ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈ ತೋಟದಲ್ಲಿ ಕಾವಲ ಇದ್ದ ಮಾಲಿ ಅಷ್ಟೇ" ಎಂಬ ಮಾತು ವಿಷ್ಣುವರ್ಧನ್ ಅವರು ಹೇಳಿದ್ದು ಎಲ್ಲಿ?
**
ಶಶಿಕುಮಾರ್ ಅವರ ಮೊದಲ ಚಿತ್ರ ಚಿರಂಜೀವಿ ಸುಧಾಕರ, ಆದರೆ ಎರಡನೆಯ ಚಿತ್ರವಾದ ಯುದ್ಧಕಾಂಡದಲ್ಲಿ ಅವರು ಸಿನಿಪ್ರಿಯರ ಗಮನ ಸೆಳೆದದ್ದು. ಅದರಲ್ಲಿ ವಿಲನ್ ಆದರೂ ಡಾನ್ಸರ್ ಪಾತ್ರ. ಆನಂತರ ಕೆಲವು ಚಿತ್ತಗಳಲ್ಲಿ ವಿಲನ್ ಆಗಿಯೇ ಇದ್ದರು. ಬಳಿಕ ಹೀರೋ ಆಗಿ ಭಡ್ತಿ ಪಡೆದರೂ ಆ ಚಿತ್ರಗಳು ಅಷ್ಟೇನೂ ಸಕ್ಸಸ್ ಆಗಿರಲಿಲ್ಲ. ಆದರೆ ಮಾಲಾಶ್ರೀಯೊಂದಿಗೆ ನಟಿಸಿದ 'ಪೊಲೀಸನ ಹೆಂಡ್ತಿ' ಸೂಪರ್ ಡೂಪರ್ ಆದಾಗ ಅವರು ಜನಪ್ರಿಯ ಆದರು. ಶಸಿ-ಮಾಲಾಶ್ರೀ ಅಂದಿನ ಸೂಪರ ಜೋಡಿಯಾದರು. ಆ ಜೋಡಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದರು. ರೆಡಿಮೇಡ್ ಗಂಡ, ಕನಸಿನ ರಾಣಿ, ರಾಣಿಮಹಾರಾಣಿ, ಕೊಲ್ಲೂರ ಕಾಳ. ಶಶಿಕುಮಾರ್ ಸುಪ್ರೀಂ ಹೀರೋ ಆಗಿ ಬೆಳೆದರು.
ದುರದೃಷ್ಟವಶಾತ್ ಅವರಿಗೆ ಅಪಘಾತ ಆಯಿತು, ಮುಖದ ಸೌಂದರ್ಯ ಹಾಳಾಯಿತು,
ಇನ್ನೇನು ಎಲ್ಲವೂ ಮುಗಿಯಿತು ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಶಶಿಕುಮಾರ್ ರವರಿಗೆ ಒಂದು ಸುವರ್ಣಾವಕಾಶ ಸಿಕ್ಕಿತು.
"ಹಬ್ಬ" ಸಿನಿಮಾ. ಈ ಚಿತ್ರ ಸುಪ್ರೀಂ ಹೀರೋ ಜೀವನದಲ್ಲಿ ನಿರೀಕ್ಷೆಗೂ ಮೀರಿ ಬದಲಾವಣೆ ತಂದಿತು. ಡಾ ವಿಷ್ಣುವರ್ಧನ್, ಅಂಬರೀಷ್, ದೇವರಾಜ್, ರಾಮ್ ಕುಮಾರ್ ಮತ್ತು ಶಶಿ ಕುಮಾರ್ ನಟಿಸಿದ ಹಬ್ಬ ಚಿತ್ರವು ಸೂಪರ್ ಹಿಟ್ ಆಯ್ತು. ಅಲ್ಲಿಂದ ಮತ್ತೆ ಶಶಿ ಕುಮಾರ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಆದರು.
ಶಶಿಕುಮಾರ್ ಅವರು ಹಬ್ಬ ಸಿನಿಮಾದಲ್ಲಿ ನಟಿಸಿದ್ದು ಶಶಿಕುಮಾರ್ ಅವರ ಪತ್ನಿಗೂ ಖುಷಿ ಇತ್ತಂತೆ. ಯಾಕೆಂದರೆ, ಈ ಚಿತ್ರದಲ್ಲಿ ಶಶಿಕುಮಾರ್ ನಟಿಸಿದ್ದು ಅವರ ನಿಜ ಜೀವನಕ್ಕೆ ಬಹಳ ಹತ್ತಿರವಾಗಿತ್ತಂತೆ. ಸುಳ್ಳನ್ನೇ ಹೇಳದ ವ್ಯಕ್ತಿ ಪಾತ್ರದಲ್ಲಿ ಹಬ್ಬ ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದರು. 1999 ಏಪ್ರಿಲ್ 16 ರಂದು ಬಿಡುಗಡೆಯಾದ ಹಬ್ಬ ಚಿತ್ರವನ್ನು ಡಿ ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದರು. ಹಂಸಲೇಖ ಸಂಗೀತ ನೀಡಿದ್ದರು.
ಕನ್ನಡದ ನಟ, ಸುಪ್ರಿಂ ಹೀರೋ ಶಶಿಕುಮಾರ್ ಬದುಕಿನಲ್ಲಿ ನಡೆದ ಆ ಅಪಘಾತ ನಟನ ಬದುಕನ್ನೇ ಬದಲಾಯಿಸಿಬಿಟ್ಟತು. 1998 ಜುಲೈ 31 ರಂದು ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಸುಪ್ರೀಂ ಹೀರೋ ಶಶಿ ಕುಮಾರ್ ಅವರ ಕಾರು ಅಪಘಾತವಾಯಿತು.ಆ ಆಕ್ಸಿಡೆಂಟ್‌ನಲ್ಲಿ ನಟ ಶಶಿ ಕುಮಾರ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿ ಮೂಗಿಗೆ ಹೆಚ್ಚು ಡ್ಯಾಮೇಜ್ ಆಯಿತು.
ಸತತ 8 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಒಂದು ಹಂತಕ್ಕೆ ಶಶಿಕುಮಾರ್ ಅವರ ಮುಖದಲ್ಲಿ ಸ್ವಲ್ಪ ಚೇತರಿಕೆಯಾಯಿತು. ಆದರೆ, ಅದರಿಂದ ಶಶಿಕುಮಾರ್ ಅವರಿಗೆ ಡ್ಯಾನ್ಸ್ ಮಾಡೋಕೆ ಆಗಲ್ಲ, ಫೈಟ್ ಮಾಡೋಕೆ ಆಗಲ್ಲ, ಅದೂ ಇದೂ ಎಂದು ಪತ್ರಿಕೆಗಳಲ್ಲಿ ವರದಿಯಾದ ಪರಿಣಾಮ ಯಾವ ಸಿನಿಮಾ ಅವಕಾಶವೂ ಅವರಿಗೆ ಸಿಗಲಿಲ್ಲ.ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಶಿಕುಮಾರ್ ಗೆ ಆಗ ಮದುವೆ ಆಗಿ ಇಬ್ಬರು ಮಕ್ಕಳು ಕೂಡ ಇದ್ದರು.
ವಿಷ್ಣುವರ್ಧನ್ ಅವರ ಜೊತೆ ಉತ್ತಮ ಭಾಂದವ್ಯವಿದ್ದ ಶಶಿಕುಮಾರ್ ಇವರಿಬ್ಬರ ಕಾಂಬಿನೇಶನ್‌ನ ಎಲ್ಲಾ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ.
ಕುಂತೀಪುತ್ರ
ತುಂಬಿದ ಮನೆ
ಹಬ್ಬ
ಯಜಮಾನ
ಸಾಹುಕಾರ
ವಿಷ್ಣುವರ್ಧನ್ ಚಿತ್ರದಲ್ಲಿ ಇದ್ದಾರೆ ಎಂದಕೂಡಲೇ ಆ ಚಿತ್ರಕ್ಕೆ ಕಾಲ್‌ಶೀಟ್ ಕೊಡುತ್ತಿದ್ದರು ಶಶಿಕುಮಾರ್.
**
ಸಾಹುಕಾರ ಚಿತ್ರದ ಒಂದು ಪಾತ್ರಕ್ಕಾಗಿ ನಿರ್ದೇಶಕರು ಇವರನ್ನು ಸಂಪರ್ಕಿಸಿದಾಗ, ಸಾಹುಕಾರನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದರೆ ಮಾತ್ರ ನಾನು ಈ ಚಿತ್ರದ ಜೂನಿಯರ್ ಸಾಹುಕಾರ್ ಪಾತ್ರ ಮಾಡ್ತೇನೆ ಎಂದು ಹಠ ಹಿಡಿದಿದ್ದರಂತೆ ಶಶಿಕುಮಾರ್, ಹೀಗಾಗಿ ರವಿಚಂದ್ರನ್ ಅವರು ದ್ವಿಪಾತ್ರದಲ್ಲಿ ನಟಿಸಬೇಕಾಗಿದ್ದ ಈ ಚಿತ್ರದ ಹಿರಿಯ ತಂದೆಯ ಪಾತ್ರಕ್ಕೆ ವಿಷ್ಣು ಅವರ ಪ್ರವೇಶವಾಯಿತು...
ಈ ಚಿತ್ರದ ವಿಷ್ಣುವರ್ಧನ್ ಪಾತ್ರ ಸೇಮ್ ಟು ಸೇಮ್ ಸಾಯಿಬಾಬಾ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು.
ಹೀಗೆ ರವಿಚಂದ್ರನ್ ಅವರಿಗೆ ಒಂದು ಪಾತ್ರ ತಪ್ಪಿಸಿದ್ದರು, ಹೀಗಾಗಿ ತಂದೆಯ ಪಾತ್ರವನ್ನು ವಿಷ್ಣುವರ್ಧನ್ ಅವರಿಗೆ ಬಿಟ್ಟುಕೊಟ್ಟು ಮಗನ ಪಾತ್ರದಲ್ಲಿ ರವಿಚಂದ್ರನ್ ನಟಿಸಿದರು,
ಅವರ ಮೇಲಿನ ಪ್ರೀತಿಗಾಗಿ ವಿಷ್ಣುವರ್ಧನ್ ಈ ಹಿಂದೆಯೇ ಪ್ರೇಮಲೋಕ, ಯಾರೇ ನೀನು ಚೆಲುವೆ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು..
(ಆ ಕಾಲದಲ್ಲೇ ತಮಿಳು ತೆಲುಗು ಚಿತ್ರಗಳಲ್ಲಿ ನಟಿಸಿದ ಕೆಲವೇ ಕೆಲವು ನಟರಲ್ಲಿ ಶಶಿಕುಮಾರ್ ಕೂಡಾ ಒಬ್ಬರು! - ಪಾಳೇಗಾರ ವಾಸು.
ಶಸಿಕುಮಾರ್ ಒಳ್ಳೆಯ ಡಾನ್ಸರ್ ಕೂಡ. ಅವರ ಮೊದಲ ಚಿತ್ರ ಚಿರಂಜೀವಿ ಸುಧಾಕರ ಆದರೆ ಎರಡನೆಯ ಚಿತ್ರವಾದ ಯುದ್ಧಕಾಂಡದಲ್ಲಿ ಅವರು ಸಿನಿಪ್ರಿಯರ ಗಮನ ಸೆಳೆದದ್ದು. ಅದರಲ್ಲಿ ವಿಲನ್ ಆದರೂ ಡಾನ್ಸರ್ ಪಾತ್ರ. ಆನಂತರ ಕೆಲವು ಚಿತ್ತಗಳಲ್ಲಿ ವಿಲನ್ ಆಗಿಯೇ ಇದ್ದರು. ಬಳಿಕ ಹೀರೋ ಆಗಿ ಭಡ್ತಿ ಪಡೆದರೂ ಆ ಚಿತ್ರಗಳು ಅಷ್ಟೇನೂ ಸಕ್ಸಸ್ ಆಗಿರಲಿಲ್ಲ. ಆದರೆ ಮಾಲಾಶ್ರೀಯೊಂದಿಗೆ ನಟಿಸಿದ 'ಪೊಲೀಸನ ಹೆಂಡ್ತಿ' ಸೂಪರ್ ಡೂಪರ್ ಆದಾಗ ಅವರು ಜನಪ್ರಿಯ ಆದರು. ಶಸಿ-ಮಾಲಾಶ್ರೀ ಅಂದಿನ ಸೂಪರ ಜೋಡಿಯಾದರು. ಆ ಜೋಡಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದರು. ರೆಡಿಮೇಡ್ ಗಂಡ, ಕನಸಿನ ರಾಣಿ, ರಾಣಿಮಹಾರಾಣಿ, ಕೊಲ್ಲೂರ ಕಾಳ. ಶಸಿಕುಮಾರ್ ಸುಪ್ರೀಂ ಹೀರೋ ಆಗಿ ಬೆಳೆದರು. - ಮೊಹಮದ್ ಇಕ್ಬಾಲ್ ಕರಿಂಗಳ.
ಶಶಿಕುಮಾರ್ ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳುವ ಚಿತ್ರ ಅಥವಾ ನಿರ್ದೇಶಕ ಬರಲಿಲ್ಲ, ಹಾಗಾಗಿ ಅವರು ಆರಕ್ಕೇರದೆ ಮೂರಕ್ಕಿಳಿಯದೆ ಇದ್ದು ಬಿಟ್ಟರು.
ಶಶಿ ಎರಡು ನಾಯಕರಿರುವ ಅಥವಾ ಮಹಿಳಾ ಪ್ರಧಾನ ಕತೆಗಳಲ್ಲಿ ಅಭಿನಯಿಸಿದ್ದೇ ಅವರ ಹಿನ್ನಡೆಗೆ ಕಾರಣ,
-GK ಅಡ್ಯಂತಾಯ)
ಅದು ಹೌದು, ಅಭಿಜಿತ್ ಸಹಾ ಹೀಗೆ ಮೂಲೆಗುಂಪಾಗಿದ್ದು.
ಶಶಿಕುಮಾರ್ ಕುಂತೀಪುತ್ರದಲ್ಲಿ ವಿಷ್ಣುವರ್ಧನ್ ಅವರಿಗಿಂತ ಹೆಚ್ಚು ಸ್ಕೋಪ್ ಇದ್ದ ಪಾತ್ರ ಸಿಕ್ಕಿತ್ತು ಇವರಿಗೆ, ಇವರಿಗೆ ಪ್ರಮುಖ ಪಾತ್ರ ನೀಡಿದ್ದ ವಿಷ್ಣುವರ್ಧನ್ ತಮಗೆ ಅನಾವಶ್ಯಕ ಬಿಲ್ಡಪ್ ಕೊಡಲು ಹೋಗಿ ಕಥೆಯನ್ನು ಹಾಳುಮಾಡಬೇಡಿ ಎಂದು ನಿರ್ದೇಶಕರಿಗೆ ಮೊದಲೇ ತಾಕೀತು ಮಾಡಿದ್ದರು, ಹೀಗಾಗಿ ಶಶಿಕುಮಾರ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಮತ್ತು ಪ್ರೇಮಿಯಾಗಿ ಮಿಂಚಿದ್ದರು.
ಅದರಲ್ಲಿ ಬರುವ ಒಂದು ಡೈಲಾಗ್ "ಈ ತೋಟದ ಮಾಲೀಕ ಶಶಿಕುಮಾರ್, ಇದರಲ್ಲಿ ಇರುವ ಹೂವು ಅವನಿಗೆ ಸೇರಬೇಕು, ತಾನು ಕೆಲವು ದಿನಗಳ ಕಾಲ ಈತೋಟದಲ್ಲಿ ಇದ್ದ ಮಾಲಿ ಅಷ್ಟೇ" ಎಂಬ ಡೈಲಾಗ್ ಗಮನ ಸೆಳೆಯುತ್ತದೆ.
ಈ ಬಗ್ಗೆ ಒಮ್ಮೆ ರೂಪತಾರಾದಲ್ಲಿ ನನಗೆ ಸಿಕ್ಕಿರುವ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ವಿಷ್ಣು ಅವರಂಥಹ ನಿಸ್ವಾರ್ಥ ಸಹನಟ ಇದುವರೆಗೂ ಸಿಕ್ಕಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.
ಅಪಘಾತವಾಗದಿದ್ದರೆ ಅವರು ಇನ್ನಷ್ಟು ಒಳ್ಳೆಯ ಚಿತ್ರಗಳಲ್ಲಿ ನಟಿಸುತ್ತಿದ್ದರು....,
ಬೆಸ್ಟ್ ಆಫ್ ಲಕ್ ಶಶಿಕುಮಾರ್ ಸರ್
By
Maruthivardhan