Saturday, January 29, 2011

ಜೋಕ್ 
ಒಂದು ಬಾರತೀಯ ಹಣ್ಣಿನ ಅಂಗಡಿಯ ಹತ್ತಿರ ಒಬ್ಬ ಅಮೇರಿಕಾದ ವ್ಯಕ್ತಿ ಬಂದು ಅಲ್ಲಿದ್ದ ಒಂದು ಸೇಬು ಹಣ್ಣನು ತೋರಿಸಿ,
ಅಮೇರಿಕ:( ಅಂಗಡಿಯವನನ್ನು ಉದ್ದೇಶಿಸಿ) ಇದು ಏನು?
ಬಾ:ಇದು ಸೇಬು ಹಣ್ಣು!
ಅ:ಇಷ್ಟು ಚಿಕ್ಕದಾ..., ನಮ್ಮ ದೇಶದಲ್ಲಿ ಒಂದು ಸೇಬು ಹಣ್ಣು ೧೫ ಕಿಲೋ ತುಗುತ್ತದೆ, ೮ ಕ್ಕಿಂತ ಹೆಚ್ಚು ಜನ ಹೊಟ್ಟೆ ತುಂಬಾ ಸವಿಯಬಹುದು.
ಬಾ: !!!???
ಅ: (ಕಿತ್ತಳೆ ಹಣ್ಣನ್ನು ತೋರಿಸಿ) ಇದು ಏನು?
ಬಾ: ಕಿತ್ತಳೆ ಹಣ್ಣು?  
ಅ:ಇಷ್ಟು ಚಿಕ್ಕದಾ..., ನಮ್ಮ ದೇಶದಲ್ಲಿ ಒಂದು ಕಿತ್ತಳೆ  ಹಣ್ಣು ೪ ಬುಟ್ಟಿಗೆ ಸಾಕಾಗುತ್ತದೆ, ಹೊತ್ತುಕೊಂಡು ಹೋಗಲು ೩ ಕ್ಕಿಂತ ಹೆಚ್ಚು ಜನ ಬೇಕು.

ಬಾ: !!!???
ಅ: (ಬಾಳೆ ಹಣ್ಣನ್ನು ತೋರಿಸಿ) ಇದು ಏನು?
ಬಾ: ಬಾಳೆ ಹಣ್ಣು.
ಅ:ಇಷ್ಟು ಚಿಕ್ಕದಾ..., ನಮ್ಮ ದೇಶದಲ್ಲಿ ಒಂದು ಬಾಳೆ  ಹಣ್ಣು ೨ ಮೀಟರ್ ಗಿಂತ ಹೆಚ್ಚು ಉದ್ದ ಇರುತ್ತದೆ 
ಬಾ: (ಮೌನವಾಗಿದ್ದ ಹಾಗು ಅವನಿಗೆ ಬೇಸರವಾಗುತ್ತಿತ್ತು)
ಅ: (ಅಂಗಡಿಯ ಮುಂದೆ ಒಂದು ದೊಡ್ಡ ಕಲ್ಲಂಗಡಿ ಹಣ್ಣಿನ ರಾಶಿ ಇತ್ತು, ಅದರಲ್ಲಿ ತುಂಬಾ ದಪ್ಪನಾದ ಒಂದು ಹಣ್ಣನ್ನು ಅಮೆರಿಕದವನು ಆರಿಸಿಕೊಂಡ & ಅದನ್ನು ಅಂಗಡಿಯವನಿಗೆ ತೋರಿಸಿ) ಇದು ಏನು?
ಬಾರತೀಯ: ಅದು.., ದ್ರಾಕ್ಷಿ ಹಣ್ಣು.
ಅಮೆರಿಕ : !!@???!!!!

Once An American man visited the indian fruit seller shop, this is the conversation between them.(american and indian shop keeper)

A:(by showing an apple to the shop keeper) What is this?
S: it is an apple.
A: is this the apple...? very small...!, in our nation one apple weighed about 15 kilo's and 8 people can share happily one apple among them.
S:???!!!  
A:(by showing an orrange to the shop keeper) What is this?

S: it is an orrange.
A: is this the orrange...? very small...!, in our nation one orrange weighed about 25 kilo's and needed 3 people to carry it.............
S:???!!!
A:(by showing an banana to the shop keeper) What is this?
S: it is a banana.
A: is this the banana...? very small...!, in our nation a banana.., is two meters long in hight.
S:(indian shopkeeper feels very bored with an american critics but answering all questions calmly...
A:(there was big stock of watermilan fruit infront of the shop, so american went near that and selected one big water mialn and showed it to the shopkeeper and asked) what is this? 
S: it is a GRAPE....!
A:!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!???????????????????????????

Friday, January 28, 2011

maruti


ವಿಷ್ಣು..., ಕೆಲವು ನೆನಪುಗಳು 
ವಿಷ್ಣು ನಮ್ಮನ್ನು ಅಗಲಿ ಒಂದು ವರ್ಷ ತುಂಬಿದೆ, ನಿನ್ನೆ ಸಿಂಹಜ್ಯೋತಿಯ ಯಾತ್ರೆಯಲ್ಲಿ ಪಾಲ್ಗೊಂಡ  ಈ ಸಂದರ್ಭದಲ್ಲಿ ಅವರನ್ನು ನೆನೆಸಿಕೊಳ್ಳುವುದಕ್ಕೆ ಇದು ಒಂದು ಸಕಾಲ.
ವಿಷ್ಣು  ಬರ್ತಡೆ ಜೋಕ್ 
ವಿಷ್ಣು ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶಿಕ್ಷಣ ತಜ್ಞ , ಸಾಹಿತಿ ಎಚ್ .ನರಸಿಂಹಯ್ಯ ನವರು ಅವರ ಅದ್ಯಾಪಕರಗಿದ್ದರು. ವಿಷ್ಣು ಗೆ ಆಗ ಸಿಹಿತಿಂಡಿ ಎಂದರೆ ಪಂಚಪ್ರಾಣ, ಗೆಳೆಯರ ಪುಸಿ ಹೊಡೆದು ಐಸ್ಕ್ರಿಮ್ , ಜಿಲೇಬಿ ಇವನ್ನು ಚೆನ್ನಾಗಿ ಹೊತ್ತೆಗಿಳಿಸುತ್ತಿದ್ದರು, ಹುಡುಗಿಯರು ಅವರ ಚಾರ್ಮ್ ಸ್ಟೈಲ್ನಿಂದ ಆಕರ್ಷಿತ ರಾಗುತ್ತಿದ್ದರಿಂದ ವಿಷ್ಣುಗೆ ದಿನವು ಯುಗಾದಿ ಹಬ್ಬದ ಬೆಲ್ಲವೇ..! ಆದರೆ ಒಂದು ದಿನ ವಿಷ್ಣುಗೆ ಸಿಹಿ ಯಾರು ತಂದುಕೊಡಲಿಲ್ಲ, ಆಗ ಅವರು ಬಲೆ ಬೀಸಿದ್ದು.., ಬೇರೆ ಯಾರಿಗೂ ಅಲ್ಲ,  ನರಸಿಂಹಯ್ಯ ಮಾಸ್ತರಿಗೆ, ವಿಷ್ಣು ಮೂಲೆಯಲ್ಲಿ ಅಳುತ್ತ ಕುಳಿತು ಬಿಟ್ಟರು, ಮಾಸ್ತರು ಬಂದು ಏಕಪ್ಪ ಎಂದು ಕಕ್ಕುಲತೆಯಿಂದ ವಿಚಾರಿಸಿದ್ದಕ್ಕೆ ಸಾರ್ ನನ್ನ ಬರ್ತಡೆ ಇವತ್ತು ನಮ್ಮ ತಾಯಿ ಐದು ರುಪಾಯಿ ಸಹ ಕೊಡದೆ ಕಳಿಸಿಬಿಟ್ಟರು, ಊಟವು ಇಲ್ಲ, ಸಿಹಿಯು ಇಲ್ಲ ಇದು ವಿಷ್ಣುವಿನ ಉತ್ತರ.., ಜೊತೆಗೆ ಅಳು ಬೇರೆ, ಸರಿ ಪಾಪ ಮಾಸ್ತರು ತಮ್ಮ ಜೇಬಿನಿಂದಲೇ ದುಡ್ಡು ತೆಗೆದು ಹತ್ತಿರದ ಸ್ವಿಟ್ ಸ್ಟಾಲ್ ನಿಂದ  ಕಾಲೇಜಿನ ಎಲ್ಲ ವಿದ್ಯರ್ಹಿಗಳಿಗೆ ಹಾಗು ಅದ್ಯಪಕರಿಗೂ ಸಿಹಿ ಹಂಚಿ ವಿಷ್ಣು ಗೆ ಸಿಂಹ ಪಾಲನ್ನೇ ನೀಡಿ , ಬರ್ತಡೆ ಆಚರಿಸಿಯೇ ಬಿಟ್ಟರು. ಎರಡು ದಿನ ಆದ ಮೇಲೆ ತಿಳಿಯಿತು ವಿಷ್ಣು ಮಾಡಿದ್ದು ತಮಾಷೆಯೆಂದು, ಆದರೆ ಮಾಸ್ತರು ಮತ್ತೆ ವಿಷ್ಣುವನ್ನು ಕರೆದು ಮತ್ತೆ ಒಂದು ಕೇಕ್ ತರಿಸಿ ಕೊಟ್ಟು ಅಪ್ಪಿಕೊಂದರಂತೆ, ಇದನ್ನು ವಿಷ್ನುರವರೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
ಗೋಕಾಕ್ ಚಳುವಳಿ:
ಪಕ್ಕದ ರಾಜ್ಯದಲ್ಲಿ ಎನ್.ಟಿ.ಆರ್ . ಎ ಎನ್ ಆರ್ ನಟಿಸಿದ ತೆಲುಗು ಚಿತ್ರಗಳೆಲ್ಲವೂ ಕನ್ನಡಕ್ಕೆ ಡಬ್ಬಿಂಗ್ ಆಗಿ.., ಸ್ತಳಿಯ ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂಬ ಕಾರಣಕ್ಕೆ ಡಾ.ರಾಜಕುಮಾರ್, ಅನಕೃ ಮುಂತಾದವರು ಗೋಕಾಕ್ ಚಳುವಳಿ ಪ್ರಾರಂಭಿಸಿದರು, ಇದು ಡಬ್ಬಿಂಗ್ ವಿರೋದಿ ಚಳುವಳಿಯಾಗಿದ್ದು, ಚಿತ್ರರಂಗಕ್ಕೆ ಸಂಬಂದಿಸಿದ ಅನೇಕ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ಪ್ರಸ್ತಾಪವು ಇದ್ದಿತು, ನಾಡಿನಾದ್ಯಂತ ಅಬುತಪುರ್ವ ಬೆಂಬಲ ವ್ಯಕ್ತವಾಗಿ ಎಲ್ಲರು ರಾಜ್ ಗೆ ಬೆಂಬಲ ನೀಡಿದರು, ಆ ಸಂದರ್ಭದಲ್ಲಿ ಗಂಧದ ಗುಡಿ ಚಿತ್ರದಲ್ಲಿ ವಿಷ್ಣು -ರಾಜ್ ನಡುವಿನ ಕೋವಿ ಪ್ರಸಂಗದಿಂದಾಗಿ ವಿಷ್ಣು ಸುಮಾರು ೧೦ಕ್ಕಿನ್ತ ಹೆಚ್ಚು ವರ್ಷ ಕಾಲ ಅಜ್ಞಾತ ವಾಸ್ ಮಾಡಬೇಕಾಯಿತು, ಚಳುವಳಿಯಿಂದಳು ಅವರನ್ನು ದೂರ ಇಡಲಾಯಿತು, ಆಗ ವಿಷ್ಣು ಮೈಸೂರಿಗೆ ಹೋಗಿ ಏಕಾಂಗಿ ಯಾಗಿ ಗೋಕಾಕ ಚಳುವಳಿ ನಡೆಸಿದರು,  ಇಡಿ ರಾಜ್ಯದ ಜನತೆಯೇ ಬೆಂಗಳುರಿನಲ್ಲಿದ್ದಾಗ , ವಿಷ್ಣು ಒಂಟಿ ಸಿಂಹ ವಾಗಿ ಮೈಸೂರಿನಲ್ಲಿ ಘರ್ಜಿಸಿದರು. ದಟ್ ಈಸ್ ವಿಷ್ಣುವರ್ಧನ್.
ನನ್ನ ಫ್ರೆಂಡ್ಸ್ ಜೋಕ್ ನನ್ನ ಬಗ್ಗೆ 
ನಾವು ೪-೫ ಜನರು ಗೆಳೆಯರು ಸೇರಿ ಚರ್ಚೆ ನಡೆಸುತ್ತಿದ್ದೆವು, ವಿಷ್ಣು ಅಭಿಮಾನಿಯಾಗಿದ್ದ ಅವರನ್ನು ಎಲ್ಲಿಯೂ ಬಿಟ್ಟು ಕೊಡುತ್ತಿರಲಿಲ್ಲ. ಈ ಬಗ್ಗೆ ಜಗಳಗಳು ಆಗುತ್ತಿದ್ದವು. ನನ್ನ ಸ್ನೇಹಿತನೊಬ್ಬ ಹೇಳಿದ ಇವನು ಮದುವೆ ಆದ ಮೇಲೆ ಇವನ ಹೆಂಡ್ತಿ ಏನಾದರು "ನಿನ್ನ ಸ್ನೇಹಿತರನ್ನು ಮರೆತು ಬಿಡು" ಎಂದರೆ ಇವನು ಏನು ಹೇಳಬಹುದು? , ಇನ್ನೊಬ್ಬ ಹೇಳಿದ "ಹೇಳೋದೇನು ಬಂತು ಹೆಂಡ್ತಿ ಹೇಳಿದ ಮೇಲೆ ಖಂಡಿತಾ ಮರೆತು ಬಿಡ್ತಾನೆ", ಮೊದಲಿನವನು ಮತ್ತೊಂದು ಪ್ರಶ್ನೆ ಎಸೆದ "ಅವಳು ಎಂದರು ವಿಷ್ಣುವರ್ಧನ್ ಅಭಿಮಾನವನ್ನು ಬಿಟ್ಟು ಬಿಡು ಎಂದು ಕಂಡಿಶನ್ ಹಾಕಿದರೆ..?",  ಮತ್ತೊಬ್ಬ ನಗುತ್ತಾ ಹೇಳಿದ ಖಂಡಿತಾ ನೂರಕ್ಕೆ ನೂರು ಬಾಗ ಬಿಟ್ಟು ಬಿಡುತ್ತಾನೆ..., ಆದರೆ ವಿಷ್ಣು'ವನ್ನಲ್ಲಾ...!, ಹೆಂಡತಿಯನ್ನು....!


ಕೊನೆಯದಾಗಿ ಎಚ್ ನರಸಿಂಹಯ್ಯ ಸಾರ್ ಬಗ್ಗೆ ಒಂದೆರೆಡು ವಿಷಯ ಹೇಳಲೇಬೇಕು . ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮಕ್ಕೆ ಸೇರಿದ ಇವರು ಶ್ರೇಷ್ಟ ಶಿಕ್ಷಣ ತಜ್ಞರು, ಗಾಂದಿ ವಾದಿಯೂ, ಬೌತಿಕ ಶಾಸ್ತ್ರಜ್ಞರು , ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಇವರಿಗೆ ೧೯೬೫ ರಲ್ಲಿ ಬಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಮೂಡ ನಂಬಿಕೆಗಳನ್ನು ವಿರೋದಿಸುತ್ತಿದ್ದ ಅವರು ವಿಜ್ಞಾನದ ಪರವಾಗಿದ್ದರು, ಸಾಯಿಬಾಬ ರವರನ್ನು, ಅವರ ಪವಾಡಗಳನ್ನು ಮೊತ್ತ ಮೊದಲ ಬಾರಿಗೆ ವಿರೋದಿಸಿದ ವ್ಯಕ್ತಿ ಎಚ್.ನರಸಿಂಹಯ್ಯ.



Thursday, January 27, 2011

ಭಾವಪೂರ್ಣ ಶ್ರದ್ಧಾಂಜಲಿ 


ನೀವು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಯಿತು, ನಿಮಗೆ ನಮ್ಮ ನಮನ.., ನಿಮ್ಮ ಹಳೆಯ ನೆನಪುಗಗಳೊಂದಿಗೆ 

ಮಾರುತಿ ವರ್ಧನ್ 

ನೀವು ಇದಕ್ಕೆ ಅಭಿಪ್ರಾಯ ಬರೆಯಬೇಕಿದ್ದರೆ 
   ಈ  ಕೆಳಗೆ ಕಾಣುವ   comments
ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
Want to write a comment? click on the word  comments below! 

Wednesday, January 26, 2011

ಸಾಹಸಸಿಂಹ ನಿಗೆ ಮೌನಯಾತ್ರೆಯ ಮೂಲಕ ಶ್ರದ್ದಾಂಜಲಿ
(ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ವಿಶ್ವ ಮಹಾಸಂಘ ದ ವತಿಯಿಂದ ಈ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.)  


ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಚಿತ್ರರಸಿಕರನ್ನು ಅಗಲಿ ಡಿಸೆಂಬರ್ 30ಕ್ಕೆ ಒಂದು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್30ರಂದು ಮೌನ ಮೆರವಣಿಗೆಯ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ವಿಷ್ಣುಪ್ರಿಯರು ಸಿಂಹಜ್ಯೋತಿಯೊಂದಿಗೆ ಮೌನ ಮೆರವಣಿಗೆಯಲ್ಲಿ ಭಕ್ತಿ ಭಾವಗಳೊಂದಿಗೆ ಪಾಲ್ಗೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

ಮೌನ ಮೆರವಣಿಗೆಯ ಪಾದಯಾತ್ರೆಯು ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಅಭಿಮಾನ್ ಸ್ಟುಡಿಯೋ ವರೆಗೆ ಸಾಗಲಿದೆ. ಡಿಸೆಂಬರ್ 30, 2010ರಂದು ಗುರುವಾರ ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. 

ಈ ಮೌನ ಮೆರವಣಿಗೆಯನ್ನು ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ವಿಶ್ವ ಮಹಾ ಸಂಘ ಹಮ್ಮಿಕೊಂಡಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು ಶ್ವೇತಬಣ್ಣದ ವಸ್ತ್ರಗಳನ್ನು ತೊಟ್ಟು ಬರಬೇಕೆಂದು ಸೂಚಿಸಲಾಗಿದೆ.

ಬಾರತದ ಇತಿಹಾಸದಲ್ಲಿ ೫೦ ಸೆಂಚುರಿ ಗಳನ್ನೂ ಬಾರಿಸಿ ಬಾರತ ಮಾತೆಯ ಕೀರ್ತಿ ಪತಾಕೆಯನ್ನು ದಿಗಂತದಲ್ಲಿ ಹಾರಿಸಿದ ಸಚಿನ್ ತೆಂಡೂಲ್ಕರ್ ಗೆ ಅಭಿನಂದನೆಗಳು.
ನನ್ನ ಬಗ್ಗೆ: ನಾನು ದೇವ ಹಾಗು ಕರುಣಾಮಯಿ ಚಿತ್ರಗಳನ್ನು ನೋಡಿ ವಿಷ್ಣುರವರ ಅಭಿಮಾನಿಯಾದೆ, ಮುತ್ತಿನ ಹಾರ, ನಾಗರಹಾವು, ಸಾಮ್ರಾಟ್, ಲಾಲಿ ನನ್ನ ಫೆವರೆಟ್ ಚಿತ್ರಗಳು, ನಾನು ಕನ್ನಡ ಭಾಷೆ, ಮತ್ತು ಹಿಂದೂ ಸಂಸ್ಕೃತಿ ಯಾ ಬಗ್ಗೆ ಅಭಿಮಾನ ಉಳ್ಳವನಾಗಿದ್ದು ಕಾದಂಬರಿಗಳ ಪ್ರಿಯನು ಆಗಿದ್ದೇನೆ, ಈ ಸೈಟ್ ಅನ್ನು ನಾನು ಇತ್ತೀಚಿಗೆ ಡಿಸೈನ್  ಮಾಡಿದ್ದು.., ಮುಂಬರುವ ದಿನಗಳಲ್ಲಿ ಹಿಂದೂ ದರ್ಮದ ಶ್ರೆಸ್ಟತೆ, ಕನ್ನಡದ ಅತ್ಯುತ್ತಮ ಕಾದಂಬರಿಗಳು, ಕನ್ನಡ ಮತ್ತು ಇಂಗ್ಲಿಶ್ ವ್ಯಾಕರಣ, ಮಾನವೀಯತೆ, ಸ್ಟೈಲ್, ಡ್ರೆಸ್ ಹೇಗೆ ಮಾಡಿಕೊಳ್ಳಬೇಕು, ಯಾವ ಕಳ್ಳರಿಗೆ ಯಾವ ಶಿಕ್ಷೆ ನೀಡಬೇಕು, ಮೋಕ್ಷ ಪಡೆದುಕೊಳ್ಳುವುದು ಹೇಗೆ, ಯಾವ ರೀತಿಯ ಕಲಾವಿದರನ್ನು ಗೌರವಿಸಬೇಕು, ನಮ್ಮ ಮಕ್ಕಳಿಗೆ , ಕುಟುಂಬ ಸದಸ್ಯರಿಗೆ ಯಾವ ರೀತಿಯ ಚಲನ ಚಿತ್ರಗಳನ್ನು ತೋರಿಸಬಾರದು, ಮಕ್ಕಳನ್ನು ಶಿಕ್ಷಿಸದೆಯೇ ಹೇಗೆ ತಿದ್ದಬಹುದು ಹಾಗು ನಾನು ಓದಿರುವ ಉತ್ತಮವಾದ ಕಾದಂಬರಿಗಳ ಬಗ್ಗೆಯೂ ವಿಷ್ಯ ತಿಳಿಸಲಿದ್ದೇನೆ, ಬಸ್ ಸ್ಟಾಂಡಿನಲ್ಲಿ ಹೇಗೆ ಇರಬೇಕು, ಕಾಲೇಜಿನಲ್ಲಿ ಹೇಗೆ ಇರಬೇಕು, ಮುಖಕ್ಕೆ ಏನು ಹಚ್ಚಬೇಕು, ಯಾವ ಸಾಬೂನು ಬಳಸಬೇಕು, ಇವೆ ಮುಂತಾದ ವಿಚಾರಗಳು ಅಲ್ಲದೆ, ಬಾರತದ ಇಂದಿನ ಜನಸಂಖ್ಯೆ , ಅರ್ಥಿಕ, ಕೈಗಾರಿಕೆಗಳ ಬಗ್ಗೆಯೂ ಚರ್ಚಿಸಲಿದ್ದೇನೆ, ಆಗಾಗ್ಗೆ ಬೇಟಿ ನೀಡುತ್ತಿರಿ..., 
ನನಗೆ ಎಲ್ಲಿಯಾದರೂ ಜಾಬ್ ಫೆಸಿಲಿಟಿ ಇರುವುದು ತಿಳಿದುಬಂದರೆ ಆ ವಿವರಗಳನ್ನು ಇಲ್ಲಿ ತುಂಬಲಿದ್ದೇನೆ. ನೆನಪಿಡಿ ಮುಂಬರುವ ಎಲ್ಲ ಲೇಖನಗಳನ್ನು ಕನ್ನಡದ ಜೊತೆಗೆ ಇಂಗ್ಲಿಶ್ ಅನುವಾದವನ್ನು ನೀಡಲಿದ್ದೇನೆ,


ನನ್ನ ಪ್ರೀತಿಯ ಸ್ನೇಹಿತರೆ ಮೇಲೆ ಹೇಳಿದ ಎಲ್ಲ ವಿಷಯಗಳನ್ನು ಕೆಲವೇ ಸಂದೇಶಗಳಲ್ಲಿ ವಿವರಿಸಲು ಸಾದ್ಯವಿಲ್ಲ, ಅದಕ್ಕಾಗಿ ಈ ಬ್ಲಾಗ್ ನ ಪ್ರಾರಂಭದಲ್ಲಿ ಎಲ್ಲ ವಿಷಯಗಳ ಬಗ್ಗೆ ಪೇಜ್ ಲಿಂಕ್ ಗಳನ್ನೂ ಅಳವಡಿಸಿದ್ದು, ಸಂಬಂದಪಟ್ಟ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಆ ವಿಷಯಕ್ಕೆ ಸಂಬಂದಿಸಿದ ವಿವರಗಳನ್ನು ಪಡೆಯಬಹುದಾಗಿದೆ.


ಇಂತಿ ನಿಮ್ಮ ಪ್ರೀತಿಯ ಸ್ನೇಹಿತ ಮಾರುತಿವರ್ಧನ್.

 ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೀವು ಇದಕ್ಕೆ ಅಭಿಪ್ರಾಯ ಬರೆಯಬೇಕಿದ್ದರೆ 
   ಈ  ಕೆಳಗೆ ಕಾಣುವ   comments
ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
Want to write a comment? click on the word  comments below!

Monday, January 24, 2011

ಮೊನ್ನೆ ಆರ್ಕುಟ್ನಲ್ಲಿ ನಾನು ಒಂದು ಕಾಮೆಂಟ್ ಪೋಸ್ಟ್ ಮಾಡಿದೆ, ಕೂದಲೆ ಅಸ್ತ್ರ ಎನ್ನುವ ಸ್ನೇಹಿತರೊಬ್ಬರು ರಿಪ್ಲೈ ಕೊಡಲಾರಮ್ಬಿಸಿದರು, ಆ ಸಂಬಾಶಣೆಯ ತುಣುಕುಗಳು ಇಲ್ಲಿವೆ, ನೀವೆ ಓದಿ, ಯಾವುದು ಸರಿ ಎಂದು ನೀವೇ ತೀರ್ಮಾನಿಸಿ.


ಮಾರುತಿವರ್ಧನ್ :ಈ ಕೈ ಕರ್ನಾಟಕದ ಆಸ್ತಿ, ಈ ಐದು ಬೆರಳುಗಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ, ಬೆರಳನ್ನು ಮುಸ್ಟಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿರೋದು ಚರಿತ್ರೆನಲ್ಲೇ ಇಲ್ಲಾ..., ಈ ಕದಂಬ ಒಂತರಾ ಕರೆಂಟ್ ಇದ್ದಂತೆ , ಪ್ರೀತಿಯಿಂದ ಸ್ವಿಚ್ ಹಾಕಿದ್ರೆ ಬೆಳಕು ಕೊಡ್ತಾನೆ, ಕೋಪದಲ್ಲಿ ಕೈ ಹಾಕಿದ್ರೆ ಶಾಕು.......!
ಅಸ್ತ್ರ:  Cinema heroism dialogue's badukalli anvayisodilla Maruthi.. adella manoranjanege saaku. Maruthi bere yaro vyakti hesarina jote gurutisikollodakinta tannade chaapu moodisali anta haaraisuttene! Good morning




ಮಾರುತಿವರ್ಧನ್  :mr. Astra idu sinima dailag ok, i agree with you, but it contain Patriotism ( deshaprema) , always look on the bright side of the thing, and every thing contains both dark and bright like coin contain 2 sides, we should follow good things, and forget the bad things


 ಅಸ್ತ್ರ Ha ha ha.. ellide nimma nivu haakiro cinema dialoguealli Desha prema???. 5 beralu annodu 5 koti kannadigara shakti annoda? (adu eegaagle 6 koti aagide), yaarige gudiyodu nimma kai?. Kuvempu elidante, 'kannadakaagi kai ettu ninna kai kalpavruksha aagute' anno dialoguegoo, nivu haakiro dialoguegoo estu vytyasa ide nodi. illi desha prema annodu illa bari heroism alva friend irodu? sariyagi & coolaagi yochisi!


ಮಾರುತಿವರ್ಧನ್: ಅದರಲ್ಲಿ ಒಂದು ಕೋಟಿ ವೇಸ್ಟ್ ನನ್ನ ಮಕ್ಕಳು
 ಅಸ್ತ್ರ ndu koti janarannu nivu ishtu heenavaagi waste nanna makkalu endu maatanaaduvude heluttade nimagiruva desha prema.. Shabhaash gurugale naanu hordtini..! Navu bari cinema diealogue hodedu kondu waste aagabaradu ashte..! Deshakoskara nijavaagi enaadaru maaduvudaadare kecchede inda nimmannu abhinandisuttene.. Pls visit: http://bangaloreslumyouth.blogspot.com/2009_07_08_archive.html


ಮಾರುತಿವರ್ಧನ್  :ಕೆಟ್ಟವರು ನಮ್ಮ ರಾಜ್ಯದವರಾದರೇನು?, ಪಾಕಿಸ್ಠಾನ ದವರಾದರೇನು , ನನ್ನ ಸ್ವಂತ ಅಣ್ಣನೊ, ತಮ್ಮನೋ ಉಗ್ರಗಾಮಿಯಾದ್ರೆ ಅವನನ್ನು ಕ್ಶಮಿಸಲು ಸಾದ್ಯವಿಲ್ಲ್, ವೇಸ್ಟ್ ನಮ್ಮ ರಾಜ್ಯದವರೇ ಆಗಿದ್ದು ಅವರನ್ನು ಅವರನ್ನು ಗುರುತಿಸಿ ಗಲ್ಲಿಗೇರಿಸುವುದೇ ನಿಜವಾದ ದೆಶಪ್ರೇಮ www.maruthivishnuvardhan.blogspot.com


 ಅಸ್ತ್ರ Nivu hodeyo dialogue nodidrene gotaagutte bidi sir, nimge ee raajyada janasankhyene gottila. adanna samartisikolloke 1 koti janaranna waste nanna makalu antira.. eega idakkidante terrorism kade hortbitri.. Raajakaarani aago ella lakshana ide nimge.. Congrats!. Adu sari nimante kanasugalanna ittukondiro yuvakaru ugragaamigalaagi saayoke horatirodu yaake anta gota?. Gotidre heli.. Vasanth hatra nanna number tagondu phone maadi heli eega busy iddin hordtini. bye


ಮಾರುತಿವರ್ಧನ್:ನೀವು ಹೇಳೊದು ನೋದಿದ್ರೆ ಫಾರಿನ್ ನಲ್ಲಿ ಚರ್ಚ್ ಪಾದ್ರಿಗಳು ತಪ್ಪು ಮಾಡಿದ್ರೆ ಅದು ರೇಪ್, ಅತ್ಯಾಚಾರ, ಅದೆ ನಮ್ಮ ರಾಜ್ಯದ ನಿತ್ಯಾನಂದ ಸ್ವಾಮಿ ಮಾಡಿದ್ರೆ ಮಾದಿದ್ರೆ ಪ್ರಣಯ, ಅನ್ನೊ ತರಾ ಇದೆ, ನಾನು ಹೇಳಿದ್ದು ತಪ್ಪು ಯಾರು ಮಾಡಿದ್ರು ತಪ್ಪೇ.., ನಮ್ಮವರು ಪರರು ಅನ್ನೋದೆಲ್ಲಾ ಇಲ್ಲ, ತಪ್ಪನ್ನು ತಪ್ಪು ಅಂತಲೂ ವೇಸ್ಟ್ ಅನ್ತ್ ಹೇಲಿದ್ರೆ , ರಾಜಕೀಯ ಸೇರು ಅನ್ತಿರಾ.., ಇಸ್ಟೆಲ್ಲಾ ಸೇರಿದ ಮೇಲೆ ಏನಾದರು ಸಾದನೆ ಮಾಡು ಅ೦ತ ಹೇಳ್ತಿರಾ.., ನನ್ನನ್ನೆ ಉಗ್ರಗಾಮಿ ಅಂತಿರಾ, ಉಗ್ರಗಾಮಿ ಆಗೋಕೆ ನನ್ನ ಹತಿರ ಯಾವ "ಅಸ್ತ್ರ" ವೂ ಇಲ್ಲ, ನೀವು ಬ್ಯುಸಿ ಇದ್ರೆ ನಾಳೆ ಲಾಗ್ ಅನ್ ಮಾಡ್ದಾಗ ಒದಿಕೊಳ್ಳಿ


ಬೈರವ್ ಕೋಡಿ : es u r right mr, vishnu vardhan


ನಿಮ್ ಕಾಮೆಂಟ್ ಚನ್ನಾಗಿದೆ ಹಾಗೆ ಹಾಸ್ಯವಿರಲಿ ಅಪಹಾಸ್ಯ ಬೇಡ ಯಾರಿಗೂ ನೋವು ಮಾಡುವ ಉದ್ದೇಶ ಖಂಡಿತ ಬೇಡ ಇಂತಹ ನೆಟ್ ವರ್ಕ್ ಗಳು ಸಿಕ್ಕಿರೋದೆ ನಮ್ಮ ಬಾಗ್ಯ ಎಲ್ಲಾ ಆರ್ಕುಟ್ ಬಂದುಗಳ ಪರವಾಗಿ ನಿಮ್ಮಲ್ಲಿ ನನ್ನದೊಂದು ವಿನಂತಿ...ಬೇಸರಬೇಡ


ಮಾರುತಿವರ್ಧನ್ :ನಾನು ಕದಂಬ, ನನ್ನ ಕೈ ಕರ್ನಾಟಕ ದ ಆಸ್ತಿ ಎನ್ದರೆ ತಪ್ಪೇನು?, ನಾನು ಕರೆಂಟ್ ಎನ್ದರೆ ತಪ್ಪೇನು?, ಇದು ಸಿನಿಮಾ ಡೈಲಾಗೆ ಇರಲಿ, ಅದ್ರೆ ಒನ್ದು ವಿಷಯ, ಇತ್ತಿಚೆಗೆ ಕನ್ನದದಲ್ಲಿ ಬರುತ್ತಿರುವ ರೌಡಿಸಂ ಚಿತ್ರಗಳಲ್ಲಿ ರೌಡಿಗಳನ್ನು ವೈಬವೀಕರಿಸಲಾಗುತ್ತದೆ, ಸಿನಿಮಾ ನೋದಿದ ಜನ ತಾವು ಅದೇ ರೀತಿ ಅನುಕರ‍ಣ್ತ್ ಮಾಡ್ತಾ ಇದ್ದಾರೆ, ಉದಾಹರಣೆಗೆ ಇಂದು ಇಬ್ಬರು ಸ್ನೇಹಿತರು ಬಸ್ಸಿನಲ್ಲೋ, ಪಾರ್ಕಿನಲ್ಲೋ ಬೇಟಿಯಾದರೆ ಅವರ ಸಂಭಾಶಣೆ ಈ ರೀತಿ ಇರುತ್ತದೆ, "ಏನೊ ಮಗಾ", "ಏನೊ ಮಚ್ಹಾ..!", "ಅವಳಿಗೆ ಆಸಿಡ್ ಹಾಕ್ಬೇಕು", ಹೀಗೆ, ಆದ್ರೆ ಕದಂಬ ಚಿತ್ರದಂಥಹ ಸದಭಿರುಚಿಯ ಚಿತ್ರಗಳನ್ನು ನೋದುವ ಮದ್ಯಮ ವರ್ಗದ ಜನರು "ಏನು ಮೇಡಂ ಚೆನ್ನಾಗಿದ್ದಿರ?" "ಊಟ ಅಯ್ತಾ..?, " , "ಭಾರತಿ ಹೇಗೆ ಓದುತ್ತಿದ್ದಾಳೆ", "ಅಮ್ಮ ಚೆನ್ನಾಗಿದ್ದಾರಾ.." ಈ ರೀತಿ ಮಾತನಾಡುತ್ತಾರೆ, ಮೊದಲನೆ ವರ್ಗದ ಜನರನ್ನು ನಾನು ವೇಶ್ಟ್ ನನ್ನ ಮಕ್ಕಳು ಎಂದೆ ಸರಿ,  ಅದ್ರೆ ನಾನು ಆ ಚಿತ್ರಗಳನ್ನು ನೋದಿ ಅದೇ ರಿತಿ ಅನುಕರಿಸುತ್ತಿಲ್ಲ, ಬದಲಿಗೆ ಅವರ ಬಗ್ಗೆ ನನಗಿರುವ ಅಸಮಾದಾನವನ್ನು ಹೊರಗೆ ಹಾಕಿದೆ ಅಸ್ಟೇ..! , ಇತ್ತಿಚಿನ ಸಿನಿಮಾ ಹೀರೋ ಗಳು ಮೌಲ್ಯಗಳಿಗಿಂತ ಹಣಕ್ಕೆ ಪ್ರಾಶಸ್ತ್ಯ ನೀಡಿ, ಸಮಾಜವನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾರೆ, ಅದಕ್ಕೆ ಉದಾಹರಣೆ ಯೆ ಮೇಲಿನ ಡೈಲಾಗ್ ಗಳು, ಆದರೆ ಸಿನಿಮಾ ಡೈಲಾಗಗಳನ್ನೆ ಹೊಡೆದರೂ ನಾನು ಸದಭಿರುಚಿಯ ಚಿತ್ರಗಳ  ಪ್ರೇಕ್ಶಕ, ಹಾಗು ಕೆಟ್ಟ ಚಿತ್ರಗಳನ್ನು ವಿರ‍ೊದಿಸುತ್ತೆನೆ. ಇನ್ನೊಂದು ವಿಶಯ ಹೇಳುತ್ತೆನೆ ಸಿನಿಮಾ ನೋದುವವರು ಟೈಂ ವೇಸ್ಟ್ ಮಾದುತ್ತಾರೆ, ಸಿನಿಮಾ ಡೈಲಾಗ ಹೊಡೆಯುವವ್ವರು ನಿಶ್ಪ್ರಯೋಜಕರು ಎಂಭು ದು ಸುಳ್ಳು, ಓಳ್ಳೆಯ ಚಿತ್ರಗಳಿಂದ ಸಮಾಜ ಸುಡಾರಣೆ ಸಾದ್ಯ, ಆದರೆ ಆ ಚಿತ್ರಗಳನ್ನು ವೀಕ್ಶಿಸಿ ಅಂಥಹ ನಿರ್ದೆಶಕ ಮತ್ತು ನಟರಿಗೆ ಪ್ರೊತ್ಸಾಹ ನೀಡಬೇಕು. ಮತ್ತೆ ಒಂದು ವಿಶಯ ಕರ್ನಾಟಕದಲ್ಲಿ ಒಂದು ಕೋಟಿ ಮುಟ್ಟಾಳರು, ಕೊಲೆಗಡುಕರು, ರೌಡಿಗಳು , ಲಂಚಕೋರರು ಇದ್ದಾರೆ ಅದು ಸತ್ಯ. ಹಾಗೆಯೆ ೫ ಕೋಟಿ ಜನರು ಸಾದ್ವಿಗಳು ಅವರೆ ನಮ್ಮ ಕನ್ನಡದ ಶಕ್ತಿ, ಸಂಪತ್ತು, ಅವರನ್ನು ಹೋಗಳುವುದು ಹಾಗು ಕೆಟ್ಟವರನ್ನು ಹೀಯಳಿಸಿ , ಜೈಲಿಗೆ ಕಳುಹಿಸುವುದು ನಿಜವಾದ ದೇಶಪ್ರೇಮ. ಅವರು ನಮ್ಮ ರಾಜ್ಯದವರ‍ೆ ಆಗಿದ್ದರು ಸಹ ನಮ್ಮವರೆಂದು ಹೇಳಿಕೊಳ್ಳಲು ನನಗೆ ನಾಚಿಕೆ ಆಗುತ್ತದೆ  


ಅಸ್ತ್ರ Chenaagide, Nivu karntakada 1 koti janaranannu 'Waste nanna makkalu' andiddu sari anta heltira? jotege nivu ಈ ಕೈ ಕರ್ನಾಟಕದ ಆಸ್ತಿ, ಈ ಐದು ಬೆರಳುಗಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ, ಬೆರಳನ್ನು ಮುಸ್ಟಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿರೋದು ಚರಿತ್ರೆನಲ್ಲೇ ಇಲ್ಲಾ..., ಈ ಕದಂಬ ಒಂತರಾ ಕರೆಂಟ್ ಇದ್ದಂತೆ , ಪ್ರೀತಿಯಿಂದ ಸ್ವಿಚ್ ಹಾಕಿದ್ರೆ ಬೆಳಕು ಕೊಡ್ತಾನೆ, ಕೋಪದಲ್ಲಿ ಕೈ ಹಾಕಿದ್ರೆ ಶಾಕು.......! anta heliddu Desha prema anta heltira?




ಬೈರವ್ ಕೋಡಿ, :ಸಾರಿ Mr.Maruthi Vishnuvardhan ನಿಮ್ ಮದ್ಯೆ ಕಾಮೆಂಟ್ ಹಾಕಬಾರದಿತ್ತು ಹಾಕಿದ್ದಕ್ಕೆ ಕ್ಷಮೆ ಇರಲಿ, ಚರ್ಚೆ ಮಾಡೋ ಅಷ್ಟು ಯೋಗ್ಯತೆ, ಸಮಯ ಎರಡು ನನ್ನಲ್ಲಿಲ್ಲ ಬೇಸರವಿದ್ದರೆ ಅನ್ಯತಃ ಭಾವಿಸದೆ ಕ್ಷಮಿಸಿ


ಮಾರುತಿವರ್ಧನ್ : bhyrav nimma kament nalli enuu tappilla, nivu karekt agiye heliddira


ಸತೀಶ್ : ಅಣ್ಣ ವಿಷ್ಣು, ನಾನು ನನ್ನ ಹತ್ತನೇ ವಯಸ್ಸಿನಿಂದ ವಿಷ್ಣು ಅಭಿಮಾನಿ , ಆದರೆ ನೀವು ಯಾವುದೋ ವಿಷಯಕ್ಕೆ ಸಂಬಂಧ ಇಲ್ಲದಿರೋ ಯಾವ ಯಾವುದೊ ವಿಷಯಗಳನ್ನು ತಳಕು ಹಾಕುತಿದ್ದೀರಲ್ಲ ಸರಿಯೇ



Sunday, January 23, 2011

ನನ್ನ ಪ್ರೀತಿಯ ಸ್ನೇಹಿತರೆ., ೪೦ ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವ ೭೭ ನೆ ಕ.ಸಾ.ಸ.ಕ್ಕೆ ನಿಮಗೆ ಸುಸ್ವಾಗತ, 
 ಹೆಚ್ಚಿನ ವಿವರಗಳಿಗಾಗಿ  ಬೇಟಿ ಕೊಡಿ.


http://www.kasapa.kar.nic.in/


(ಈ ವಿವರಗಳ ಕೊನೆಯಲ್ಲಿ ಆಮಂತ್ರಣ ಪತ್ರಿಕೆಯ ಫೋಟೋಗಳನ್ನು ಕೊಡಲಾಗಿದೆ)
ಬೆಂಗಳೂರು, ಫೆ. 2: 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಗರದಲ್ಲಿ ಇದೇ ಫೆಬ್ರವರಿ 4, 5 ಮತ್ತು 6 ರಂದು ನಡೆಯಲಿದೆ. ಸಮ್ಮೇಳನವು ಪ್ರಧಾನವಾಗಿ ಕೆ.ಆರ್. ರಸ್ತೆಯಲ್ಲಿರುವ ನ್ಯಾಷನಲ್ ಕಾಲೇಜ್ ಮೈದಾನ, ಪಕ್ಕದ ಮಹಿಳಾ ಸಮಾಜ ಮತ್ತು ಕುವೆಂಪು ಕಲಾಕ್ಷೇತದಲ್ಲಿ ಸಂಭ್ರಮ ಸಡಗರದಿಂದ ನಡೆಯಲಿದೆ. ಈ ಮೂರು ದಿನಗಳ ಕನ್ನಡ ಸಾಹಿತ್ಯ ಜಾತ್ರೆಯ ಕಾರ್ಯಕ್ರಮ ವಿವರ ಸಂಕ್ಷಿಪ್ತವಾಗಿ ಹೀಗಿದೆ.

ಧ್ವಜಾರೋಹಣ: 4-2-2011 ಶುಕ್ರವಾರ ಬೆಳಗ್ಗೆ 8.30ಕ್ಕೆ

ಸಮ್ಮೇಳನಾಧ್ಯಕ್ಷರ ಮೆರವಣಿಗೆ:
 4-2-2011 ಶುಕ್ರವಾರ ಬೆಳಗ್ಗೆ 8.30ಕ್ಕೆ
ಮೆರವಣಿಗೆ ಮಾರ್ಗ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂಭಾಗದಿಂದ ಪ್ರಾರಂಭವಾಗಿ ಜೆ.ಸಿ. ರಸ್ತೆ, ಮಿನರ್ವ ವೃತ್ತ ಮಾರ್ಗವಾಗಿ ನ್ಯಾಷನಲ್ ಕಾಲೇಜು ಮೈದಾನದವರೆಗೆ.

ಉದ್ಘಾಟನಾ ಸಮಾರಂಭ
4-2-2011 ಶುಕ್ರವಾರ ಏರುಹೊತ್ತು 1.00ಕ್ಕೆ
ಉದ್ಘಾಟಕರು: ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ, ಕರ್ನಾಟಕ ಸರಕಾರ
ಸಮ್ಮೇಳನಾಧ್ಯಕ್ಷರ ಭಾಷಣ: ಪ್ರೊ. ಜಿ. ವೆಂಕಟಸುಬ್ಬಯ್ಯ
'ಬೆಂಗಳೂರು ಬಾಗಿನ' ಸ್ಮರಣ ಸಂಚಿಕೆ ಬಿಡುಗಡೆ: ಎಂ. ವೀರಪ್ಪ ಮೊಯ್ಲಿ, ಕೇಂದ್ರ ಕಾನೂನು ಸಚಿವ

ಗೋಷ್ಠಿಗಳುಗೋಷ್ಠಿ 1: ಕನ್ನಡ ಸಮುದಾಯದ ಆತಂಕಗಳು
4-2-2011 ಶುಕ್ರವಾರ ಇಳಿಹೊತ್ತು 4.30ಕ್ಕೆ
ಅಧ್ಯಕ್ಷತೆ: ಪ್ರೊ. ಕೆ.ಇ. ರಾಧಾಕೃಷ್ಣ

ಗೋಷ್ಠಿ 2: ಬೆಂಗಳೂರು

5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ನ್ಯಾ.ಎ.ಕೆ. ಸದಾಶಿವ

ಗೋಷ್ಠಿ 3: ದೇಶಿ ಸಂಸ್ಕೃತಿ - ತವಕ ತಲ್ಲಣಗಳು

5-2-2011 ಶನಿವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಪ್ರೊ. ಎಸ್.ಜಿ. ಸಿದ್ಧರಾಮಯ್ಯ

ಗೋಷ್ಠಿ 4: ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ 

5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ನಡೆಸಿಕೊಡುವವರು: ಡಾ. ಭೈರಮಂಗಲ ರಾಮೇಗೌಡ

ಗೋಷ್ಠಿ 5: ಕಾವ್ಯವಾಚನ - ಗಾಯನ 

5-2-2011 ಶನಿವಾರ ಇಳಿಹೊತ್ತು 4.00ಕ್ಕೆ
ಅಧ್ಯಕ್ಷತೆ: ಡಾ. ಯು.ಆರ್. ಅನಂತಮೂರ್ತಿ

ಗೋಷ್ಠಿ 6: ಹಾಸ್ಯ ಸಂವೇದನೆ

5-2-2011 ಶನಿವಾರ ಇಳಿಹೊತ್ತು 9.30ಕ್ಕೆ
ಅಧ್ಯಕ್ಷತೆ: ಡಾ. ಎಂ. ಕೃಷ್ಣೇಗೌಡ

ಸನ್ಮಾನ ಸಮಾರಂಭ: 

6-2-2011 ಭಾನುವಾರ ಏರುಹೊತ್ತು 11.30ಕ್ಕೆ
ಏಣಗಿ ಬಾಳಪ್ಪ ಅವರಿಂದ ಹಿಡಿದು ಬಿ. ಪುರುಷೋತ್ತಮ ಅವರವರೆಗೆ ಒಟ್ಟು ೧೩೮ ಗಣ್ಯರಿಗೆ ಸನ್ಮಾನ
ಸಾನ್ನಿಧ್ಯ: ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ
ಸನ್ಮಾನಿಸುವವರು: ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

ಬಹಿರಂಗ ಅಧಿವೇಶನ: 

6-2-2011 ಭಾನುವಾರ ಇಳಿಹೊತ್ತು 3.00ಕ್ಕೆ
ಅಧ್ಯಕ್ಷತೆ: ಡಾ. ನಲ್ಲೂರು ಪ್ರಸಾದ್ ಆರ್.ಕೆ.
ನಿರ್ಣಯಗಳ ಮಂಡನೆ: ಪುಂಡಲೀಕ ಹಾಲಂಬಿ
ಸಮಾರೋಪ ಸಮಾರಂಭ: 
ಸಾನ್ನಿಧ್ಯ: ಶ್ರೀ ಡಾ. ಬಸವಲಿಂಗ ಪಟ್ಟದೇವರು
ಸಮ್ಮೇಳನಾಧ್ಯಕ್ಷರ ನುಡಿ: ಪ್ರೊ. ಜಿ. ವೆಂಕಟಸುಬ್ಬಯ್ಯ

ಸಮಾನಾಂತರ ಗೋಷ್ಠಿಗಳು -1
ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರಂ


ಗೋಷ್ಠಿ 1: ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು 

4-2-2011 ಶುಕ್ರವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ಸಿ.ಎನ್. ರಾಮಚಂದ್ರನ್

ಗೋಷ್ಠಿ 2: ಕನ್ನಡ ರಂಗ ಚಳುವಳಿಗಳು
5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಬಿ.ವಿ. ಜಯರಾಂ

ಗೋಷ್ಠಿ 3: ನಾಡಪ್ರಭು ಕೆಂಪೇಗೌಡ
5-2-2011 ಶನಿವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಪ್ರೊ. ಹ.ಕ. ರಾಜೇಗೌಡ

ಕವಿಗೋಷ್ಠಿ 
5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ಬಿದರಹಳ್ಳಿ ನರಸಿಂಹಮೂರ್ತಿ

ಗೋಷ್ಠಿ 4: ಕನ್ನಡ ಪ್ರಜ್ಞೆ - ಸಮೂಹ ಮಾಧ್ಯಮಗಳು
5-2-2011 ಶನಿವಾರ ಇಳಿಹೊತ್ತು 4.30ಕ್ಕೆ
ಅಧ್ಯಕ್ಷತೆ: ಡಿ.ಪಿ. ಪರಮೇಶ್ವರ

ಗೋಷ್ಠಿ 5: ಚಲನಚಿತ್ರ ಮತ್ತು ಕಿರುತೆರೆ
6-2-2011 ಭಾನುವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಪದ್ಮಭೂಷಣ ಡಾ.ಬಿ. ಸರೋಜಾದೇವಿ

ಗೋಷ್ಠಿ 6: ಸಾಮಾಜಿಕ ಹಕ್ಕುಗಳು ಮತ್ತು ಕಾನೂನು 
6-2-2011 ಭಾನುವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ನ್ಯಾ. ಎಸ್.ಆರ್. ನಾಯಕ್

ಸಮಾನಾಂತರ ಗೋಷ್ಠಿಗಳು -2
ಸ್ಥಳ: ಮಹಿಳಾ ಸಮಾಜ, ಕೆ.ಆರ್. ರಸ್ತೆ


ಗೋಷ್ಠಿ 1: ಕನ್ನಡ ಪುಸ್ತಕೋದ್ಯಮ 
4-2-2011 ಶುಕ್ರವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ಸಿದ್ಧಲಿಂಗಯ್ಯ

ಗೋಷ್ಠಿ 3: ಮಹಿಳೆ 
5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಲೀಲಾದೇವಿ ಆರ್. ಪ್ರಸಾದ್
ಕವಿಗೋಷ್ಠಿ 
5-2-2011 ಶನಿವಾರ ಏರುಹೊತ್ತು 12.30ಕ್ಕೆ
ಅಧ್ಯಕ್ಷತೆ: ಡಾ. ಶ್ರೀರಾಮ ಇಟ್ಟಣ್ಣನವರ

ಗೋಷ್ಠಿ 3: ಮಕ್ಕಳ ಸಾಹಿತ್ಯ 
5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ನಾ. ಡಿಸೋಜ

ಗೋಷ್ಠಿ 4: ಪರಂಪರೆ ಮತ್ತು ಕನ್ನಡ 

6-2-2011 ಭಾನುವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಪುಸ್ತಕ ಮನೆ ಹರಿಹರಪ್ರಿಯ

ಗೋಷ್ಠಿ 5: ಕನ್ನಡದಲ್ಲಿ ಅನುವಾದ ಸಾಹಿತ್ಯ 
6-2-2011 ಭಾನುವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಡಾ. ಪ್ರಧಾನ ಗುರುದತ್

ಆಮಂತ್ರಣ ಪತ್ರಿಕೆಯ ಫೋಟೋಗಳು