Thursday, August 15, 2019

ಹಾಸ್ಯ ಅನುಭವ

ಹಾಸ್ಯ ಅನುಭವ:
ನಾನು ಮಾರುತಿ 10th ಪಾಸ್ ಆಗಿ PUC ಗೆ ಅಡ್ಮಿಷನ್ ಮಾಡ್ಸೋಕೆ ಅಂತ ಗೌರಿಬಿದನೂರಿನ ಆಚಾರ್ಯ ಕಾಲೇಜಿಗೆ ಹೋಗಿದ್ದೆ, ನನ್ನ ಮಾವ ಶಿವಶಂಕರ ಜೊತೆಗೆ ಸಹಾಯ ಮಾಡಲಿಕ್ಕೆ ಬಂದಿದ್ದವನು ಕ್ಲರ್ಕ್ ಬರೋದು ತಡವಾಗಿದ್ದಕ್ಕೆ ಹಿಂಗಿಂಗೆ ಮಾಡು ಎಂದು ಹೇಳಿ ಇನ್ಸಟ್ರಕ್ಷನ್ ಕೊಟ್ಟು ಎಸ್ಕೇಪ್😠 ಆಗಿಬಿಟ್ಟ...,
ನನಗೋ ಅಷ್ಟಾಗಿ ಬುದ್ದಿ ಇರಲಿಲ್ಲ.. (ಈಗ ಬುದ್ದಿ ಇದೆ, ಆದರೆ ನಮ್ಮ ಕುಟುಂಬ ಸದಸ್ಯರು ಇದನ್ನು ಒಪ್ಪುವುದಿಲ್ಲ😠)

ನನಗೆ "ಅಡ್ಮಿಷನ್" ಎಂಬ ಒಂದು ಕೆಲಸ ತುಂಬಾ ದೊಡ್ಡದು.. ಅದರಲ್ಲಿ ಏನೇನೋ ಇರುತ್ತದೆ.. ತುಂಬಾ ಪ್ರೊಸೀಜರ್ ಇರುತ್ತವೆ.. ಈ ಕೆಲಸ ಬಾರಿ ಕಾಂಪ್ಲಿಕೇಟೆಡ್ ಎಂಬ ಅನಿಸಿಕೆಗಳಿದ್ದವು..

 ಹೀಗಾಗಿ ನನಗೆ ತುಂಬಾ ಭಯ ಆಗಿ ಶಿವಶಂಕರನನ್ನು ಬಾಯಿ ಬಂದಂತೆ ಬೈದುಕೊಳ್ಳುತ್ತಾ ಕ್ಲರ್ಕ್ ವೆಂಕಟಸ್ವಾಮಿ ಹತ್ತಿರ ಒಬ್ಬನೇ ಹೋದೆ..,

ಅವರು ನನ್ನನ್ನೊಮ್ಮೆ ನೋಡಿ "ಮಿಡ್ಲಸ್ಕೂಲ್ ಆ ಕಡೆ ಇದೆ ಹೋಗಪ್ಪ..!!"  ಎಂದ.
ನನಗೆ ಮತ್ತಷ್ಟು ಭಯವಾಗಿ ಪಿ....ಯು........ ಸ್..ಸಿ ಎಂದು ತೊದಲಿದೆ..,
ಕ್ಲರ್ಕ್ ವೆಂಕಟಸ್ವಾಮಿ ಒಮ್ಮೆ ಕರೆಂಟ್ ಶಾಕ್ ಹೊಡೆಸಿಕೊಂಡವನಂತೆ ನನ್ನ ಕಡೆ ನೋಡಿ.. ನನ್ನ ಕೈಯಲ್ಲಿದ್ದ ಮಾರ್ಕ್ ಕಾರ್ಡ್, ಟಿ.ಸಿ. ತೆಗೆದುಕೊಂಡು ನೋಡಿ.. ಅದು ನನ್ನದೋ ಅಲ್ಲವೋ  ಕನ್ಫರ್ಮೇಷನ್ ಗಾಗಿ ಸ್ಕೂಲಿನ ಹೆಸರು.. ತಂದೆಯ ಹೆಸರು ಎರಡೆರಡು ಬಾರಿ ಕೇಳಿದ.. ನಾನು ಸರಿಯಾಗಿ ಉತ್ತರಿಸಿದ್ರಿಂದ ಸಮಾದಾನಗೊಂಡು ಎಲ್ಲಾ ಡಾಕ್ಯುಮೆಂಟ್ಸ್ ಮತ್ತು ಪಾಸ್‌ಪೋರ್ಟ್ ಸೈಜಿನ ಫೋಟೋ ತೆಗೆದುಕೊಂಡು, ಫೀಸ್ ಅನ್ನು ಕಟ್ಟಿಸಿ ಕೊಂಡು A- section ಎಂದು ಹೇಳಿ ಹೊರಡಲು ಹೇಳಿದ..,

 ಆ್ಯಕ್ಚುಯಲಿ ನನಗೆ ಎರಡ್ಮೂರು ಫೋಟೊ ಇಸಕೊಂಡು.. ಟಿಸಿ, ಮಾರ್ಕಶೀಟ್ ಅನ್ನು ಎತ್ತಿ ಒಂದು ಸೈಡಿಗೆ ಇಟ್ಟುಕೊಂಡು ಅಡ್ಮಿಷನ್ ಮುಗೀತು ಹೋಗು ಎಂದರೆ ನಾನು ನಂಬಲು ತಯಾರಿರಲಿಲ್ಲ.., ಬದಲಿಗೆ ನನಗೆ ಅಡ್ಮಿಷನ್ ಎಂಬುದು ಒಂದು ಅತಿ ಕ್ಲಿಷ್ಟಕರ ಮತ್ತು ದೊಡ್ಡ ಸಂಗತಿಯಾಗಿದ್ದು ಈ ವೆಂಕಟಸ್ವಾಮಿ ಅದನ್ನು ಮಾಡಿಲ್ಲವೆಂಬುದು ನನಗೆ  ೧೦೦% ಕಾನ್ಫಿಡೆನ್ಸ್ ಇತ್ತು..., ಹೀಗಾಗಿ ನಾನು ನಿಂತಿದ್ದ ಜಾಗದಿಂದ ಕದಲಲಿಲ್ಲ...,

ವೆಂ. ಮತ್ತೇನು.. ಎನ್ನುವಂತೆ ಮುಖ ನೋಡಿದ.., ನಾನು "ಸಾರ್ ಅಡ್ಮಿಷನ್...!!" ಎಂದು ರಾಗ ಎಳೆದೆ...,

 "ಮುಗೀತಲ್ಲಯ್ಯಾ ಹೋಗಯ್ಯಾ...!" ಎಂದು ಗದರಿಸಿದ,

ಅಷ್ಟಕ್ಕೂ ಅವನ ಗದರಿಕೆಗೆ ಹೆದರಿ ಅಲ್ಲಿಂದ ಹೋಗುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ...,
ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದ ಶಿವಶಂಕರ ನನ್ನು ಮನೆಗೆ ವಾಪಸಾದ ಮೇಲೆ ಹೊಡೆದು ಚಚ್ಚಿಹಾಕಬೇಕು ಎಂಬ ಕೋಪದೊಡನೆ, ಇಲ್ಲಿನ ಪರಿಸ್ಥಿತಿ ಕುರಿತು ಭಯವೂ ಆಗಿ ವೆಂ. ಯನ್ನು ಒಪ್ಪಿಸಿ ಅಡ್ಮಿಷನ್ ಅನ್ನು ಮುಗಿಸಿಕೊಂಡು ಹೋಗದಿದ್ದರೆ ನಾನು ಸಾಹಸ ಸಿಂಹ ವಿಷ್ಣುವರ್ಧನ್ ಅಲ್ಲ ಎಂದು ನಿರ್ದಾರ ಮಾಡಿಬಿಟ್ಟಿದ್ದೆ 😯😯😯.

ವೆಂ. ಗೆ ತನ್ನ ಟೈಮ್ ಸರಿಯಿಲ್ಲದಿದ್ದರಿಂದಲೇ ಬೆಳಿಗ್ಗೆ ಬೆಳಿಗ್ಗೆಯೇ ಇವನು ಬಂದು ತಗಲಿ ಹಾಕಿಕೊಂಡಿದ್ದಾನೆಂಬುದು ಸ್ಪಷ್ಟವಾಗಿ ಅರ್ಥವಾದಂತಿತ್ತು..
 ಹಾಗೂ ಈ ಸಮಯದಲ್ಲಿ ಅಡ್ಮಿಷನ್ ಅದೂ ಇದೂ ಅಂತ ರಾಶಿ ಕೆಲಸ ಬೀಳಿಸಿಕೊಂಡಿದ್ದ ವೆಂಕಟಸ್ವಾಮಿಗೆ ನನ್ನನ್ನು ಅಲ್ಲಿಂದ ಕದಲಿಸುವುದು ಕಷ್ಟ ಎಂದು ಅರಿವಾಗಲು ಮುಂದಿನ ಅರ್ದಗಂಟೆ ಸಮಯ ಹಿಡಿಯಿತು...,

ಇದರಲ್ಲಿ ನನ್ನ ತಪ್ಪೇನೂ ಇರಲಿಲ್ಲ.. ಆಗಿನ ನನ್ನ ಅನುಭವ, ಪ್ರಪಂಚ ಜ್ಞಾನ, ಜಾಗರೂಕತೆ ಹಾಗೂ ಮೊಂಡುತನಗಳು ಮತ್ತು ನಾನು ವಿಷ್ಣುವರ್ಧನ್ ಅಭಿಮಾನಿಯಾಗಿದ್ದುದು ಸೇರಿ ನನ್ನನ್ನು ಆ ಮಟ್ಟಿಗೆ ತಯಾರು ಮಾಡಿದ್ದವು..😧😧😧.

 ವೆಂ. ಬೈದು.. ಸಿಡುಕಿ... ಎಗರಾಡಿ... ಕೊನೆಗೆ ಹೊಡೆಯುವುದು ಒಂದನ್ನು ಬಾಕಿ ಉಳಿಸಿಕೊಂಡಿದ್ದ... ಕೊನೆಗೆ ನನ್ನ ಎದುರಿಗೇ ಬಂದು ಅಡ್ಮಿಷನ್ ಮಾಡಿಸಿಕೊಂಡು ಹೋದ ನಾಲ್ಕೈದು ಸ್ಟೂಡೆಂಟ್ಸ್ ಅನ್ನು ಉದಾಹರಣೆಯಾಗಿ ತೋರಿಸಿ ಅಡ್ಮಿಷನ್ ಅಂದರೆ ಇಷ್ಟೆ.. ಎಂದು ಕನ್ವಿನ್ಸ್ ಮಾಡುವಲ್ಲಿ ವೆಂ. ಯಶಸ್ವಿಯಾಗಿ ಬಿಟ್ಟ...

ಅಲ್ಲಿಂದ ನಾನು ನೆಕ್ಸ್ಟ್ ಬಂದಿದ್ದು ಪ್ರಿನ್ಸಿಪಾಲ್ ಚೇಂಬರ್ ಮುಂಭಾಗಕ್ಕೆ.. ಅವರಿಗೂ ಒಮ್ಮೆ ತೋರಿಸಿ ಕನ್ಫರ್ಮ್ ಮಾಡಿಕೊಳ್ಳೋಣ ಎಂದು.., ಆಚಾರ್ಯ ಕಾಲೇಜಿನ ಪ್ರಿನ್ಸಿಪಾಲ್ ರ ಅದೃಷ್ಟವೋ ಅಥವಾ ಮುನ್ಸಿಪಲ್ ಕಾಲೇಜಿನ ಕ್ಲರ್ಕ್ ನ ಅದೃಷ್ಟವೋ ಗೊತ್ತಿಲ್ಲ ಪ್ರಿನ್ಸಿಪಾಲರು ಆವತ್ತು ರಜೆಯಲ್ಲಿದ್ದರು...
 (ಯಾಕೆಂದರೆ ಇವರಿಗೆ ತಲೆಕೆಟ್ಟು ನನ್ನ ಅಡ್ಮಿಷನ್ ಕ್ಯಾನ್ಸೆಲ್ ಮಾಡಿದ್ದರೆ... ನಂತರ  ನಾನು ಅಲ್ಲಿಂದ ಮುನ್ಸಿಪಲ್ ಕಾಲೇಜಿನ ಕ್ಲರ್ಕ್ ನ್ನು ಹುಡುಕಿಕೊಂಡು ಹೋಗಬೇಕಾಗಿತ್ತು...😧.)

So ಆವತ್ತು ಇವರು ರಜೆಯಲ್ಲಿ ಇದ್ದುದರಿಂದ ನಾನು ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನೆ ಹೊರಟು ಹೋದೆನೆಂದು ನೀವು ಭಾವಿಸುವುದಿಲ್ಲ ಎಂದು ನನಗೆ ಗೊತ್ತು..
ನಿಮ್ಮ ಅನಿಸಿಕೆ ಸರಿ... ನಾನು ಅಲ್ಲಿಯೇ ಠಳಾಯಿಸಿಕೊಂಡಿದ್ದೆ..😠😠

 ನನ್ನನ್ನು ನೋಡಿ ಅನುಮಾನಗೊಂಡ ಪಿಒನ್ ಒಬ್ಬನು ಹತ್ತಿರ ಕರೆದು ಏನು ಸಮಾಚಾರ ಎಂದು ವಿಚಾರಿಸಿದ..., ನಾನು ಅ...ಡ್ಮಿ...ಷನ್...... ಎಂದೆ...,

ಅವನು ನನ್ನ ಫೀಸ್ ಕಟ್ಟಿದ್ದ ರಶೀತಿಯನ್ನು ಚೆಕ್ ಮಾಡಿ "ವೆರಿ ಗುಡ್" ಎಂದು ಹೇಳಿದ.. ನಂತರ

" ಅಡ್ಮಿಷನ್ ಆಗಿದೆ ಸೋಮವಾರದಿಂದ ಕಾಲೇಜಿಗೆ ಬಾ... " ಎಂದು ಹೇಳಿದ..

ನಾನು "ಎಲ್ಲಿಗೆ ಬರಬೇಕು " ಕೇಳಿದೆ..

ಇವನನ್ನು ವೆರಿಗುಡ್ ಎಂದಿದ್ದು ತಪ್ಪಾಯಿತೆಂದು ಅವನಿಗೆ ಮನದಟ್ಟಾಯಿತು... ಅವನು ವೆಂಕಟಸ್ವಾಮಿ‌ಯಂತೆ ಮೆದು ಆಸಾಮಿಯಲ್ಲ ... ಸ್ವಲ್ಪ ಚುರುಕು ಬಡ್ಡಿಮಗ...

"ಶಂಕರ್ ಟಾಕೀಸ್ ಗೆ ಬಾ... " ಎಂದು ಹೇಳಿ.. ತನ್ನ ಜೋಕಿಗೆ ತಾನೇ ಜೋರಾಗಿ ನಕ್ಕು "ಇನ್ನೆಲ್ಲಿಗೆ ಬರ್ತೀಯ... ಇದೇ ಕಾಲೇಜು.. ಇಲ್ಲಿಗೆ ಬಾರೋ..." ಎಂದು ಗದರಿದ..

"ಹೆಂಗೆ ಬರಬೇಕು.." ನನ್ನ ಮುಂದಿನ ಪ್ರಶ್ನೆ

ಅವನಿಗೆ ರೇಗಿ ಹೋಯಿತು... "ಕಾಲೇಜಿನ ದೊಡ್ಡ ಕಾಂಪೌಂಡ್ ಗೇಟನ್ನು ತೋರಿಸಿ... ಅದನ್ನು ಎಗರಿ ಬಾ...." ಎಂದನು.

😧😧😧😧😧😧😧😧

ಈಗ ಇದನ್ನೆಲ್ಲಾ ನೆನೆಸಿಕೊಂಡರೆ ನಗು ಬರುತ್ತದೆ... ಆದರೆ ಆ ಸಮಯದಲ್ಲಿ ಭಯ, ಆತಂಕ, ಅಡ್ಮಿಷನ್ ಆಗಿಲ್ಲವೇನೋ ಎಂಬ ದುಗುಡಗಳು ನನ್ನನ್ನು ಹೈರಾಣು ಮಾಡಿದ್ದವು... ಆ ಸಮಯದಲ್ಲಿ ಇವೆಲ್ಲವೂ ನನಗೆ ಖಂಡಿತವಾಗಿಯೂ ಹಾಸ್ಯವಾಗಿರಲಿಲ್ಲ.. ಬದಲಿಗೆ ಕಷ್ಟಕರ ಪರಿಸ್ಥಿತಿಯಾಗಿದ್ದಿತು..

ಅದಕ್ಕೆ ದೊಡ್ಡವರು ಹೇಳಿರುವುದು...

"ಅನುಭವಗಳು ಯಾವತ್ತೂ ಸಿಹಿಯಲ್ಲ ಅವು ಬಹಳ ಕಹಿ..., ಆದರೆ ಈ ಅನುಭವಗಳ ಸವಿನೆನಪು ಬಲು ಸಿಹಿ...❤❤❤" ಎಂದು.

By- Lion
Maruthi Vardhan

ನನ್ನ ಫೇಸ್‌ಬುಕ್‌ ವಾಲ್‌ನ ಲೇಖನದ ಲಿಂಕ್

https://m.facebook.com/story.php?story_fbid=1995894263759413&id=100000165778532

ಲೇಖಕರು:
Maruthi Vardhan
Owner @ Apthamithra Tutorials
& Computer Training & Spoken Languages
Konappana Agrahara
Near Yallamma Temple
Electronic City
Bengaluru.-560100
Mobile-9008453065

No comments:

Post a Comment