- ಹೆಣ್ಣುಮಕ್ಕಳ ವಿಷಯದಲ್ಲಿ ನಾನು.. ವಿಷ್ಣುವರ್ಧನ್
- ಕನ್ನಡ ಸಾಹಿತ್ಯ
- ಕನ್ನಡಚಿತ್ರರಂಗ
- ನನ್ನ ಕುಚುಕು
- Video
- Detective
- Sports
- Sceince
- Romance, Love &Feelings
- World Tour
- Social System
- Politics
- BadPeople
- NewsPaper Magzine
- Jobs&Interview
- Great PeopleWorld
- Great PeopleIndia
- Spoken English
- Life
- Fashion
- Economics
- StudentPage
- ChildrenPage
- For More Pages..,Plz Click Here..!
Friday, November 1, 2019
Suspense Thriller, Horror, Psychological Disorder, Aptharakshak
Aptharakshak
Psychological disorder oriented super hit suspense cum horror movie
Full movie in YouTube
Hindi : https://youtu.be/tpvzBtLTqZ8
Kannada - https://youtu.be/W1HiTACvdFs
Telugu - https://youtu.be/aQjs0n7WkFM
Monday, October 28, 2019
ಕೊಲೆಗೆ ಕಾರಣ...? - (ಒಂದು ಸಣ್ಣ ಪತ್ತೇದಾರಿ ಕಥೆ)
ಒಂದು ಸಣ್ಣ ಪತ್ತೇದಾರಿ ಕಥೆ
**ಕೊಲೆಗೆ ಕಾರಣ..? Motive for the Murder...??
**
ಇನ್ಸ್‌ಪೆಕ್ಟರ್ ಚಾಣಕ್ಯ ಮತ್ತು ಕಾನಸ್ಟೇಬಲ್ ಕುಶಾಲ್ ಇಬ್ಬರೂ ಸುರಿವ ಮಳೆಯಲ್ಲಿಯೇ ಪೋಲಿಸ್ ವ್ಯಾನ್‌ನಲ್ಲಿ ಆ ಮನೆಗೆ ತಲುಪಿದರು.
ದೀಪಾವಳಿಗೆ ಎರಡು ದಿನ ಆರಾಮಾಗಿ ರಜೆ ತೆಗೆದುಕೊಳ್ಳೋಣವೆಂಬ ಯೋಚನೆಯಲ್ಲಿದ್ದ ಚಾಣಕ್ಯನಿಗೆ ಮದ್ಯೆ ಕೊಲೆಯಾಗಿದೆಯೆಂಬ ಸುದ್ದಿಯೊಡನೆ ಬಂದ ಫೋನ್‌ಕಾಲ್‌ಗೆ ಬೆಲೆ ಕೊಟ್ಟು ಕೂಡಲೇ ಹೊರಟು ಬಂದಿದ್ದ.
ಇಲ್ಲಿನ ಪರಿಸ್ಥಿತಿ ನೋಡಿದೊಡನೆ ಕರ್ತವ್ಯ ಪ್ರಜ್ಞೆ ಜಾಗೃತವಾಗಿ ಎಲ್ಲಾ ಇಲಾಖೆಗಳಿಗೂ ಫಿಂಗರ್ ಪ್ರಿಂಟ್ ಎಕ್ಸಪರ್ಟ್, ಪೋಸ್ಟ್ ಮಾರ್ಟಂ ಮಾಡುವ ಡಾಕ್ಟರ್ ಎಲ್ಲರಿಗೂ ಬರಹೇಳಿದ.
ಆ್ಯಕ್ಚುಯಲಿ ಚಾಣಕ್ಯನಿಗೆ ವಿಷಯ ಖಚಿತವಾಗಿತ್ತು.., ಇದು ಆಕಸ್ಮಿಕ ಘಟನೆಯಲ್ಲ.. ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು.., ಯಾಕೆಂದರೆ ಹೃದಯಕ್ಕೆ ಚಾಕು ಚುಚ್ಚುವ ವ್ಯಕ್ತಿ ಅಕಸ್ಮಾತ್ತಾಗಿ ಕೊಲೆ ಮಾಡುವ ಸಾದ್ಯತೆ ಇಲ್ಲ... ಯಾವುದೋ ದ್ವೇಷ ಇಟ್ಟುಕೊಂಡು ಮಾಡಿದ್ದಾನೆ.
ಆದರೆ ಇಂತಹ ಸೌಂದರ್ಯ ವತಿಯನ್ನು ಕೊಂದ ಅವನು ಮೂರ್ಖನೋ ಅಥವಾ ಮನೋರೋಗಿಯೋ ಇರಬೇಕೆಂದು ಅರ್ಥವಾಗಿತ್ತು.
******
ಮಾಲಿನಿಯ ಸ್ನೇಹಿತರು ಸಂಬಂದಿಕರು ಎಲ್ಲರನ್ನೂ ವಿಚಾರಣೆ ನಡೆಸಿದ ಚಾಣಕ್ಯನಿಗೆ ಕೊಲೆಗಾರ ಯಾರೆಂದು ಗೊತ್ತಾಗದಿದ್ದರೂ... ಒಂದು ವಿಷಯದಲ್ಲಿ ತಲೆಕಟ್ಟು ಹೋಯಿತು..
ಜನರ ಹೇಳಿಕೆಗಳ ಆಕೆ ಒಬ್ಬ ಪರ್ಫೆಕ್ಟ್ ಗರ್ಲ್, ಮೃದು ಸ್ವಭಾವದ ಸ್ನೇಹಜೀವಿ ಹುಡುಗಿಯಾಗಿದ್ದಳು, ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ... ಶತೃಗಳನ್ನು ಸಹಾ ತನ್ನ ಮೃದು ಮಾತುಗಳಿಂದ ಬದಲಿಸಬಲ್ಲವಳಾಗಿದ್ದಳು..., ಹಣದಾಸೆಯಂತೂ ಇರಲೇ ಇಲ್ಲ...!!, ತಾನು ರೂಪಸಿ ಎಂಬ ಅಹಂಕಾರ ಇರಲೇ ಇಲ್ಲ.. ಎಂದು ಸ್ವತಃ ಅವಳ ಕ್ಲಾಸ್‌ಮೇಟ್ ಹುಡುಗಿಯರೇ ಹೇಳಿಕೊಂಡು ಅತ್ತಿದ್ದರು
ಹಾಗಿದ್ದರೆ ಕೊಲೆಗಾರ ಯಾರು? ಥತ್...!!, ಅವನ್ಯಾವನಾದರೂ ಆಗಿರಲಿ...!, ಮಾಲಿನಿಯಿಂದ ಅವನಿಗಾದ ತೊಂದರೆ ಅಥವಾ ಅನ್ಯಾಯವೇನು...?
"ಆದರೆ ಯಾಕೆ ಕೊಂದ..?" ಎಂಬುದೇ ತಲೆಕೆಡಿಸುವ ವಿಷಯವಾಗಿತ್ತು.
"ಆದರೆ ಯಾಕೆ ಕೊಂದ..?" ಎಂಬುದೇ ತಲೆಕೆಡಿಸುವ ವಿಷಯವಾಗಿತ್ತು.
***
ಮಾಲಿನಿಯ ಮೊಬೈಲ್ ಸೀಜ್ ಮಾಡಿದ್ದ ಚಾಣಕ್ಯ ಅದನ್ನು ಪರಿಶೀಲಿಸತೊಡಗಿದ್ದ..., ವಾಟ್ಸಪ್.., ಫೇಸ್‌ಬುಕ್ ಎಲ್ಲವೂ ಲಾಗಿನ್‌ನಲ್ಲಿಯೇ ಇದ್ದುದರಿಂದ ಎಲ್ಲಾ ಮೆಸೇಜ್ ಓದಬಹುದಾದ ಅವಕಾಶ ದೊರೆತಿತ್ತು.
ಎಲ್ಲಾ ಕಡೆಯೂ Happy Diwali ಎಂಬ ಸಂದೇಶಗಳ ಸುರಿಮಳೆಗಳೇ..., ಊರಿನಲ್ಲಿ ಇದ್ದ ಪಡ್ಡೆ ಹುಡುಗರೆಲ್ಲಾ ಸಿಕ್ಕಿದ್ದೇ ದೀಪಾವಳಿ ಅವಕಾಶ ಎಂದು ಮೆಸೇಜ್ ಕಳಿಸಿ... ಆ ನೆಪದಲ್ಲಿ ಇತರೆ ವಿಷಯಗಳನ್ನು ಎತ್ತುತ್ತಾ ಸ್ನೇಹವನ್ನು ವೃದ್ದಿಸಿಕೊಳ್ಳುವ ವಿಷಯದಲ್ಲಿ ಆ ಮೂಲಕ ಲವ್‌ನಲ್ಲಿ ಬೀಳಿಸಲು ಪೈಪೋಟಿ ನಡೆಸಿದ್ದರು.
ಚಿಕ್ಕ ವಯಸ್ಸಿನಲ್ಲಿ ಮೇಲೇ ಹಾರಾಡುತ್ತಿದ್ದ ವಿಮಾನಗಳನ್ನು ನೋಡಿ ಫ್ರಂಟು... ಬ್ಯಾಕು... ಎರಡನ್ನೂ ಬಡಿದು ಕೊಂಡು, ಚಡ್ಡಿ ಉದುರಿ ಹೋಗುತ್ತಿದ್ದುದನ್ನು ಲೆಕ್ಕಿಸದೆ.. ಹೋ....!!!ಹೋ...!!, ಕಿರುಚುತ್ತಿದ್ದ ಆ ಅವಿವೇಕಿ ಹುಡುಗರೇ ಇಂದು ಈ ರೀತಿಯಲ್ಲಿ ಹುಡುಗಿಯರಿಗೆ ಈ ರೀತಿಯಲ್ಲಿ ಮೆಸೇಜ್ ಮಾಡುವುದು ಎಂದು ಚಾಣಕ್ಯನಿಗೆ ಕೋಪ ಬಂದಿತು.
ಮಾಲಿನಿ ಪ್ರಾರಂಭದಲ್ಲಿ ಬಂದ ಕೆಲ ಮೆಸೇಜುಗಳಿಗೆ, same to you ಮತ್ತು happy diwali ಎಂದು ರಿಪ್ಲೈ ಮಾಡಿ... ಬರುತ್ತಿದ್ದ ಮೆಸೇಜುಗಳ ಸಂಖ್ಯೆ ಮಳೆಯ ಹನಿಗಳಂತೆ ಅಧಿಕವಾದಾಗ ಸುಮ್ಮನಾಗಿಬಿಟ್ಟಿದ್ದಳು.
ಅದರಲ್ಲಿ ಒಂದು ಮಾಲಿನಿ ಫಾರ್ವರ್ಡ್ ಮಾಡಿದ್ದ ಒಂದು ವಾಟ್ಸಪ್ ಮೆಸೇಜು ಚಾಣಕ್ಯನ ಗಮನ ಸೆಳೆಯಿತು..., ಮತ್ತು ಅದಕ್ಕಿಂತ ಕುತೂಹಲಕಾರಿಯಾದ ವಿಷಯವೆಂದರೆ ಆ ವ್ಯಕ್ತಿ ರಿಪ್ಲೈ ಮಾಡಿದ್ದ angry 😡😠 ಎಮೋಜಿ..., ಆ ನಂಬರ್ ಎತ್ತಿಟ್ಟುಕೊಂಡ ಚಾಣಕ್ಯ.
****
ಮೋಹನ್ ನನ್ನು ಬಂಧಿಸಲಾಯಿತು...,
ಚಾಣಕ್ಯನ ಅಪ್ಪ ವಿಷ್ಣುವರ್ಧನ್ ಅಭಿಮಾನಿಯಾಗಿದ್ದ... ಚಾಣಕ್ಯನಿಗೆ ಯಾವಾಗಲೋ ತೋರಿಸಿದ್ದ ವಿಷ್ಣು ನಟನೆಯ "ಟೈಮ್ ಬಾಂಬ್" ಚಲನಚಿತ್ರದ ದೃಶ್ಯ ಚಾಣಕ್ಯನ ನೆನಪಿಗೆ ಬಂದಿತು..., "ಅದರಲ್ಲಿ ಆರೋಪಿಯ ಬಾಯಿ ಬಿಡಿಸಲು.... ವಿಷ್ಣುವರ್ಧನ್ ಅವರು ಒಂದು ದೊಣ್ಣೆಗೆ ಎಣ್ಣೆ ಸವರಿ... 😯😯😯 ಅದನ್ನು ಖಾರದ ಪುಡಿಯಲ್ಲಿ ಅದ್ದಿ...., ರೌಡಿಯ ಪ್ಯಾಂಟ್ ಬಿಚ್ಚಿ......🧐🤨😯😯😯 "
ಅದೇ ದೃಶ್ಯವನ್ನು ಪುನರಾವರ್ತಿಸಿದ್ದ ಚಾಣಕ್ಯ..., ಹಾಗಾಗಿ ಮೋಹನ್ ಎಲ್ಲಾ ವಿಷಯವನ್ನು ಹೇಳಿಬಿಟ್ಟ.
******
ಮೋಹನ್ ಮೊದಲಿನಿಂದಲೂ ಬ್ಯುಸಿನೆಸ್ ನಲ್ಲಿ ಲಾಸ್ ಆಗಿ ಅಪ್ಪನ ಆಸ್ತಿಯೆಲ್ಲ ಖಾಲಿ ಮಾಡಿಕೊಂಡು ಹತ್ತಿರ ಹತ್ತಿರ ಒಂದು ಕೋಟಿ ಸಾಲಮಾಡಿಕೊಂಡಿದ್ದ..., ಬಡ್ಡಿ, ಚಕ್ರಬಡ್ಡಿಗಳ ವಿಷ ವರ್ತುಲದಲ್ಲಿ ಸಿಲುಕಿದ್ದ ಮೋಹನ್, ಈಗ ಕೊನೆಯ ಪ್ರಯತ್ನವಾಗಿ ಮೀಟರ್ ಬಡ್ಡಿ ಧಂದೆಮಾಡುವ ರೌಡಿ ಫೈನಾನ್ಷಿಯರ್ ಹತ್ತಿರ 10% 🤨😯 ಬಡ್ಡಿಗೆ ಹೊಸದಾಗಿ ಸಾಲ ತಂದು ಹೊಸ ವ್ಯವಹಾರ ಶುರು ಮಾಡಲು ಶುರುಮಾಡಿ ದೀಪಾವಳಿಯಂದು ಅದರ ಪ್ರಾರಂಭೋತ್ಸವ ಇಟ್ಟಿದ್ದ ಮೋಹನ್.
ಮೋಹನ್ ಮೊದಲಿನಿಂದಲೂ ಬ್ಯುಸಿನೆಸ್ ನಲ್ಲಿ ಲಾಸ್ ಆಗಿ ಅಪ್ಪನ ಆಸ್ತಿಯೆಲ್ಲ ಖಾಲಿ ಮಾಡಿಕೊಂಡು ಹತ್ತಿರ ಹತ್ತಿರ ಒಂದು ಕೋಟಿ ಸಾಲಮಾಡಿಕೊಂಡಿದ್ದ..., ಬಡ್ಡಿ, ಚಕ್ರಬಡ್ಡಿಗಳ ವಿಷ ವರ್ತುಲದಲ್ಲಿ ಸಿಲುಕಿದ್ದ ಮೋಹನ್, ಈಗ ಕೊನೆಯ ಪ್ರಯತ್ನವಾಗಿ ಮೀಟರ್ ಬಡ್ಡಿ ಧಂದೆಮಾಡುವ ರೌಡಿ ಫೈನಾನ್ಷಿಯರ್ ಹತ್ತಿರ 10% 🤨😯 ಬಡ್ಡಿಗೆ ಹೊಸದಾಗಿ ಸಾಲ ತಂದು ಹೊಸ ವ್ಯವಹಾರ ಶುರು ಮಾಡಲು ಶುರುಮಾಡಿ ದೀಪಾವಳಿಯಂದು ಅದರ ಪ್ರಾರಂಭೋತ್ಸವ ಇಟ್ಟಿದ್ದ ಮೋಹನ್.
ಅದೇ ದಿನ ರಾತ್ರಿ ಅವನ ಕ್ಲಾಸ್‌ಮೇಟ್ ಮಾಲಿನಿ.., happy diwali ಎಂದು ಮೆಸೇಜ್ ಕಳುಹಿಸಿದ್ದಳು...!
ಅಂದರೆ ನೀನು "ದಿವಾಳಿಯಾಗು" ಎಂದು.
ಅಂದರೆ ನೀನು "ದಿವಾಳಿಯಾಗು" ಎಂದು.
ಅದೇನು.. ಪಾಪ ಅವಳು ಬೇಕೆಂದು ಕಳಿಸಿದ್ದಲ್ಲ... ಮಳೆಹನಿಗಳಂತೆ ಇನ್‌ಬಾಕ್ಸಿಗೆ ಬಂದು ಬೀಳುತ್ತಿದ್ದ ಮೇಸೇಜುಗಳಿಗೆ ಉತ್ತರಿಸಲಾಗದೆ.., ಮೆಸೇಜ್ ಕಳಿಸಿದವರಿಗೂ...ಕಳಿಸದಿದ್ದವರಿಗೂ ಅದನ್ನೇ ಫಾರ್ವರ್ಡ್ ಮಾಡಿದ್ದಳು ಮಾಲಿನಿ..,
ಮೋಹನ್ ಕೋಪದಿಂದ ಕುದ್ದುಹೋದನು.., ಕೊಲೆ ಮಾಡಬೇಕೆಂದು ತೀರ್ಮಾನಿಸಿದನು..., ಈಕಥೆಯಿಂದ ತಿಳಿದು ಬರುವ ನೀತಿ ಏನೆಂದರೆ.., ಯಾರಿಗೂ ದಿವಾಳಿಯಾಗಿ ಎಂದು ಮೆಸೇಜ್ ಮಾಡಬೇಡಿ..., "ಹ್ಯಾಪಿ ದೀಪಾವಳಿ" ಎಂದು ಕಳುಹಿಸಿ.
**ಮುಕ್ತಾಯ**
ಸಾಹಸ by ಚಾಣಕ್ಯ.
written by
Maruthi Vardhan
ಪ್ಲೀಸ್ ಓದಿ... ಹೇಗಿದೆ ಎಂದು ಕಾಮೆಂಟ್ ಮಾಡಿ.., ತಪ್ಪುಗಳಿದ್ದರೆ ತಿಳಿಸಿ... ಬರಹಗಳ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲುಸಹಾಯ ಮಾಡಿ..., thank you, Happy Deepavali to all.
**
Note :ಈ ಕಥೆಯು ಕಿರುಚಿತ್ರದ ಉದ್ದೇಶದಿಂದ ಕಾಪಿ ರೈಟ್ ಹಕ್ಕಿಗೊಳಪಟ್ಟಿದೆ, ನಕಲು ಮಾಡುವುದು ಕಾನೂನಿನ ಸಮಸ್ಯೆ ಉಂಟುಮಾಡುತ್ತದೆ, ಲಿಂಕ್ ಹಾಕಲು ಮತ್ತು ಶೇರ್ ಮಾಡಲು ಅನುಮತಿ ಇದೆ.
ಲಿಂಕ್ : Link :
https://maruthivishnuvardhan.blogspot.com/2019/10/blog-post.html?spref=fb&m=1
Maruthi Vardhan
ಪ್ಲೀಸ್ ಓದಿ... ಹೇಗಿದೆ ಎಂದು ಕಾಮೆಂಟ್ ಮಾಡಿ.., ತಪ್ಪುಗಳಿದ್ದರೆ ತಿಳಿಸಿ... ಬರಹಗಳ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲುಸಹಾಯ ಮಾಡಿ..., thank you, Happy Deepavali to all.
**
Note :ಈ ಕಥೆಯು ಕಿರುಚಿತ್ರದ ಉದ್ದೇಶದಿಂದ ಕಾಪಿ ರೈಟ್ ಹಕ್ಕಿಗೊಳಪಟ್ಟಿದೆ, ನಕಲು ಮಾಡುವುದು ಕಾನೂನಿನ ಸಮಸ್ಯೆ ಉಂಟುಮಾಡುತ್ತದೆ, ಲಿಂಕ್ ಹಾಕಲು ಮತ್ತು ಶೇರ್ ಮಾಡಲು ಅನುಮತಿ ಇದೆ.
ಲಿಂಕ್ : Link :
https://maruthivishnuvardhan.blogspot.com/2019/10/blog-post.html?spref=fb&m=1
https://maruthivishnuvardhan.blogspot.com/2019/10/blog-post.html?spref=fb&m=1
Subscribe to:
Posts (Atom)