Tuesday, December 3, 2019

ಸಕ್ಕರೆ ಖಾಯಿಲೆ & ಕ್ಯಾನ್ಸರ್ ಅನ್ನು ಗುಣಪಡಿಸಬೇಕಾದದ್ದು ಹಿಂದೂ ಧರ್ಮವೇ ಅಥವಾ ಆಸ್ಪತ್ರೆಯೇ?


*ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಕ್ಯಾನ್ಸರ್ ಗುಣವಾಗುತ್ತದೆ.

*ಗೋಮೂತ್ರವನ್ನು ಸೇವಿಸುವುದರಿಂದ ಸಕ್ಕರೆ ಖಾಯಿಲೆ ಗುಣವಾಗುತ್ತದೆ ಎಂಬಂಥಹ ಹೇಳಿಕೆಗಳನ್ನು ಕೆಲವರು ಕೊಡುತ್ತಾರೆ,
ಬೇರೆಯವರು ಅದನ್ನು ನೋಡಿ ಉರುಳಾಡಿಕೊಂಡು ನಕ್ಕು ಚರ್ಚೆ ಮಾಡಲು ಬಂದಾಗ ಅವರ ಮೇಲೆ ಜಗಳಕ್ಕೆ ಹೋಗುತ್ತಾರೆ.
ರೋಗಗಳನ್ನು ಗುಣಪಡಿಸುವುದು  ಧರ್ಮದ ಕೆಲಸ ಅಲ್ಲ, ಆದರೂ ಇವರು ರೋಗ ವಾಸಮಾಡುವ ಹೊಣೆಗಾರಿಕೆಯನ್ನು ಅನಾವಶ್ಯಕವಾಗಿ ತಲೆಯ ಮೇಲೆ ಎಳೆದುಕೊಳ್ಳುತ್ತಾರೆ ಮತ್ತು ತಮ್ಮ ಹೊಣೆಯನ್ನು ನಿಭಾಯಿಸಲು ಒದ್ದಾಡಿ, ನಂತರ ಸಫಲತೆ-ವಿಫಲತೆಗಳ ಬಗ್ಗೆ ಚರ್ಚೆಮಾಡಿ ಬಿಪಿ ರೈಸ್ ಮಾಡಿಸಿಕೊಂಡು ಕೂಗಾಡುವುದು ಏಕೆ?
ಸಿಂಪಲ್ ಆಗಿ ಕ್ಯಾನ್ಸರ್ ಅಥವಾ ಷುಗರ್ ಅನ್ನು ಗುಣಪಡಿಸುವುದು ಧರ್ಮದ ಕೆಲಸ ಅಲ್ಲವೆಂಬ ಸತ್ಯವನ್ನು ಜನರಿಗೆ ತಿಳಿಯಪಡಿಸಿ ಆ ಮೂಲಕ ತಾವು ಪ್ರಾಮಾಣಿಕತೆಯನ್ನು ನಿರೂಪಿಸಿ ಜನರ ಎದುರು ದೊಡ್ಡವರಾಗುವ ಕೆಲವನ್ನೇಕೆ ಮಾಡುವುದಿಲ್ಲವೋ ಅರ್ಥವಾಗುತ್ತಿಲ್ಲ.
**
ಇನ್ನೊಂದು ಕಡೆ ಯಾರೋ ಬ್ರೈನ್ ವಾಷ್ ಮತಾಂತರ ಕಂಪನಿಯವರು ಕೊಳಗೇರಿಗಳಲ್ಲಿ ಒಂದು ಬಾಡಿಗೆ ಮನೆಯನ್ನು ಹಿಡಿಯುತ್ತಾರೆ, ಅಲ್ಲಿ ಕೆಳಜಾತಿಗಳನ್ನವರನ್ನೆಲ್ಲ ಗುಂಪುಗೂಡಿಸಿ ಅವರ ತಂದೆ ತಾಯಿ ಅಜ್ಜ ಅಜ್ಜಿ ಆಚರಿಸಿದ್ದ ಆಚರಣೆಗಳನ್ನು ಹೀಗಳೆದು ಬ್ರೈನ್ ವಾಷ್ ಮಾಡುತ್ತಾರೆ ಆಮೇಲೆ ಪ್ರತಿ ಭಾನುವಾರ ಪ್ರಾರ್ಥನೆ ಮಾಡಿಸುತ್ತಾರೆ,  
ಪ್ರಾರ್ಥನೆ ಮಾಡಿಸುವ ಅವನು ಮೈಕ್ ಹಿಡಿದುಕೊಂಡು ಕೈಯನ್ನು ಜಾಡಿಸಿದರೆ ಎದುರುಗಡೆ ಇರುವವರು ಫಿಟ್ಸ್ ಬಂದಂತೆ ಆ್ಯಕ್ಟಿಂಗ್ ಮಾಡಿ ನೆಲಕ್ಕೆ ಬಿದ್ದು ಉರುಳಾಡುತ್ತಾರೆ.
ಮನುಷ್ಯನಾದವನಿಗೆ ಒಂದು ಸಮಸ್ಯೆ ಇರುತ್ತದೆ, ಅದು ಮಂಡಿ ನೋವಿನ‌ ಸಮಸ್ಯೆ, ತಲೆನೋವು ಬರುವುದು, ಕಣ್ಣು ‌ಮಂಜಾಗುವುದು, ಮಾಡಿದ ಕೆಲಸ ಕೈ ಹಿಡಿಯದಿರದಿರುವುದು, ಇನ್ನೂ ಕೆಲವರಿಗೆ ಸತ್ತ ತಮ್ಮ ಬಂಧ ಬಳಗದವರು ಮಾತನಾಡಿಸಿದಂತೆ ಭ್ರಮೆ ಉಂಟಾಗುವುದು ಈ ರೀತಿಯಲ್ಲಿ ಭ್ರಮೆ ಹೊಂದಿ ಮಾನಸಿಕವಾಗಿ ವೀಕ್ ಆಗಿರುವ ಜನರನ್ನು ಪರಿಹಾರ ತೋರಿಸುವ ನೆಪದಲ್ಲಿ ಬ್ರೈನ್ ವಾಷ್ ಮಾಡಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಸುವುದೇ ಇವರ ಕೆಲಸ‌.
ರೋಗ ಗುಣಪಡಿಸಿದ್ದೇವೆಂಬ ಭ್ರಮೆ ಉಂಟುಮಾಡುತ್ತಾರೆ.
**
ಇನ್ನೊಂದು ಕಡೆ ನಮ್ಮ ದೇವರೇ ಸರ್ವಸ್ವ, ನಮ್ಮ ದೇವರನ್ನು ನಂಬದ ಮತ್ತು ಬೇರೆ ಯಾವುದೇ ದೇವರನ್ನು ಪೂಜಿಸುವ ಜನರಿಗೆ ನರಕದಲ್ಲಿ ಫ್ರೈ ಮಾಡಲಾಗುತ್ತದೆ ಎಂದು ನಂಬಿಸಲಾಗುತ್ತದೆ. (ಎಲ್ಲರೂ ಅಲ್ಲ, ಕೆಲ‌ ಮತಾಂಧರು ಮಾತ್ರ, ಅದೃಷ್ಟವಶಾತ್ ಅವರ ಸಂಖ್ಯೆ ಕಡಿಮೆ ಇದೆ)
ಬೇರೆ ದೇವರ ಅನುಯಾಯಿಗಳನ್ನು ಕೊಂದರೆ ಮೇಲೆ ಸ್ವರ್ಗದಲ್ಲಿ ಉತ್ತಮ ಸ್ಥಾನಮಾನಗಳನ್ನು ಕೊಡಲಾಗುತ್ತದೆ ಎಂದು ನಂಬಿಸಿ..‌ ಅವನಿಗೆ ಬಾಂಬ್ ಕಟ್ಟಿ ಸೂಸೈಡ್ ಬಾಂಬರ್ ಆಗಿ ಬದಲಾಯಿಸಿ ಮಾರ್ಕೆಟ್, ಬಸ್ಟಾಂಡ್ ಈ ರೀತಿಯ ಜನನಿಬಿಡ ಸ್ಥಳಗಳಲ್ಲಿ ಬ್ಲಾಸ್ಟ್ ಮಾಡಿಕೊಳ್ಳುವಂತೆ ಬ್ರೈನ್ ವಾಷ್ ಮಾಡಲಾಗುತ್ತದೆ, ಪಾಪ ಈ ಜನ್ಮದಲ್ಲಿ ಮನುಷ್ಯನಾಗಿ ಜನಿಸಿದ್ದ ಇವನು ಅಷ್ಟೊಂದು ಸೂಸೈಡ್ ಬಾಂಬಿಂಗ್‌ನಲ್ಲಿ ಎಷ್ಟೋ ಮುಗ್ಧ ಜನರ ಕೊಂದ ಪಾಪಕ್ಕಾಗಿ ನಾಯಿಯಾಗಿಯೋ ಹಂದಿಯಾಗಿಯೋ ಮುಂದಿನ ಜನ್ಮದಲ್ಲಿ ಹುಟ್ಟುತ್ತಾನೆ...
**
#ಉಪಸಂಹಾರ:
ಹಿಂದೂ ಧರ್ಮ ಒಂದು ಜೀವನ ವಿಧಾನ, ಜಗತ್ತಿನ ಜನರು ಗೌರವಿಸುವ ಏಕೈಕ ಶಾಂತಿ ಧರ್ಮ, ಸುಮಾರು ೧೦೦೦೦ ವರ್ಷಗಳ ಇತಿಹಾಸದಲ್ಲಿ ಭರತಖಂಡವು ಯಾವೊಬ್ಬ ದೇಶದ ಮೇಲೂ ತಾನಾಗಿ ದಂಡೆತ್ತಿ ಹೋಗಿಲ್ಲ, ಇತರರು ತನ್ನ ಮೇಲೆ ದಾಳಿಮಾಡಿದಾಗ ಸ್ವರಕ್ಷಣೆ ಮಾಡಕೊಂಡಿದೆ ಅಷ್ಟೇ.
ಆದರೆ ಕ್ಯಾನ್ಸರ್, ಸಕ್ಕರೆ ಖಾಯಿಲೆ ಇವು ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುವ ಹೆಚ್ಚು ನಿಗಾವಹಿಸಬೇಕಾದ ಖಾಯಿಲೆಗಳು, ಈ ರೋಗಿಗಳು ವೈದ್ಯರ ನಿರ್ದೇಶನದಂತೆ ನಡೆಯಬೇಕಾಗುತ್ತದೆ, ಹಾಗಿದ್ದಾಗ ಮಾತ್ರ ಸಾಮಾನ್ಯರಂತೆ ಜೀವನ‌ನಡೆಸಬಲ್ಲರು, ಇಲ್ಲದಿದ್ದರೆ  45-50ವಯಸ್ಸಿನಲ್ಲಿ ಸಾವಿಗೀಡಾಗುವರು, ಅವರನ್ನೇ ನಂಬಿಕೊಂಡ ಕುಟುಂಬದ, ಪತ್ನಿಯ ಗತಿಯೇನು? ಆಕೆ ಒಬ್ಬಂಟಿಯಾಗಿ ತನ್ನ ಜೀವನ ಸವೆಸಬೇಕೆ?
ಹಿಂದೂ ಧರ್ಮ ಕಾಯಿಲೆಗಳನ್ನು ವಾಸಿ ಮಾಡುವ ಆಸ್ಪತ್ರೆ ಅಲ್ಲ, ಇದು ಅದರ ಕರ್ತವ್ಯದ ಪರಿಧಿಯಲ್ಲಿ ಬರುವುದಿಲ್ಲ ಅಥವಾ ಕರ್ತವ್ಯದ ಭಾಗವೂ ಅಲ್ಲ, ಅಥವಾ ಯಾವುದೇ ಖಾಯಿಲೆಗೆ ಔಷದಿ ಕೊಡಲಿಲ್ಲವೆಂಬ ಕಾರಣಕ್ಕಾಗಿ ಹಿಂದೂಧರ್ಮವನ್ನು ತಿರಸ್ಕರಿಸಲೂ ಸಾದ್ಯವಿಲ್ಲ,
ಜನರು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿ ಯಶಸ್ಸಿಗಾಗಿ ದೇವರಲ್ಲಿ ಯಶಸ್ಸಿಗಾಗಿ‌ ಮೊರೆಯಿಡಬಹುದು, ಆದರೆ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಅಂದುಕೊಳ್ಳುವುದು ತಪ್ಪು, ವೈದ್ಯರ ಭೇಟಿಯ ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ...., ಯಾರೋ ಒಬ್ಬ ಢೋಂಗಿ ಗುರೂಜಿ ಹೇಳಿದಂತೆ ಗೋಮೂತ್ರ ಕುಡಿದು ಸುಮ್ಮನಿದ್ದರೆ ಕ್ಯಾನ್ಸರ್ ಉಲ್ಭಣಿಸುತ್ತದೆ, ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ,
ಸಾಮಾನ್ಯವಾಗಿ ಇಂತಹ ಗುರೂಜಿಗಳು ರೋಗದ ಗುಣಕ್ಕಾಗಿ ಯಾಗ, ಯಜ್ಞ ಮಾಡಿಸುವುದು... ಸಾಕಷ್ಟು ಹಣ ಖರ್ಚು ಮಾಡಿಸುತ್ತಾರೆ.
ಇಂಥಹವರು ಧರ್ಮದ ಹೆಸರಿನಲ್ಲಿ ಜನರೆ ತಪ್ಪುದಾರಿಗೆ ಎಳೆದಾಗ ನಾವು ಅವರನ್ನು ವಿರೋಧಿಸಬೇಕು, ಇದೇ ನಿಜವಾದ ಧರ್ಮ ರಕ್ಷಣೆ, ಇದೇ ನಿಜವಾದ ಹಿಂದುತ್ವ.
ಒಂದು ವೇಳೆ ಪ್ರೋತ್ಸಾಹ ಕೊಟ್ಟರೆ ಅಥವಾ ಕಮೀಷನ್ ತೆಗೆದುಕೊಂಡರೆ ಅದು ಸ್ವಾರ್ಥ ಮತ್ತು ನಕಲಿ ಹಿಂದುತ್ವ.
***
ಸತಿಸಹಗಮನ ಪದ್ದತಿ ಈ ಹಿಂದೆ ಇತ್ತು, ಈಗ ಇಲ್ಲ, ರಾಜಾರಾಮ್ ಮೋಹನ ರಾಯ್, ದಯಾನಂದ ಸರಸ್ವತಿ ರವರು ಬ್ರಿಟೀಷರ ಕಾಲದಲ್ಲಿ ಅದರ ವಿರುದ್ಧ ಹೋರಾಡಿ ಸತಿನಿಷೇದ ಕಾನೂನು ತಂದರು.., ಒಂದು ಕಾಲದಲ್ಲಿ ಸತಿಸಹಗಮನ ಪದ್ದತಿಯನ್ನು ಸಮರ್ಥಿಸುತ್ತಿದ್ದ ಮಡಿವಂತ ಹಿಂದುಗಳೇ ಇಂದು ವಿರೋಧಿಸಿದ್ದಾರೆ, ಇದು ನಿಜವಾದ ಹಿಂದುವಿನ ಲಕ್ಷಣ.
ಬಾಲ್ಯವಿವಾಹ ಇತ್ತು ಈಗ ಇಲ್ಲ, ಮಡಿವಂತರೇ ಇದನ್ನು ಹೊಗಟ್ಟಿದ್ದಾರೆ..., ಇದು ನಿಜವಾದ ಬದಲಾವಣೆ.
ಎಲ್ಲಾ ಧರ್ಮಗಳಲ್ಲಿ ದೋಷಗಳು ಇವೆ, ಆದರೆ ದೋಷಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುವ ಕ್ರಮ ಯಾರೂ ತೆಗೆದುಕೊಂಡಿಲ್ಲ...
ಬದಲಾವಣೆ ಪ್ರಕ್ರಿಯೆಗೆ ಒಳಗಾದ ಏಕೈಕ ಧರ್ಮ ನಮ್ಮದೇ ಹಿಂದೂ ಧರ್ಮ.
ಯಾವ ಆಚರಣೆಗಳಿಂದ ಜನರಿಗೆ‌ ಕೆಡುಕುಂಟಾಗುವುದಿಲ್ಲವೋ ಅದು ಮೂಢನಂಬಿಕೆಯಾದರೂ ಸಹಾ ಅದಕ್ಕೆ ನನ್ನ ಬೆಂಬಲವಿದೆ...,
ಆದರೆ ಯಾವ ಆಚರಣೆಯ ಹೆಸರಿನಲ್ಲಿ ತೊಂದರೆ ಉಂಟಾಗುವುದೋ ಅದಕ್ಕೆ ಸಹಮತವಿಲ್ಲ.
ನಾಸ್ತಿಕರು ವಿರೋದಿಸುವ..., ಆದರೆ ನಾನು ಸಮರ್ಥಿಸುವ ಪೂಜೆ, ಅಭ್ಯಂಜನ, ಜಾತ್ರೆ, ತೇರು, ಭೂತಕೋಲ, ಮೆರವಣಿಗೆ, ಸಂಸ್ಕೃತಿಗಳ ಆಚರಣೆ ಇವೆಲ್ಲವನ್ನೂ ನಾನು ವೈಯಕ್ತಿಕವಾಗಿ ನಂಬುತ್ತೇನೆ... ಏಕೆಂದರೆ ಈ ಆಚರಣೆಗಳಿಂದ ಯಾರಿಗೂ ಕೆಡುಕಾಗುವುದಿಲ್ಲ..., ಹಣ ಖರ್ಚಾದರೆ ನಮ್ಮದೇ ಹೋಗಲಿ ಸ್ವಲ್ಪ ಖುಷಿ ನೆಮ್ಮದಿ ಸಿಗುತ್ತದೆ..., ಮತ್ತು ಈ ಆಚರಣೆಗಳಿಂದ ನೆಮ್ಮದಿ, ಖುಷಿ ಸಿಗುತ್ತದೆ.
"ಸಕ್ಕರೆ ಕಾಯಿಲೆ, ಕ್ಯಾನ್ಸರ್ ಅನ್ನು ವಾಸಿಮಾಡಬೇಕಾದದ್ದು ಹಿಂದೂಧರ್ಮದ ಕರ್ತವ್ಯವೋ?
by
Maruthi Vardhan

"ಹಾಲು, ಅಭಿಷೇಕ, ಹಾರ ವ್ಯರ್ಥವೇ!", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/6LEhMSLmW031?utm_source=android&utm_campaign=content_share
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ"
ಮಾಂಸಾಹಾರ ತಿಂದಿದ್ದ ವಿದ್ಯಾರ್ಥಿ ಪೂಜೆ ಮಾಡಲು ನಿರಾಕರಿಸಿದ್ದೇಕೆ...?", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/etjv9kgvg9y9?utm_source=android&utm_campaign=content_share
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
By - Maruthi Vardhan






No comments:

Post a Comment