Friday, January 28, 2011

maruti


ವಿಷ್ಣು..., ಕೆಲವು ನೆನಪುಗಳು 
ವಿಷ್ಣು ನಮ್ಮನ್ನು ಅಗಲಿ ಒಂದು ವರ್ಷ ತುಂಬಿದೆ, ನಿನ್ನೆ ಸಿಂಹಜ್ಯೋತಿಯ ಯಾತ್ರೆಯಲ್ಲಿ ಪಾಲ್ಗೊಂಡ  ಈ ಸಂದರ್ಭದಲ್ಲಿ ಅವರನ್ನು ನೆನೆಸಿಕೊಳ್ಳುವುದಕ್ಕೆ ಇದು ಒಂದು ಸಕಾಲ.
ವಿಷ್ಣು  ಬರ್ತಡೆ ಜೋಕ್ 
ವಿಷ್ಣು ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶಿಕ್ಷಣ ತಜ್ಞ , ಸಾಹಿತಿ ಎಚ್ .ನರಸಿಂಹಯ್ಯ ನವರು ಅವರ ಅದ್ಯಾಪಕರಗಿದ್ದರು. ವಿಷ್ಣು ಗೆ ಆಗ ಸಿಹಿತಿಂಡಿ ಎಂದರೆ ಪಂಚಪ್ರಾಣ, ಗೆಳೆಯರ ಪುಸಿ ಹೊಡೆದು ಐಸ್ಕ್ರಿಮ್ , ಜಿಲೇಬಿ ಇವನ್ನು ಚೆನ್ನಾಗಿ ಹೊತ್ತೆಗಿಳಿಸುತ್ತಿದ್ದರು, ಹುಡುಗಿಯರು ಅವರ ಚಾರ್ಮ್ ಸ್ಟೈಲ್ನಿಂದ ಆಕರ್ಷಿತ ರಾಗುತ್ತಿದ್ದರಿಂದ ವಿಷ್ಣುಗೆ ದಿನವು ಯುಗಾದಿ ಹಬ್ಬದ ಬೆಲ್ಲವೇ..! ಆದರೆ ಒಂದು ದಿನ ವಿಷ್ಣುಗೆ ಸಿಹಿ ಯಾರು ತಂದುಕೊಡಲಿಲ್ಲ, ಆಗ ಅವರು ಬಲೆ ಬೀಸಿದ್ದು.., ಬೇರೆ ಯಾರಿಗೂ ಅಲ್ಲ,  ನರಸಿಂಹಯ್ಯ ಮಾಸ್ತರಿಗೆ, ವಿಷ್ಣು ಮೂಲೆಯಲ್ಲಿ ಅಳುತ್ತ ಕುಳಿತು ಬಿಟ್ಟರು, ಮಾಸ್ತರು ಬಂದು ಏಕಪ್ಪ ಎಂದು ಕಕ್ಕುಲತೆಯಿಂದ ವಿಚಾರಿಸಿದ್ದಕ್ಕೆ ಸಾರ್ ನನ್ನ ಬರ್ತಡೆ ಇವತ್ತು ನಮ್ಮ ತಾಯಿ ಐದು ರುಪಾಯಿ ಸಹ ಕೊಡದೆ ಕಳಿಸಿಬಿಟ್ಟರು, ಊಟವು ಇಲ್ಲ, ಸಿಹಿಯು ಇಲ್ಲ ಇದು ವಿಷ್ಣುವಿನ ಉತ್ತರ.., ಜೊತೆಗೆ ಅಳು ಬೇರೆ, ಸರಿ ಪಾಪ ಮಾಸ್ತರು ತಮ್ಮ ಜೇಬಿನಿಂದಲೇ ದುಡ್ಡು ತೆಗೆದು ಹತ್ತಿರದ ಸ್ವಿಟ್ ಸ್ಟಾಲ್ ನಿಂದ  ಕಾಲೇಜಿನ ಎಲ್ಲ ವಿದ್ಯರ್ಹಿಗಳಿಗೆ ಹಾಗು ಅದ್ಯಪಕರಿಗೂ ಸಿಹಿ ಹಂಚಿ ವಿಷ್ಣು ಗೆ ಸಿಂಹ ಪಾಲನ್ನೇ ನೀಡಿ , ಬರ್ತಡೆ ಆಚರಿಸಿಯೇ ಬಿಟ್ಟರು. ಎರಡು ದಿನ ಆದ ಮೇಲೆ ತಿಳಿಯಿತು ವಿಷ್ಣು ಮಾಡಿದ್ದು ತಮಾಷೆಯೆಂದು, ಆದರೆ ಮಾಸ್ತರು ಮತ್ತೆ ವಿಷ್ಣುವನ್ನು ಕರೆದು ಮತ್ತೆ ಒಂದು ಕೇಕ್ ತರಿಸಿ ಕೊಟ್ಟು ಅಪ್ಪಿಕೊಂದರಂತೆ, ಇದನ್ನು ವಿಷ್ನುರವರೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
ಗೋಕಾಕ್ ಚಳುವಳಿ:
ಪಕ್ಕದ ರಾಜ್ಯದಲ್ಲಿ ಎನ್.ಟಿ.ಆರ್ . ಎ ಎನ್ ಆರ್ ನಟಿಸಿದ ತೆಲುಗು ಚಿತ್ರಗಳೆಲ್ಲವೂ ಕನ್ನಡಕ್ಕೆ ಡಬ್ಬಿಂಗ್ ಆಗಿ.., ಸ್ತಳಿಯ ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂಬ ಕಾರಣಕ್ಕೆ ಡಾ.ರಾಜಕುಮಾರ್, ಅನಕೃ ಮುಂತಾದವರು ಗೋಕಾಕ್ ಚಳುವಳಿ ಪ್ರಾರಂಭಿಸಿದರು, ಇದು ಡಬ್ಬಿಂಗ್ ವಿರೋದಿ ಚಳುವಳಿಯಾಗಿದ್ದು, ಚಿತ್ರರಂಗಕ್ಕೆ ಸಂಬಂದಿಸಿದ ಅನೇಕ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ಪ್ರಸ್ತಾಪವು ಇದ್ದಿತು, ನಾಡಿನಾದ್ಯಂತ ಅಬುತಪುರ್ವ ಬೆಂಬಲ ವ್ಯಕ್ತವಾಗಿ ಎಲ್ಲರು ರಾಜ್ ಗೆ ಬೆಂಬಲ ನೀಡಿದರು, ಆ ಸಂದರ್ಭದಲ್ಲಿ ಗಂಧದ ಗುಡಿ ಚಿತ್ರದಲ್ಲಿ ವಿಷ್ಣು -ರಾಜ್ ನಡುವಿನ ಕೋವಿ ಪ್ರಸಂಗದಿಂದಾಗಿ ವಿಷ್ಣು ಸುಮಾರು ೧೦ಕ್ಕಿನ್ತ ಹೆಚ್ಚು ವರ್ಷ ಕಾಲ ಅಜ್ಞಾತ ವಾಸ್ ಮಾಡಬೇಕಾಯಿತು, ಚಳುವಳಿಯಿಂದಳು ಅವರನ್ನು ದೂರ ಇಡಲಾಯಿತು, ಆಗ ವಿಷ್ಣು ಮೈಸೂರಿಗೆ ಹೋಗಿ ಏಕಾಂಗಿ ಯಾಗಿ ಗೋಕಾಕ ಚಳುವಳಿ ನಡೆಸಿದರು,  ಇಡಿ ರಾಜ್ಯದ ಜನತೆಯೇ ಬೆಂಗಳುರಿನಲ್ಲಿದ್ದಾಗ , ವಿಷ್ಣು ಒಂಟಿ ಸಿಂಹ ವಾಗಿ ಮೈಸೂರಿನಲ್ಲಿ ಘರ್ಜಿಸಿದರು. ದಟ್ ಈಸ್ ವಿಷ್ಣುವರ್ಧನ್.
ನನ್ನ ಫ್ರೆಂಡ್ಸ್ ಜೋಕ್ ನನ್ನ ಬಗ್ಗೆ 
ನಾವು ೪-೫ ಜನರು ಗೆಳೆಯರು ಸೇರಿ ಚರ್ಚೆ ನಡೆಸುತ್ತಿದ್ದೆವು, ವಿಷ್ಣು ಅಭಿಮಾನಿಯಾಗಿದ್ದ ಅವರನ್ನು ಎಲ್ಲಿಯೂ ಬಿಟ್ಟು ಕೊಡುತ್ತಿರಲಿಲ್ಲ. ಈ ಬಗ್ಗೆ ಜಗಳಗಳು ಆಗುತ್ತಿದ್ದವು. ನನ್ನ ಸ್ನೇಹಿತನೊಬ್ಬ ಹೇಳಿದ ಇವನು ಮದುವೆ ಆದ ಮೇಲೆ ಇವನ ಹೆಂಡ್ತಿ ಏನಾದರು "ನಿನ್ನ ಸ್ನೇಹಿತರನ್ನು ಮರೆತು ಬಿಡು" ಎಂದರೆ ಇವನು ಏನು ಹೇಳಬಹುದು? , ಇನ್ನೊಬ್ಬ ಹೇಳಿದ "ಹೇಳೋದೇನು ಬಂತು ಹೆಂಡ್ತಿ ಹೇಳಿದ ಮೇಲೆ ಖಂಡಿತಾ ಮರೆತು ಬಿಡ್ತಾನೆ", ಮೊದಲಿನವನು ಮತ್ತೊಂದು ಪ್ರಶ್ನೆ ಎಸೆದ "ಅವಳು ಎಂದರು ವಿಷ್ಣುವರ್ಧನ್ ಅಭಿಮಾನವನ್ನು ಬಿಟ್ಟು ಬಿಡು ಎಂದು ಕಂಡಿಶನ್ ಹಾಕಿದರೆ..?",  ಮತ್ತೊಬ್ಬ ನಗುತ್ತಾ ಹೇಳಿದ ಖಂಡಿತಾ ನೂರಕ್ಕೆ ನೂರು ಬಾಗ ಬಿಟ್ಟು ಬಿಡುತ್ತಾನೆ..., ಆದರೆ ವಿಷ್ಣು'ವನ್ನಲ್ಲಾ...!, ಹೆಂಡತಿಯನ್ನು....!


ಕೊನೆಯದಾಗಿ ಎಚ್ ನರಸಿಂಹಯ್ಯ ಸಾರ್ ಬಗ್ಗೆ ಒಂದೆರೆಡು ವಿಷಯ ಹೇಳಲೇಬೇಕು . ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮಕ್ಕೆ ಸೇರಿದ ಇವರು ಶ್ರೇಷ್ಟ ಶಿಕ್ಷಣ ತಜ್ಞರು, ಗಾಂದಿ ವಾದಿಯೂ, ಬೌತಿಕ ಶಾಸ್ತ್ರಜ್ಞರು , ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಇವರಿಗೆ ೧೯೬೫ ರಲ್ಲಿ ಬಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಮೂಡ ನಂಬಿಕೆಗಳನ್ನು ವಿರೋದಿಸುತ್ತಿದ್ದ ಅವರು ವಿಜ್ಞಾನದ ಪರವಾಗಿದ್ದರು, ಸಾಯಿಬಾಬ ರವರನ್ನು, ಅವರ ಪವಾಡಗಳನ್ನು ಮೊತ್ತ ಮೊದಲ ಬಾರಿಗೆ ವಿರೋದಿಸಿದ ವ್ಯಕ್ತಿ ಎಚ್.ನರಸಿಂಹಯ್ಯ.



No comments:

Post a Comment