಶನದ ಚಲನಚಿತ್ರವೊಂದರಲ್ಲಿ ಇವರ ಅಭಿನಯ ನೋಡಿ ನನಗೆ ಕೆಟ್ಟಕೋಪವೇ ಬಂದುಬಿಟ್ಟಿತ್ತು... ಯಾಕೆಂದರೆ ಆ ಚಿತ್ರದಲ್ಲಿ ವಿಷ್ಣುವರ್ಧನ್ ಸಹಾ ನಟಿಸಿದ್ದರು.... ಆದರೆ ಇವರು ಅಭಿನಯದಲ್ಲಿ ಸಿಂಹವನ್ನು ಮೀರಿಸಿಬಿಟ್ಟಿದ್ದರು.

ಜೊತೆಗೆ ಅನಿರುದ್ದ್ ಅವರು ಸಾಕಷ್ಟು ಮಾಗಿದ್ದಾರೆ ಅವರು ಮಾತಿನ ಚಾಚಕ್ಯತೆ, ವಿನಯ, ಡೌನ್ ಟು ಅರ್ತ್ ಬಿಹೇವಿಯರ್, ಅವರ ಜ್ಞಾನ ಕೌಶಲ್ಯ, ಉಡುಪು, ಅಭಿನಯ ಅವರನ್ನು ಖಂಡಿತಾ ವಿಷ್ಣು ವರ್ಧನ್ ಅವರ ಉತ್ತರಾಧಿಕಾರಿಯಾಗಿ ಮಾಡಿವೆ.

ಸಿಂಹದ ಅಳಿಯ ಎಂದರೆ ಹೀಗಿರಬೇಕು.

ಅನಿರುದ್ದರವರು ಎಷ್ಟು ಮೆಚ್ಯೂರ್ಡ್ ಆಗಿದ್ದಾರೆಂಬುದಕ್ಕೆ ಅವರ ವಿನಯವಂತಿಕೆ ಈ ಸಂದರ್ಶನ ನೋಡಲೇಬೇಕು.

1) ವಿಡಿಯೋ 1 - News first ಸಂದರ್ಶನ.
 ಸಂದರ್ಶನ ವಿಷ್ಣು ಅಭಿಮಾನಿಗಳಿಗೆ ಸಕ್ಕತ್ ಖುಷಿ‌ಕೊಡುತ್ತದೆ..‌ , ಈ ಸಂದರ್ಶನ ಅವರ ವಿನಯವಂತಿಕೆ, ಸಂಸ್ಕೃತಿಗಳ, ವಿಷ್ಣುವರ್ಧನ್ ನೆರಳಿನ ಪರಿಚಯವಾಗುತ್ತದೆ,  ಆರ್ಯವರ್ಧನ್ ಅಭಿಮಾನಿಯನ್ನಾಗಿ‌‌ ಮಾಡುತ್ತದೆ.

https://m.facebook.com/newsfirstkannada/videos/563351467738877/

2) ವಿಡಿಯೋ 2 - ಧಾರಾವಾಹಿಯ ಒಂದು ಅದ್ಭುತ ಎಪಿಸೋಡ್ - ವ್ಯಕ್ತಿಯ ಸೆಕ್ಯೂರಿಟಿ ಪೋಸ್ಟಗಿಂತ ಅವನ‌ ಪ್ರಾಮಾಣಿಕತೆ ಗೆ ಬೆಲೆ ಕೊಟ್ಟ ಆರ್ಯವರ್ಧನ್
https://m.facebook.com/story.php?story_fbid=2413689865405151&id=378024258971732

3)ವಿಡಿಯೋ 3 - ಮತ್ತೊಂದು ಅತ್ಯದ್ಭುತ ಎಪಿಸೋಡ್.- ಕಾರ್ಖಾನೆಯಲ್ಲಿ ನಡೆಯುತ್ತಿರುವ ಅನ್ಯಾಯ ತಡೆಯಲು ಆರ್ಯವರ್ಧನ್ ಮಾಡಿದ್ದೇನು?
https://www.facebook.com/zeekannadatv/videos/1697207790409517/

4)ವಿಡಿಯೋ 5 -  ಮೂಕಿ ಹುಡುಗಿಯೊಬ್ಬಳು ತನಗೆ ಮಾತು ಬರದಿದ್ದರೂ ತನ್ನ ಮೂಕಭಾಷೆಯಲ್ಲಿ ಇವರ ಅಭಿಮಾನಿ ಯಾಗಿದ್ದನ್ನು ಹಂಚಿಂಡ ಭಾವನಾತ್ಮಕ zee TV ಕಾರ್ಯಕ್ರಮ ವಿಡಿಯೋ
https://www.facebook.com/100013852066563/posts/761866097618452/
ಅದರ ಲೇಖನ
https://tinyurl.com/yyhy9egb

6) ವಿಡಿಯೋ 6 - ಗುಡು ಗುಡುಗುವ ಸಿಂಹ ಹಾಡು &  ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಹಾಡಿಗೆ ಆರ್ಯವರ್ಧನ್ ಮತ್ತು ಅನು ನೃತ್ಯ
https://www.facebook.com/378024258971732/posts/2489155641191906/

7) ಅನಿರುದ್ದ್ ಸಿಂಹನ ಅಫಿಷಿಯಲ್ ಫೇಸ್‌ಬುಕ್‌ ಪೇಜ್‌
https://www.facebook.com/Anirudhofficialpage/

ಮತ್ತೊಮ್ಮೆ ಹೇಳುತ್ತೇನೆ ವಿಷ್ಣುವರ್ಧನ್ ಅವರ ಉತ್ತರಾಧಿಕಾರಿ ಅನಿರುದ್ದ್ ಮಾತ್ರ, ಇನ್ಯಾರು ಆಗಲು ಸಾದ್ಯವಿಲ್ಲ.., ಸಾಹಸಸಿಂಹ ತನ್ನ ಅಳಿಯನನ್ನು ಆಯ್ಕೆ ಮಾಡುವ ವಿಷಯದಲ್ಲಿ ಒಳ್ಳೆಯ ದಕ್ಷ ನಿರ್ಧಾರ ತೆಗೆದುಕೊಂಡು ಗೆದ್ದಿದ್ದಾರೆ ಎಂದು ಈಗ ಅರ್ಥವಾಗುತ್ತಿದೆ..

ನಿಮಗೆ ಹೀಗೆ ಯಶಸ್ಸು ಸಿಗುತ್ತಿರಲಿ... ಅನಿರುದ್ದ್ ಸರ್... ಬೆಸ್ಟ್ ಆಫ್ ಲಕ್...!!


By
Maruthi Vardhan

ಇಬ್ಬರು ಸನ್ಯಾಸಿಗಳು & ಸುಂದರ ತರುಣಿ

ಬ್ರಹ್ಮಚಾರಿ ಶಿಷ್ಯನು ಹುಡುಗಿಯನ್ನು ಹೊತ್ತು ಕೊಳ್ಳ ಬೇಕಾದ ಸಂದರ್ಭ...!
**
ಒಮ್ಮೆ ಬುದ್ಧನ ಪ್ರೀತಿಯ ಶಿಷ್ಯನಾದ ಆನಂದನು ‌ತನ್ನ ಇನ್ನೊಬ್ಬ ಸಹಪಾಠಿ ಯೊಂದಿಗೆ ನದಿಯನ್ನು ದಾಟುತ್ತಿದ್ದ.., ಆ ಸಮಯದಲ್ಲಿ ಒಬ್ಬಂಟಿ‌ ಸುಂದರವಾದ ವಯಸ್ಸಿನ ತರುಣಿಯೊಬ್ಬಳು ಬಂದು ತನ್ನನ್ನು ಸಹಾ ನದಿ ದಾಟಿಸುವಂತೆ ಗೋಗರೆದಳು.., ಆಕೆ ಒಬ್ಬಂಟಿಯಾಗಿದ್ದು ಇವರೇನಾದರೂ ಸಹಾಯ ಮಾಡದೇ ಹೋಗಿದ್ದರೆ ಅಲ್ಲಿಯೇ ಅಳುತ್ತಾ ಕೂರಬೇಕಾಗಿತ್ತು..

ಇವರು ಸನ್ಯಾಸಿಗಳಾಗಿದ್ದುದರಿಂದ ಹೆಣ್ಣನ್ನು ಮುಟ್ಟಿಸಿಕೊಳ್ಳುವಂತಿರಲಿಲ್ಲ ಮತ್ತು ಆ ರೀತಿಯ ವ್ರತವನ್ನು ಪಾಲಿಸುತ್ತಿದ್ದರು... ಹೀಗಾಗಿ ಸಹಪಾಠಿಯು ಸಹಾಯ ಮಾಡಲು ನಿರಾಕರಿಸಿದನು..

ಆದರೆ ಆನಂದನು ಆಕೆಯನ್ನು ಭುಜದ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿಸಿದನು.. ಆಕೆಯು ಧನ್ಯವಾದಗಳನ್ನು ತಿಳಿಸಿ ಹೊರಟುಹೋದಳು..

ಇವರಿಬ್ಬರೂ ಅಲ್ಲಿಂದ ಹೊರಟು ಒಂದು ಊರನ್ನು ಸೇರಿಕೊಂಡು ಅಲ್ಲಿನ ಜನರು‌ ಕೊಟ್ಟ ಬಿಕ್ಷೆಯನ್ನು‌ ಸ್ವೀಕರಿಸಿ ರಾತ್ರಿ ಒಂದು ಧರ್ಮಛತ್ರದಲ್ಲಿ ತಂಗಿದರು...,

ಆನಂದನು ಚೆನ್ನಾಗಿ ನೆಮ್ಮದಿಯ ನಿದ್ದೆ ಮಾಡಿದನು..., ಆದರೆ ‌ಗೆಳೆಯನಿಗೆ ನಿದ್ದೆ ಬರಲಿಲ್ಲ.., ಮನದಲ್ಲಿ ಏನೋ ತಳಮಳ....,  ಮಧ್ಯರಾತ್ರಿಯಲ್ಲಿ ಆನಂದನನ್ನು ಎಬ್ಬಿಸಿ ಈ ರೀತಿ ಕೇಳಿದನು...,

"ಅಲ್ಲಾ ಕಣೋ... ನಾವು ಸನ್ಯಾಸಿಗಳು... ನಾವು ಹೆಣ್ಣನ್ನು ಮುಟ್ಟುವಂತಿಲ್ಲ..., ಆದರೆ ನೀನು ಆ ತರುಣಿಯನ್ನು‌ ಹೊತ್ತುಕೊಂಡಿದ್ದೆಯಲ್ಲ... ಇದು ಸರಿಯೇ.. " ಎಂದು ‌ಕೇಳಿದನು...

ಅದಕ್ಕೆ ಆನಂದನು... " ಹೌದಪ್ಪಾ ನಾನು ಅವಳನ್ನು ‌ಹೊತ್ತುಕೊಂಡಿದ್ದು ನಿಜ... ಆದರೆ ಅವಳನ್ನು ನದಿ ದಾಟಿಸಿದ ನಂತರ ಅಲ್ಲಿಯೇ ಇಳಿಸಿಬಿಟ್ಟೆ......, ಆದರೆ........ ನೀನು‌ ಇನ್ನೂ ಹೊತ್ತುಕೊಂಡೇ ಇದ್ದೀಯಲ್ಲಪ್ಪಾ....!!!!"
ಎಂದು ಉತ್ತರಿಸಿದನು.
**

20 ವರ್ಷಗಳ ಹಿಂದೆ ಚಂದಮಾಮ ಪುಸ್ತಕ ದಲ್ಲಿ ಓದಿದ್ದು..

By-
Maruthi Vardhan



By - ಮಾರುತಿವರ್ಧನ್

Friday, November 1, 2019

IPC section 300_ Kannada Movie

Vijaya ragavendra as a lawyer cum investigation officer
Some crime thriller story


A best suspense thriller to watch
By Maruthi Vardhan


Suspense Thriller, Horror, Psychological Disorder, Aptharakshak

Aptharakshak

Psychological disorder oriented super hit suspense cum horror movie 



Full movie in YouTube
Hindi : https://youtu.be/tpvzBtLTqZ8
Kannada - https://youtu.be/W1HiTACvdFs
Telugu - https://youtu.be/aQjs0n7WkFM

Monday, October 28, 2019

ಕೊಲೆಗೆ ಕಾರಣ...? - (ಒಂದು ಸಣ್ಣ ಪತ್ತೇದಾರಿ ಕಥೆ)


ಒಂದು ಸಣ್ಣ ಪತ್ತೇದಾರಿ ಕಥೆ

**ಕೊಲೆಗೆ ಕಾರಣ..?‌ Motive for the Murder...??
**

ಇನ್ಸ್‌ಪೆಕ್ಟರ್ ಚಾಣಕ್ಯ ಮತ್ತು ಕಾನಸ್ಟೇಬಲ್ ಕುಶಾಲ್ ಇಬ್ಬರೂ ಸುರಿವ ಮಳೆಯಲ್ಲಿಯೇ ಪೋಲಿಸ್ ವ್ಯಾನ್‌ನಲ್ಲಿ ಆ ಮನೆಗೆ ತಲುಪಿದರು.

ಮದ್ಯವಯಸ್ಕ ವ್ಯಕ್ತಿಯೊಬ್ಬ ಎದುರು ಗೊಂಡು ಮೊದಲ‌ಮಹಡಿಗೆ ಇಬ್ಬರನ್ನೂ ಕರೆದೊಯ್ದ, ಅಲ್ಲಿ ಮಲಗಿತ್ತು ಮಾಲಿನಿಯ ದೇಹ.. ಜೀವವಿರಲಿಲ್ಲ..., ಎದೆಯ ಅದರಲ್ಲೂ ಹೃದಯದ ಮೇಲೆಯೇ ಚುಚ್ಚಿಕೊಂಡಿತ್ತು ಚಾಕು.



ದೀಪಾವಳಿಗೆ ಎರಡು ದಿನ ಆರಾಮಾಗಿ‌ ರಜೆ ತೆಗೆದುಕೊಳ್ಳೋಣವೆಂಬ ಯೋಚನೆಯಲ್ಲಿದ್ದ ಚಾಣಕ್ಯನಿಗೆ ಮದ್ಯೆ ಕೊಲೆಯಾಗಿದೆಯೆಂಬ ಸುದ್ದಿಯೊಡನೆ ಬಂದ ಫೋನ್‌ಕಾಲ್‌ಗೆ ಬೆಲೆ ಕೊಟ್ಟು ಕೂಡಲೇ ಹೊರಟು ಬಂದಿದ್ದ.

ಇಲ್ಲಿನ ಪರಿಸ್ಥಿತಿ ನೋಡಿದೊಡನೆ ಕರ್ತವ್ಯ ಪ್ರಜ್ಞೆ ಜಾಗೃತವಾಗಿ ಎಲ್ಲಾ ಇಲಾಖೆಗಳಿಗೂ ಫಿಂಗರ್ ಪ್ರಿಂಟ್ ಎಕ್ಸಪರ್ಟ್, ಪೋಸ್ಟ್ ಮಾರ್ಟಂ ಮಾಡುವ ಡಾಕ್ಟರ್ ಎಲ್ಲರಿಗೂ ಬರಹೇಳಿದ.

ಆ್ಯಕ್ಚುಯಲಿ ಚಾಣಕ್ಯನಿಗೆ ವಿಷಯ ಖಚಿತವಾಗಿತ್ತು.., ಇದು ಆಕಸ್ಮಿಕ ಘಟನೆಯಲ್ಲ.. ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು.., ಯಾಕೆಂದರೆ ಹೃದಯಕ್ಕೆ ಚಾಕು ಚುಚ್ಚುವ ವ್ಯಕ್ತಿ ಅಕಸ್ಮಾತ್ತಾಗಿ ಕೊಲೆ ಮಾಡುವ ಸಾದ್ಯತೆ ಇಲ್ಲ... ಯಾವುದೋ ದ್ವೇಷ ಇಟ್ಟುಕೊಂಡು ಮಾಡಿದ್ದಾನೆ.

ಆದರೆ ಇಂತಹ ಸೌಂದರ್ಯ ವತಿಯನ್ನು ಕೊಂದ ಅವನು‌ ಮೂರ್ಖನೋ ಅಥವಾ ಮನೋರೋಗಿಯೋ ಇರಬೇಕೆಂದು ಅರ್ಥವಾಗಿತ್ತು.

******

ಮಾಲಿನಿಯ ಸ್ನೇಹಿತರು ಸಂಬಂದಿಕರು ಎಲ್ಲರನ್ನೂ ವಿಚಾರಣೆ ನಡೆಸಿದ ಚಾಣಕ್ಯನಿಗೆ ಕೊಲೆಗಾರ ಯಾರೆಂದು ಗೊತ್ತಾಗದಿದ್ದರೂ... ಒಂದು ವಿಷಯದಲ್ಲಿ ತಲೆಕಟ್ಟು ಹೋಯಿತು..

ಜನರ ಹೇಳಿಕೆಗಳ ಆಕೆ ಒಬ್ಬ ಪರ್ಫೆಕ್ಟ್ ಗರ್ಲ್, ಮೃದು ಸ್ವಭಾವದ ಸ್ನೇಹಜೀವಿ ಹುಡುಗಿಯಾಗಿದ್ದಳು, ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ... ಶತೃಗಳನ್ನು ಸಹಾ ತನ್ನ ‌ಮೃದು ಮಾತುಗಳಿಂದ ಬದಲಿಸಬಲ್ಲವಳಾಗಿದ್ದಳು..., ಹಣದಾಸೆಯಂತೂ ಇರಲೇ ಇಲ್ಲ...!!, ತಾನು ರೂಪಸಿ ಎಂಬ ಅಹಂಕಾರ ಇರಲೇ ಇಲ್ಲ.. ಎಂದು ಸ್ವತಃ ಅವಳ‌ ಕ್ಲಾಸ್‌ಮೇಟ್ ಹುಡುಗಿಯರೇ ಹೇಳಿಕೊಂಡು ಅತ್ತಿದ್ದರು

ಹಾಗಿದ್ದರೆ ಕೊಲೆಗಾರ ಯಾರು? ಥತ್...!!, ಅವನ್ಯಾವನಾದರೂ ಆಗಿರಲಿ...!, ಮಾಲಿನಿಯಿಂದ ಅವನಿಗಾದ ತೊಂದರೆ ಅಥವಾ ಅನ್ಯಾಯವೇನು...?
"ಆದರೆ ಯಾಕೆ ಕೊಂದ..?" ಎಂಬುದೇ ತಲೆಕೆಡಿಸುವ ವಿಷಯವಾಗಿತ್ತು.

***

ಮಾಲಿನಿಯ ಮೊಬೈಲ್ ಸೀಜ್ ಮಾಡಿದ್ದ ಚಾಣಕ್ಯ ಅದನ್ನು ‌ಪರಿಶೀಲಿಸತೊಡಗಿದ್ದ..., ವಾಟ್ಸಪ್..,‌ ಫೇಸ್‌ಬುಕ್ ಎಲ್ಲವೂ ಲಾಗಿನ್‌ನಲ್ಲಿಯೇ ಇದ್ದುದರಿಂದ ಎಲ್ಲಾ ‌ಮೆಸೇಜ್ ಓದಬಹುದಾದ ಅವಕಾಶ ದೊರೆತಿತ್ತು.

ಎಲ್ಲಾ ಕಡೆಯೂ Happy Diwali ಎಂಬ ಸಂದೇಶಗಳ ಸುರಿಮಳೆಗಳೇ..., ಊರಿನಲ್ಲಿ ಇದ್ದ ಪಡ್ಡೆ ಹುಡುಗರೆಲ್ಲಾ ಸಿಕ್ಕಿದ್ದೇ ದೀಪಾವಳಿ ಅವಕಾಶ ಎಂದು ಮೆಸೇಜ್ ಕಳಿಸಿ... ಆ ನೆಪದಲ್ಲಿ ಇತರೆ ವಿಷಯಗಳನ್ನು ಎತ್ತುತ್ತಾ ಸ್ನೇಹವನ್ನು ವೃದ್ದಿಸಿಕೊಳ್ಳುವ ವಿಷಯದಲ್ಲಿ ಆ ಮೂಲಕ ಲವ್‌ನಲ್ಲಿ ಬೀಳಿಸಲು ಪೈಪೋಟಿ ನಡೆಸಿದ್ದರು.
ಚಿಕ್ಕ ವಯಸ್ಸಿನಲ್ಲಿ ಮೇಲೇ ಹಾರಾಡುತ್ತಿದ್ದ ವಿಮಾನಗಳನ್ನು ನೋಡಿ ಫ್ರಂಟು... ಬ್ಯಾಕು... ಎರಡನ್ನೂ ಬಡಿದು ಕೊಂಡು, ಚಡ್ಡಿ ಉದುರಿ ಹೋಗುತ್ತಿದ್ದುದನ್ನು ಲೆಕ್ಕಿಸದೆ.. ಹೋ....!!!ಹೋ...!!, ಕಿರುಚುತ್ತಿದ್ದ ಆ ಅವಿವೇಕಿ ಹುಡುಗರೇ ಇಂದು ಈ ರೀತಿಯಲ್ಲಿ ಹುಡುಗಿಯರಿಗೆ ಈ ರೀತಿಯಲ್ಲಿ ಮೆಸೇಜ್ ಮಾಡುವುದು ಎಂದು ಚಾಣಕ್ಯನಿಗೆ ‌ಕೋಪ ಬಂದಿತು.

ಮಾಲಿನಿ ಪ್ರಾರಂಭದಲ್ಲಿ ಬಂದ ಕೆಲ‌ ಮೆಸೇಜುಗಳಿಗೆ, same to you ಮತ್ತು happy diwali ಎಂದು ರಿಪ್ಲೈ ಮಾಡಿ... ಬರುತ್ತಿದ್ದ ಮೆಸೇಜುಗಳ ಸಂಖ್ಯೆ ಮಳೆಯ‌ ಹನಿಗಳಂತೆ ಅಧಿಕವಾದಾಗ ಸುಮ್ಮನಾಗಿಬಿಟ್ಟಿದ್ದಳು.

ಅದರಲ್ಲಿ ಒಂದು ಮಾಲಿನಿ ಫಾರ್ವರ್ಡ್ ಮಾಡಿದ್ದ ಒಂದು ವಾಟ್ಸಪ್ ‌ಮೆಸೇಜು ಚಾಣಕ್ಯನ ಗಮನ ಸೆಳೆಯಿತು..., ಮತ್ತು ಅದಕ್ಕಿಂತ ಕುತೂಹಲಕಾರಿಯಾದ ವಿಷಯವೆಂದರೆ ಆ ವ್ಯಕ್ತಿ ರಿಪ್ಲೈ ಮಾಡಿದ್ದ  angry   😡😠 ಎಮೋಜಿ..., ಆ ನಂಬರ್ ಎತ್ತಿಟ್ಟುಕೊಂಡ ಚಾಣಕ್ಯ.

****

ಮೋಹನ್ ‌ನನ್ನು ಬಂಧಿಸಲಾಯಿತು...,

ಚಾಣಕ್ಯನ ಅಪ್ಪ ವಿಷ್ಣುವರ್ಧನ್ ಅಭಿಮಾನಿಯಾಗಿದ್ದ... ಚಾಣಕ್ಯನಿಗೆ ಯಾವಾಗಲೋ ತೋರಿಸಿದ್ದ ವಿಷ್ಣು ನಟನೆಯ "ಟೈಮ್ ಬಾಂಬ್" ಚಲನಚಿತ್ರದ ದೃಶ್ಯ ಚಾಣಕ್ಯನ ನೆನಪಿಗೆ ಬಂದಿತು..., "ಅದರಲ್ಲಿ ಆರೋಪಿಯ ಬಾಯಿ ಬಿಡಿಸಲು.... ವಿಷ್ಣುವರ್ಧನ್ ಅವರು ಒಂದು ದೊಣ್ಣೆಗೆ ಎಣ್ಣೆ ಸವರಿ... 😯😯😯 ಅದನ್ನು ಖಾರದ ಪುಡಿಯಲ್ಲಿ ಅದ್ದಿ...., ರೌಡಿಯ ಪ್ಯಾಂಟ್ ಬಿಚ್ಚಿ......🧐🤨😯😯😯 "

ಅದೇ ದೃಶ್ಯವನ್ನು ಪುನರಾವರ್ತಿಸಿದ್ದ ಚಾಣಕ್ಯ..., ಹಾಗಾಗಿ ಮೋಹನ್ ಎಲ್ಲಾ ವಿಷಯವನ್ನು ಹೇಳಿಬಿಟ್ಟ.

******
ಮೋಹನ್ ಮೊದಲಿನಿಂದಲೂ ಬ್ಯುಸಿನೆಸ್‌ ನಲ್ಲಿ ಲಾಸ್ ಆಗಿ ಅಪ್ಪನ ಆಸ್ತಿಯೆಲ್ಲ ಖಾಲಿ‌ ಮಾಡಿಕೊಂಡು ಹತ್ತಿರ ಹತ್ತಿರ ಒಂದು ಕೋಟಿ ಸಾಲಮಾಡಿಕೊಂಡಿದ್ದ..., ಬಡ್ಡಿ, ಚಕ್ರಬಡ್ಡಿಗಳ ವಿಷ ವರ್ತುಲದಲ್ಲಿ ಸಿಲುಕಿದ್ದ ಮೋಹನ್,  ಈಗ ಕೊನೆಯ ಪ್ರಯತ್ನವಾಗಿ ಮೀಟರ್ ಬಡ್ಡಿ ಧಂದೆಮಾಡುವ ರೌಡಿ ಫೈನಾನ್ಷಿಯರ್ ಹತ್ತಿರ 10%  🤨😯 ಬಡ್ಡಿಗೆ ಹೊಸದಾಗಿ ಸಾಲ‌ ತಂದು ಹೊಸ ವ್ಯವಹಾರ ಶುರು ಮಾಡಲು ಶುರುಮಾಡಿ ದೀಪಾವಳಿಯಂದು ಅದರ ಪ್ರಾರಂಭೋತ್ಸವ ಇಟ್ಟಿದ್ದ ಮೋಹನ್.
ಅದೇ ದಿನ ರಾತ್ರಿ ಅವನ ಕ್ಲಾಸ್‌ಮೇಟ್ ಮಾಲಿನಿ.., happy diwali ಎಂದು ಮೆಸೇಜ್ ಕಳುಹಿಸಿದ್ದಳು...!
ಅಂದರೆ ನೀನು "ದಿವಾಳಿಯಾಗು" ಎಂದು.
ಅದೇನು.. ಪಾಪ ಅವಳು ಬೇಕೆಂದು ಕಳಿಸಿದ್ದಲ್ಲ... ಮಳೆಹನಿಗಳಂತೆ ಇನ್‌ಬಾಕ್ಸಿಗೆ ಬಂದು ಬೀಳುತ್ತಿದ್ದ ಮೇಸೇಜುಗಳಿಗೆ ಉತ್ತರಿಸಲಾಗದೆ.., ಮೆಸೇಜ್ ಕಳಿಸಿದವರಿಗೂ...ಕಳಿಸದಿದ್ದವರಿಗೂ ಅದನ್ನೇ ಫಾರ್ವರ್ಡ್ ಮಾಡಿದ್ದಳು ಮಾಲಿನಿ..,
ಮೋಹನ್ ಕೋಪದಿಂದ ಕುದ್ದುಹೋದನು..,‌ ಕೊಲೆ ಮಾಡಬೇಕೆಂದು ತೀರ್ಮಾನಿಸಿದನು..., ಈ‌ಕಥೆಯಿಂದ ತಿಳಿದು ಬರುವ ನೀತಿ ಏನೆಂದರೆ.., ಯಾರಿಗೂ ದಿವಾಳಿಯಾಗಿ ಎಂದು ಮೆಸೇಜ್ ಮಾಡಬೇಡಿ..., "ಹ್ಯಾಪಿ ದೀಪಾವಳಿ" ಎಂದು ಕಳುಹಿಸಿ.

**ಮುಕ್ತಾಯ**

ಸಾಹಸ by ಚಾಣಕ್ಯ.
written by
Maruthi Vardhan

ಪ್ಲೀಸ್ ಓದಿ... ಹೇಗಿದೆ ಎಂದು ಕಾಮೆಂಟ್ ಮಾಡಿ.., ತಪ್ಪುಗಳಿದ್ದರೆ ತಿಳಿಸಿ...  ಬರಹಗಳ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲುಸಹಾಯ ಮಾಡಿ..., thank you, Happy Deepavali to all.

**

Note :ಈ ಕಥೆಯು ಕಿರುಚಿತ್ರದ ಉದ್ದೇಶದಿಂದ ಕಾಪಿ ರೈಟ್ ಹಕ್ಕಿಗೊಳಪಟ್ಟಿದೆ, ನಕಲು ಮಾಡುವುದು ಕಾನೂನಿನ ಸಮಸ್ಯೆ ಉಂಟುಮಾಡುತ್ತದೆ, ಲಿಂಕ್ ಹಾಕಲು ಮತ್ತು ಶೇರ್ ಮಾಡಲು ಅನುಮತಿ ಇದೆ.
ಲಿಂಕ್ : Link :
https://maruthivishnuvardhan.blogspot.com/2019/10/blog-post.html?spref=fb&m=1

https://maruthivishnuvardhan.blogspot.com/2019/10/blog-post.html?spref=fb&m=1

Friday, August 30, 2019

2 months old baby dancing for krishna janmastami is awesome

Just 2 months old baby dances is amazing.., can't believe your eyes..
My son Chanakya, just 2 months very adore of dancing, whenever he listen a music he start dancing in this way, if there is no music around then he will be sailent. ಎರಡು ತಿಂಗಳ ಮಗು ಮಾಡಿದ ಅತ್ಯದ್ಭುತ ಡ್ಯಾನ್ಸ್, ನಂಬೋದಿಕ್ಕೆ ಆಗ್ತಿಲ್ಲ..., ಮಗುವಿನ ಹೆಸರು ಚಾಣಕ್ಯ, ತಂದೆ ಮಾರುತಿವರ್ಧನ್, ತಾಯಿ ಚೈತ್ರ.

https://youtu.be/Qq9Fuvos7j0

https://youtu.be/Qq9Fuvos7j0

Thursday, August 15, 2019

ಅನುಭವ : ಇಬ್ಬರು ಮಹಿಳೆಯರು.

ಒಮ್ಮೆ ನಮ್ಮ ಅಪ್ಪನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಗೂಳಿಯೊಂದು ಗುದ್ದಿ ಸಾಕಷ್ಟು ರಕ್ತ ಹೋಗಿ... ಪಕ್ಕೆಲುಬು ಮುರಿದು ಗೌರಿಬಿದನೂರಿನ "ಪ್ರಸಾದ್ ಹಾಸ್ಪಿಟಲ್" 10-15 ದಿನ ಅಡ್ಮಿಟ್ ಮಾಡಿದ್ದೆವು..., ಆ ಸಮಯದಲ್ಲಿ ಅಪ್ಪನನ್ನು‌ ನೋಡಿಕೊಳ್ಳಲು ನಾನು ಅಲ್ಲಿಯೇ ಇರಬೇಕಾಗಿತ್ತು..,

ನನಗೆ ಮಾಡಲು ಏನು ಕೆಲಸವಿಲ್ಲದಿದ್ದುದರಿಂದ ಸಾಯಂಕಾಲಗಳಲ್ಲಿ ಗೌರಿಬಿದನೂರನ್ನು ಸರ್ವೆ ಮಾಡುವಂತೆ ತಿರುಗಾಡಿಕೊಂಡಿರುವುದು ನನ್ನ ಅಭ್ಯಾಸವಾಗಿತ್ತು...,

ಒಮ್ಮೆ ಶಂಕರ್ ಟಾಕೀಸ್ ಮುಂಬಾಗದ ರಸ್ತೆಯ ಮೂಲಕ ರೈಲ್ವೆ ಸ್ಟೇಷನ್ ಕಡೆ ನಡೆದುಕೊಂಡು ಹೋಗುತ್ತಾಇದ್ದೆ...

ಆ ಸಮಯದಲ್ಲಿ ತುಂಬಾ ಸೊಗಸಾಗಿ ಕಟ್ಟಿದ ಮನೆಯೊಂದರ ಮುಂಭಾಗದಲ್ಲಿ  ಸುಮಾರು 65 -70 ವರ್ಷದ ವೃದ್ದೆಯೊಬ್ಬಳು ಕುಳಿತಿದ್ದಳು... ಆಕೆ ಪ್ರಾಯದಲ್ಲಿದ್ದಾಗ ಬಹಳ ಸುಂದರಳಾಗಿದ್ದಳೆಂದು ನೋಡಿದರೆ ಗೊತ್ತಾಗುತ್ತಿತ್ತು.., ಬೆಲೆಬಾಳುವ ಸೀರೆ ಆಕೆಗೆ ಒಂದು ಪ್ರೌಡ ಕಳೆ ಕೊಟ್ಟಿತ್ತು...!!❤

ನಾನು ಹತ್ತಿರ ಸಮೀಪಿಸುತ್ತಿದ್ದಂತೆ ಆಕೆ ನನ್ನತ್ತ ಒಮ್ಮೆ ಧೈನ್ಯದಿಂದ "ಅಮ್ಮಾ ಭಿಕ್ಷೆ" ಎಂದಳು..

ನನಗೆ ಆಶ್ಚರ್ಯ.. ಶಾಕ್ ಎರಡೂ ಒಟ್ಟಿಗೆ ಆದವು..., ಆಕೆ ಮತ್ತೊಮ್ಮೆ ಕೈ ಮುಂದೆ ಮಾಡಿ ಬೇಡಿದಳು..

ಎರಡನೆಯ ಯೋಚನೆಗೆ ಆಸ್ಪದವೇ ಇಲ್ಲದಂತೆ ನನ್ನ ಕೈ ನನಗೆ ಗೊತ್ತಿಲ್ಲದಂತೆ ಜೇಬಿನೊಳಗೆ ಹೋಗಿ 20 ರೂಪಾಯಿನ ನೋಟಿನೊಂದಿಗೆ ಹೊರಬಂದಿತು...!

ಉದ್ವೇಗ ಭಾವವನ್ನು ಮೀರಿದ ಭಯದೊಂದಿಗೆ ನಾನು ಆ ನೋಟನ್ನು ಆಕೆಯ ಕೈಯಲ್ಲಿಟ್ಟೆ..., ಆಕೆಯ ‌ಮುಖ ಸಂತೋಷದಿಂದ ಅರಳಿತು..., ಮೊದಲೇ ಸುಂದರವಾದ ಪ್ರೌಢ ಕಳೆ ಹೊಂದಿದ್ದ ಆಕೆ ಆ ನಗುವಿನಲ್ಲಿ ಸಾಕ್ಷಾತ್ ದೇವಿಯಂತೆಯೇ ಕಾಣಿಸಿದಳು..😯😯😯

ನಾನು ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬಾಗಿ ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಒಳಗಡೆಯಿಂದ ಆಲ್ಮೋಸ್ಟ್ ಕಿರಿಚುವ ದನಿಯೊಂದಿಗೆ ಒಬ್ಬ 30 ರ ಆಸುಪಾಸಿನ ಬಹಳ ಸುಂದರವಾದ ಯುವತಿಯೊಬ್ಬಳು ಹೊರಬಂದಳು.... ಆಕೆ ತುಂಬಾ ಸುಂದರವಾಗಿದ್ದರೂ ಆಕೆಯ ಹಮ್ಮು‌ಬಿಮ್ಮು ಅಹಂಕಾರಗಳನ್ನು ಗುರುತಿಸಬಹುದಾಗಿತ್ತು...

ಈ ಯುವತಿ ವೃದ್ದೆಯ ಮಗಳೋ ಅಥವಾ ಸೊಸೆಯೋ ಇರಬೇಕು...!!

ಆಕೆ ವೃದ್ದೆಯ ಹತ್ತಿರ ಹೋಗಿ ಸ್ವಲ್ಪ ಕಷ್ಟಪಟ್ಟು ಹಣವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಳು... ಆದರೆ ಆ ವೃದ್ದೆ ಬಿಡುತ್ತಿರಲಿಲ್ಲ..!!

ನನಗೆ ತುಂಬಾ ಭಯ ಆಗಿ ನಾನು ಅಲ್ಲಿಂದ ಓಡುವ ನಡಿಗೆಯಲ್ಲಿ ಮುಂದೆ ಸಾಗಲೆತ್ನಿಸಿದೆ..

ಯುವತಿ ಜೋರಾಗಿ ಕಿರುಚಿ ನಿಲ್ಲುವಂತೆ ಆಜ್ಞೆ ‌ಮಾಡಿದಳು..

ಹರಸಾಹಸ ಪಟ್ಟು ವೃದ್ದೆಯಿಂದ‌ ಹಣ ಕಿತ್ತುಕೊಂಡ ಆಕೆ ನನಗೆ ಆ ನೋಟನ್ನು ವಾಪಸ್ ಕೊಡಲು ಬಂದಳು....

ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದೆ...

ಆಕೆ ಕೋಪದಿಂದ ಬುಸುಗುಟ್ಟಿ ಆ ವೃದ್ದೆಯು ಆ ಮನೆಯ ಯಜಮಾನಿಯೆಂದು ಕೆಲುವು ಕೋಟಿ ಬಾಳುವ ಆಸ್ತಿ ಪಾಸ್ತಿ ಆಕೆಯ ಹೆಸರಲ್ಲಿ ಇದೆಯೆಂದು ನನಗೆ ತಿಳಿಸಿ ಬಲವಂತವಾಗಿ ಅದನ್ನು ನನ್ನ ಕೈಯಲ್ಲಿ ತುರುಕಿದಳು...

ಆಮೇಲೆ ಡವಗುಟ್ಟುವ ಎದೆಯೊಂದಿಗೆ ನಾನು ಅಲ್ಲಿಂದ ಕದಲಿ ರೈಲ್ವೆ ಸ್ಟೇಷನ್ನಿಗೆ ಬಂದು ಕುಳಿತೆ... ತುಂಬಾ ನಿರಾಸೆಯ ಜೊತೆ ಉಸಿರನ್ನು ತಹಬಂದಿಗೆ ತೆಗೆದುಕೊಂಡು ಒಂದು ಕಡೆ ಕುಳಿತು ವೃದ್ದೆಯ ಬಗ್ಗೆ ಯೋಚಿಸಿದೆ....

ನನ್ನ ಮನಸ್ಸಿನಲ್ಲಿ ಆಕೆಯ ಬಗ್ಗೆ ಒಂದು ವಿಶ್ಲೇಷಣೆ ಮೂಡಲಾರಂಬಿಸಿತು..

ಆಕೆ ಶ್ರೀಮಂತಳಾದುದರಿಂದ ಬಹುಶಃ ತನ್ನ ಪ್ರಾಯದ ಕಾಲದಲ್ಲಿ ಸಾಕಷ್ಟು ಹಣಕಾಸಿನ ಲೇವಾದೇವಿಯನ್ನು ನಡೆಸಿದ್ದಾಳೆ.. ಪ್ರತಿದಿನವೂ ಆಕೆಯ ಕೈಯಲ್ಲಿ ಸಾಕಷ್ಟು ಹಣ ಓಡಾಡುತ್ತಿತ್ತು...

ಆದರೆ ಈಗ ಆಕೆಗೆ ವಯಸ್ಸಾದುದರಿಂದ ಮನೆಯ ವ್ಯವಹಾರ ಮತ್ತು ಯಜಮಾನಿಕೆ ಸೊಸೆಯ ಪಾಲಾಗಿದೆ.... ಈಕೆಗೆ ಯಾವುದೇ ರೀತಿಯ ಹಕ್ಕು ಇಲ್ಲ..!,

ಆದರೆ ಸಮಯಕ್ಕೆ ಸರಿಯಾಗಿ ಊಟ, ಬಟ್ಟೆ ದೊರಕುತ್ತಿದೆ.., ಈಕೆಯ ಬೇಕು ಬೇಡಗಳನ್ನು ಕಿರಿಯರೇ ನೋಡಿಕೊಳ್ಳುತ್ತಿರುವುದರಿಂದ ಈಕೆಗೆ ಯಾವುದೇ ರೀತಿಯ ಹಣ ಸಿಗುತ್ತಿಲ್ಲ... ಸೊಸೆ ಪೂರ್ತಿಯಾಗಿ ಡಾಮಿನೇಟ್ ಮಾಡಿದ್ದಾಳೆ...

ಆದರೆ ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುವ ಮೋಹದಿಂದ ಹೊರಬರುವ ಬಗೆಯೆಂತು... ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ...!!??

ಹೀಗಾಗಿ ಹಣದ ಮೇಲಿನ ಮೋಹದಿಂದ ಭಿಕ್ಷೆ ಬೇಡಲಿಕ್ಕೂ ಈಕೆ ಸಿದ್ದವಾದಳು.... ಈ ರೀತಿಯಾಗಿ ನನ್ನ ‌ಮನಸ್ಸಿನಲ್ಲಿ ವೃದ್ದೆಯ ಚಿತ್ರ ಮೂಡಿತು..., ಇದೊಂದು ಸೈಕಲಾಜಿಕಲ್ ಪ್ರಾಬ್ಲಮ್... ಹಣವನ್ನು ಹೊಂದಬೇಕೆಂಬ ಉತ್ಕಟ ಆಕಾಂಕ್ಷೆ...!!

ನನ್ನ ಮನಸ್ಸು ಭಾರವಾಗಿತ್ತು... ನನಗೂ ವಯಸ್ಸಾದ ಮೇಲೆ ನನ್ನ ಮಕ್ಕಳು ಹೀಗೆಯೇ ಮಾಡಬಹುದೇನೊ ಎಂಬ ಜಿಜ್ಞಾಸೆ ಶುರುವಾಯಿತು....!!

ಸಮಯ ಸರಿದದ್ದೇ ತಿಳಿಯಲಿಲ್ಲ...
ರೈಲ್ವೆ ಸ್ಟೇಷನ್ ನಲ್ಲಿ ಒಂದು ಟೀ ಮತ್ತು ಪಕೋಡ ತಿಂದು ಆಸ್ಪತ್ರೆಯತ್ತ ಹೆಜ್ಜೆ ಹಾಕಿದೆ.... ಆದರೆ ನನಗರಿವಿಲ್ಲದಂತೆಯೇ ನನ್ನ ಕಾಲುಗಳು ಆ ವೃದ್ದೆಯ ‌ಮನೆಯ ಕಡೆ ಎಳೆದವು..!!

ಭಯದಿಂದಲೂ... ಕುತೂಹಲದಿಂದಲೂ ಆ ಮನೆಯತ್ತ ದೃಷ್ಟಿಸಿದೆ...!,

ಓಹ್ ಮೈ ಗುಡ್ ನೆಸ್ ವೃದ್ದೆ ಹೊರಗೆ ಕುಳಿತಿದ್ದಳು... ಎದೆಯಲ್ಲಿ ತಂಗಾಳಿ ಬೀಸಿದಂತಾಯಿತು...!!

ನಾನು ಮನೆಯ ಮುಂದೆ ಸರಿಯುತ್ತಿದ್ದಂತೆ ಆಕೆ ಮತ್ತೆ ದೈನ್ಯವನ್ನು ಕಣ್ಣಲ್ಲಿ ತುಂಬಿಕೊಂಡು ಬಾಯಿ ತೆರೆಯಲನುವಾದಳು..,

ನಾನು ಶ್....!!! ಎಂದು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿ ಹತ್ತಿರಕ್ಕೆ ಸಾಗಿದೆ..!!

ಯುವತಿ ಮತ್ತೆ ಬಂದರೇನು ಗತಿ ಎಂಬ ಭಯ ಹೆಚ್ಚಾಗಿತ್ತು..., ಎದೆ ಢವಢವಿಸುತ್ತಿತ್ತು....

ನನಗೆ ಈ ಅಡ್ವೆಂಚರ್‌ ಮಾಡಲು ಕಾರಣವೇನೆಂದರೆ ನಾನು ವಿಷ್ಣುವರ್ಧನ್ ಅಭಿಮಾನಿಯಾಗಿದ್ದುದು.. ಚಲನಚಿತ್ರಗಳಲ್ಲಿ ವಿಷ್ಣು ಸಾಹಸ ಮಾಡುವಂತೆ ನಾನು ಮಾಡಬೇಕೆಂಬ ನನ್ನ ಸೈಕಾಲಾಜಿಕಲ್‌ ಪ್ರಾಬ್ಲಮ್..

ನನ್ನ ಕೈ ಲೈಟ್ನಿಂಗ್ ವೇಗದೊಂದಿಗೆ ಜೇಬಿನೊಳಗೆ ಹೋಗಿ ನೋಟಿನೊಂದಿಗೆ ಹೊರಬಂತು ಅದು ಎಷ್ಟರ ನೋಟು ಎಂಬುದನ್ನು ಸಹಾ ನೋಡಲೋಗದೆ ವೃದ್ದೆಯ ಕೈಯಲ್ಲಿ ಅದನ್ನು ಇಟ್ಟೆ....,

ತಾಯಿ ಮಗುವನ್ನು ಬಚ್ಚಿಟ್ಟುಕೊಳ್ಳುವಂತೆ ಅದನ್ನು ಸೆರಗಿನಲ್ಲಿ ಬಚ್ಚಿಟ್ಟುಕೊಂಡಳು...  ಕಣ್ಣಿನಲ್ಲಿ ಹೊಳಪು... ಸಂತೋಷ..

ಆ ನಗುಮುಖವನ್ನು ಮನಸ್ಸಿನಲ್ಲಿ ತುಂಬಿಕೊಂಡು ಅಲ್ಲಿಂದ ಓಡಿದೆನೋ ಅಥವಾ ನಡೆದೆನೋ ಎನ್ನುವ ರೀತಿಯಲ್ಲಿ  ಗಾಳಿಯಲ್ಲಿ ತೇಲುವಂತೆ ಆಸ್ಪತ್ರೆ ತಲುಪಿದೆ... ಅಪ್ಪನ ವಾರ್ಡಿನತ್ತ ಹೋದೆ...

ಅಪ್ಪ ಅರ್ದ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು..., ನಾಲ್ಕೈದು ನೋಟುಗಳನ್ನು ಮತ್ತು ಸ್ವಲ್ಪ ಚಿಲ್ಲರೆ ಹಣವನ್ನು ಅಪ್ಪನ ಷರ್ಟ್ ಜೇಬಿಗೆ ಅಪ್ಪನಿಗೆ ಚೆನ್ನಾಗಿ ಕಾಣಿಸುವಂತೆ ಮತ್ತು ಶಬ್ದವಾಗುವಂತೆ ಸೇರಿಸಿದೆ...  ಅಪ್ಪನ ‌ಮುಖ‌ ಗೆಲುವಾಯಿತು...!!!

Maruthi Vardhan
***************🌹🌹🌹
ನನ್ನ ಫೇಸ್‌ಬುಕ್‌ ನಿಂದ ತೆಗೆದು ಪ್ರಕಟಿಸಿದ್ದು.

ಹಾಸ್ಯ ಅನುಭವ

ಹಾಸ್ಯ ಅನುಭವ:
ನಾನು ಮಾರುತಿ 10th ಪಾಸ್ ಆಗಿ PUC ಗೆ ಅಡ್ಮಿಷನ್ ಮಾಡ್ಸೋಕೆ ಅಂತ ಗೌರಿಬಿದನೂರಿನ ಆಚಾರ್ಯ ಕಾಲೇಜಿಗೆ ಹೋಗಿದ್ದೆ, ನನ್ನ ಮಾವ ಶಿವಶಂಕರ ಜೊತೆಗೆ ಸಹಾಯ ಮಾಡಲಿಕ್ಕೆ ಬಂದಿದ್ದವನು ಕ್ಲರ್ಕ್ ಬರೋದು ತಡವಾಗಿದ್ದಕ್ಕೆ ಹಿಂಗಿಂಗೆ ಮಾಡು ಎಂದು ಹೇಳಿ ಇನ್ಸಟ್ರಕ್ಷನ್ ಕೊಟ್ಟು ಎಸ್ಕೇಪ್😠 ಆಗಿಬಿಟ್ಟ...,
ನನಗೋ ಅಷ್ಟಾಗಿ ಬುದ್ದಿ ಇರಲಿಲ್ಲ.. (ಈಗ ಬುದ್ದಿ ಇದೆ, ಆದರೆ ನಮ್ಮ ಕುಟುಂಬ ಸದಸ್ಯರು ಇದನ್ನು ಒಪ್ಪುವುದಿಲ್ಲ😠)

ನನಗೆ "ಅಡ್ಮಿಷನ್" ಎಂಬ ಒಂದು ಕೆಲಸ ತುಂಬಾ ದೊಡ್ಡದು.. ಅದರಲ್ಲಿ ಏನೇನೋ ಇರುತ್ತದೆ.. ತುಂಬಾ ಪ್ರೊಸೀಜರ್ ಇರುತ್ತವೆ.. ಈ ಕೆಲಸ ಬಾರಿ ಕಾಂಪ್ಲಿಕೇಟೆಡ್ ಎಂಬ ಅನಿಸಿಕೆಗಳಿದ್ದವು..

 ಹೀಗಾಗಿ ನನಗೆ ತುಂಬಾ ಭಯ ಆಗಿ ಶಿವಶಂಕರನನ್ನು ಬಾಯಿ ಬಂದಂತೆ ಬೈದುಕೊಳ್ಳುತ್ತಾ ಕ್ಲರ್ಕ್ ವೆಂಕಟಸ್ವಾಮಿ ಹತ್ತಿರ ಒಬ್ಬನೇ ಹೋದೆ..,

ಅವರು ನನ್ನನ್ನೊಮ್ಮೆ ನೋಡಿ "ಮಿಡ್ಲಸ್ಕೂಲ್ ಆ ಕಡೆ ಇದೆ ಹೋಗಪ್ಪ..!!"  ಎಂದ.
ನನಗೆ ಮತ್ತಷ್ಟು ಭಯವಾಗಿ ಪಿ....ಯು........ ಸ್..ಸಿ ಎಂದು ತೊದಲಿದೆ..,
ಕ್ಲರ್ಕ್ ವೆಂಕಟಸ್ವಾಮಿ ಒಮ್ಮೆ ಕರೆಂಟ್ ಶಾಕ್ ಹೊಡೆಸಿಕೊಂಡವನಂತೆ ನನ್ನ ಕಡೆ ನೋಡಿ.. ನನ್ನ ಕೈಯಲ್ಲಿದ್ದ ಮಾರ್ಕ್ ಕಾರ್ಡ್, ಟಿ.ಸಿ. ತೆಗೆದುಕೊಂಡು ನೋಡಿ.. ಅದು ನನ್ನದೋ ಅಲ್ಲವೋ  ಕನ್ಫರ್ಮೇಷನ್ ಗಾಗಿ ಸ್ಕೂಲಿನ ಹೆಸರು.. ತಂದೆಯ ಹೆಸರು ಎರಡೆರಡು ಬಾರಿ ಕೇಳಿದ.. ನಾನು ಸರಿಯಾಗಿ ಉತ್ತರಿಸಿದ್ರಿಂದ ಸಮಾದಾನಗೊಂಡು ಎಲ್ಲಾ ಡಾಕ್ಯುಮೆಂಟ್ಸ್ ಮತ್ತು ಪಾಸ್‌ಪೋರ್ಟ್ ಸೈಜಿನ ಫೋಟೋ ತೆಗೆದುಕೊಂಡು, ಫೀಸ್ ಅನ್ನು ಕಟ್ಟಿಸಿ ಕೊಂಡು A- section ಎಂದು ಹೇಳಿ ಹೊರಡಲು ಹೇಳಿದ..,

 ಆ್ಯಕ್ಚುಯಲಿ ನನಗೆ ಎರಡ್ಮೂರು ಫೋಟೊ ಇಸಕೊಂಡು.. ಟಿಸಿ, ಮಾರ್ಕಶೀಟ್ ಅನ್ನು ಎತ್ತಿ ಒಂದು ಸೈಡಿಗೆ ಇಟ್ಟುಕೊಂಡು ಅಡ್ಮಿಷನ್ ಮುಗೀತು ಹೋಗು ಎಂದರೆ ನಾನು ನಂಬಲು ತಯಾರಿರಲಿಲ್ಲ.., ಬದಲಿಗೆ ನನಗೆ ಅಡ್ಮಿಷನ್ ಎಂಬುದು ಒಂದು ಅತಿ ಕ್ಲಿಷ್ಟಕರ ಮತ್ತು ದೊಡ್ಡ ಸಂಗತಿಯಾಗಿದ್ದು ಈ ವೆಂಕಟಸ್ವಾಮಿ ಅದನ್ನು ಮಾಡಿಲ್ಲವೆಂಬುದು ನನಗೆ  ೧೦೦% ಕಾನ್ಫಿಡೆನ್ಸ್ ಇತ್ತು..., ಹೀಗಾಗಿ ನಾನು ನಿಂತಿದ್ದ ಜಾಗದಿಂದ ಕದಲಲಿಲ್ಲ...,

ವೆಂ. ಮತ್ತೇನು.. ಎನ್ನುವಂತೆ ಮುಖ ನೋಡಿದ.., ನಾನು "ಸಾರ್ ಅಡ್ಮಿಷನ್...!!" ಎಂದು ರಾಗ ಎಳೆದೆ...,

 "ಮುಗೀತಲ್ಲಯ್ಯಾ ಹೋಗಯ್ಯಾ...!" ಎಂದು ಗದರಿಸಿದ,

ಅಷ್ಟಕ್ಕೂ ಅವನ ಗದರಿಕೆಗೆ ಹೆದರಿ ಅಲ್ಲಿಂದ ಹೋಗುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ...,
ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದ ಶಿವಶಂಕರ ನನ್ನು ಮನೆಗೆ ವಾಪಸಾದ ಮೇಲೆ ಹೊಡೆದು ಚಚ್ಚಿಹಾಕಬೇಕು ಎಂಬ ಕೋಪದೊಡನೆ, ಇಲ್ಲಿನ ಪರಿಸ್ಥಿತಿ ಕುರಿತು ಭಯವೂ ಆಗಿ ವೆಂ. ಯನ್ನು ಒಪ್ಪಿಸಿ ಅಡ್ಮಿಷನ್ ಅನ್ನು ಮುಗಿಸಿಕೊಂಡು ಹೋಗದಿದ್ದರೆ ನಾನು ಸಾಹಸ ಸಿಂಹ ವಿಷ್ಣುವರ್ಧನ್ ಅಲ್ಲ ಎಂದು ನಿರ್ದಾರ ಮಾಡಿಬಿಟ್ಟಿದ್ದೆ 😯😯😯.

ವೆಂ. ಗೆ ತನ್ನ ಟೈಮ್ ಸರಿಯಿಲ್ಲದಿದ್ದರಿಂದಲೇ ಬೆಳಿಗ್ಗೆ ಬೆಳಿಗ್ಗೆಯೇ ಇವನು ಬಂದು ತಗಲಿ ಹಾಕಿಕೊಂಡಿದ್ದಾನೆಂಬುದು ಸ್ಪಷ್ಟವಾಗಿ ಅರ್ಥವಾದಂತಿತ್ತು..
 ಹಾಗೂ ಈ ಸಮಯದಲ್ಲಿ ಅಡ್ಮಿಷನ್ ಅದೂ ಇದೂ ಅಂತ ರಾಶಿ ಕೆಲಸ ಬೀಳಿಸಿಕೊಂಡಿದ್ದ ವೆಂಕಟಸ್ವಾಮಿಗೆ ನನ್ನನ್ನು ಅಲ್ಲಿಂದ ಕದಲಿಸುವುದು ಕಷ್ಟ ಎಂದು ಅರಿವಾಗಲು ಮುಂದಿನ ಅರ್ದಗಂಟೆ ಸಮಯ ಹಿಡಿಯಿತು...,

ಇದರಲ್ಲಿ ನನ್ನ ತಪ್ಪೇನೂ ಇರಲಿಲ್ಲ.. ಆಗಿನ ನನ್ನ ಅನುಭವ, ಪ್ರಪಂಚ ಜ್ಞಾನ, ಜಾಗರೂಕತೆ ಹಾಗೂ ಮೊಂಡುತನಗಳು ಮತ್ತು ನಾನು ವಿಷ್ಣುವರ್ಧನ್ ಅಭಿಮಾನಿಯಾಗಿದ್ದುದು ಸೇರಿ ನನ್ನನ್ನು ಆ ಮಟ್ಟಿಗೆ ತಯಾರು ಮಾಡಿದ್ದವು..😧😧😧.

 ವೆಂ. ಬೈದು.. ಸಿಡುಕಿ... ಎಗರಾಡಿ... ಕೊನೆಗೆ ಹೊಡೆಯುವುದು ಒಂದನ್ನು ಬಾಕಿ ಉಳಿಸಿಕೊಂಡಿದ್ದ... ಕೊನೆಗೆ ನನ್ನ ಎದುರಿಗೇ ಬಂದು ಅಡ್ಮಿಷನ್ ಮಾಡಿಸಿಕೊಂಡು ಹೋದ ನಾಲ್ಕೈದು ಸ್ಟೂಡೆಂಟ್ಸ್ ಅನ್ನು ಉದಾಹರಣೆಯಾಗಿ ತೋರಿಸಿ ಅಡ್ಮಿಷನ್ ಅಂದರೆ ಇಷ್ಟೆ.. ಎಂದು ಕನ್ವಿನ್ಸ್ ಮಾಡುವಲ್ಲಿ ವೆಂ. ಯಶಸ್ವಿಯಾಗಿ ಬಿಟ್ಟ...

ಅಲ್ಲಿಂದ ನಾನು ನೆಕ್ಸ್ಟ್ ಬಂದಿದ್ದು ಪ್ರಿನ್ಸಿಪಾಲ್ ಚೇಂಬರ್ ಮುಂಭಾಗಕ್ಕೆ.. ಅವರಿಗೂ ಒಮ್ಮೆ ತೋರಿಸಿ ಕನ್ಫರ್ಮ್ ಮಾಡಿಕೊಳ್ಳೋಣ ಎಂದು.., ಆಚಾರ್ಯ ಕಾಲೇಜಿನ ಪ್ರಿನ್ಸಿಪಾಲ್ ರ ಅದೃಷ್ಟವೋ ಅಥವಾ ಮುನ್ಸಿಪಲ್ ಕಾಲೇಜಿನ ಕ್ಲರ್ಕ್ ನ ಅದೃಷ್ಟವೋ ಗೊತ್ತಿಲ್ಲ ಪ್ರಿನ್ಸಿಪಾಲರು ಆವತ್ತು ರಜೆಯಲ್ಲಿದ್ದರು...
 (ಯಾಕೆಂದರೆ ಇವರಿಗೆ ತಲೆಕೆಟ್ಟು ನನ್ನ ಅಡ್ಮಿಷನ್ ಕ್ಯಾನ್ಸೆಲ್ ಮಾಡಿದ್ದರೆ... ನಂತರ  ನಾನು ಅಲ್ಲಿಂದ ಮುನ್ಸಿಪಲ್ ಕಾಲೇಜಿನ ಕ್ಲರ್ಕ್ ನ್ನು ಹುಡುಕಿಕೊಂಡು ಹೋಗಬೇಕಾಗಿತ್ತು...😧.)

So ಆವತ್ತು ಇವರು ರಜೆಯಲ್ಲಿ ಇದ್ದುದರಿಂದ ನಾನು ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನೆ ಹೊರಟು ಹೋದೆನೆಂದು ನೀವು ಭಾವಿಸುವುದಿಲ್ಲ ಎಂದು ನನಗೆ ಗೊತ್ತು..
ನಿಮ್ಮ ಅನಿಸಿಕೆ ಸರಿ... ನಾನು ಅಲ್ಲಿಯೇ ಠಳಾಯಿಸಿಕೊಂಡಿದ್ದೆ..😠😠

 ನನ್ನನ್ನು ನೋಡಿ ಅನುಮಾನಗೊಂಡ ಪಿಒನ್ ಒಬ್ಬನು ಹತ್ತಿರ ಕರೆದು ಏನು ಸಮಾಚಾರ ಎಂದು ವಿಚಾರಿಸಿದ..., ನಾನು ಅ...ಡ್ಮಿ...ಷನ್...... ಎಂದೆ...,

ಅವನು ನನ್ನ ಫೀಸ್ ಕಟ್ಟಿದ್ದ ರಶೀತಿಯನ್ನು ಚೆಕ್ ಮಾಡಿ "ವೆರಿ ಗುಡ್" ಎಂದು ಹೇಳಿದ.. ನಂತರ

" ಅಡ್ಮಿಷನ್ ಆಗಿದೆ ಸೋಮವಾರದಿಂದ ಕಾಲೇಜಿಗೆ ಬಾ... " ಎಂದು ಹೇಳಿದ..

ನಾನು "ಎಲ್ಲಿಗೆ ಬರಬೇಕು " ಕೇಳಿದೆ..

ಇವನನ್ನು ವೆರಿಗುಡ್ ಎಂದಿದ್ದು ತಪ್ಪಾಯಿತೆಂದು ಅವನಿಗೆ ಮನದಟ್ಟಾಯಿತು... ಅವನು ವೆಂಕಟಸ್ವಾಮಿ‌ಯಂತೆ ಮೆದು ಆಸಾಮಿಯಲ್ಲ ... ಸ್ವಲ್ಪ ಚುರುಕು ಬಡ್ಡಿಮಗ...

"ಶಂಕರ್ ಟಾಕೀಸ್ ಗೆ ಬಾ... " ಎಂದು ಹೇಳಿ.. ತನ್ನ ಜೋಕಿಗೆ ತಾನೇ ಜೋರಾಗಿ ನಕ್ಕು "ಇನ್ನೆಲ್ಲಿಗೆ ಬರ್ತೀಯ... ಇದೇ ಕಾಲೇಜು.. ಇಲ್ಲಿಗೆ ಬಾರೋ..." ಎಂದು ಗದರಿದ..

"ಹೆಂಗೆ ಬರಬೇಕು.." ನನ್ನ ಮುಂದಿನ ಪ್ರಶ್ನೆ

ಅವನಿಗೆ ರೇಗಿ ಹೋಯಿತು... "ಕಾಲೇಜಿನ ದೊಡ್ಡ ಕಾಂಪೌಂಡ್ ಗೇಟನ್ನು ತೋರಿಸಿ... ಅದನ್ನು ಎಗರಿ ಬಾ...." ಎಂದನು.

😧😧😧😧😧😧😧😧

ಈಗ ಇದನ್ನೆಲ್ಲಾ ನೆನೆಸಿಕೊಂಡರೆ ನಗು ಬರುತ್ತದೆ... ಆದರೆ ಆ ಸಮಯದಲ್ಲಿ ಭಯ, ಆತಂಕ, ಅಡ್ಮಿಷನ್ ಆಗಿಲ್ಲವೇನೋ ಎಂಬ ದುಗುಡಗಳು ನನ್ನನ್ನು ಹೈರಾಣು ಮಾಡಿದ್ದವು... ಆ ಸಮಯದಲ್ಲಿ ಇವೆಲ್ಲವೂ ನನಗೆ ಖಂಡಿತವಾಗಿಯೂ ಹಾಸ್ಯವಾಗಿರಲಿಲ್ಲ.. ಬದಲಿಗೆ ಕಷ್ಟಕರ ಪರಿಸ್ಥಿತಿಯಾಗಿದ್ದಿತು..

ಅದಕ್ಕೆ ದೊಡ್ಡವರು ಹೇಳಿರುವುದು...

"ಅನುಭವಗಳು ಯಾವತ್ತೂ ಸಿಹಿಯಲ್ಲ ಅವು ಬಹಳ ಕಹಿ..., ಆದರೆ ಈ ಅನುಭವಗಳ ಸವಿನೆನಪು ಬಲು ಸಿಹಿ...❤❤❤" ಎಂದು.

By- Lion
Maruthi Vardhan

ನನ್ನ ಫೇಸ್‌ಬುಕ್‌ ವಾಲ್‌ನ ಲೇಖನದ ಲಿಂಕ್

https://m.facebook.com/story.php?story_fbid=1995894263759413&id=100000165778532

ಲೇಖಕರು:
Maruthi Vardhan
Owner @ Apthamithra Tutorials
& Computer Training & Spoken Languages
Konappana Agrahara
Near Yallamma Temple
Electronic City
Bengaluru.-560100
Mobile-9008453065