Wednesday, January 26, 2011

ಸಾಹಸಸಿಂಹ ನಿಗೆ ಮೌನಯಾತ್ರೆಯ ಮೂಲಕ ಶ್ರದ್ದಾಂಜಲಿ
(ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ವಿಶ್ವ ಮಹಾಸಂಘ ದ ವತಿಯಿಂದ ಈ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.)  


ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಚಿತ್ರರಸಿಕರನ್ನು ಅಗಲಿ ಡಿಸೆಂಬರ್ 30ಕ್ಕೆ ಒಂದು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್30ರಂದು ಮೌನ ಮೆರವಣಿಗೆಯ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ವಿಷ್ಣುಪ್ರಿಯರು ಸಿಂಹಜ್ಯೋತಿಯೊಂದಿಗೆ ಮೌನ ಮೆರವಣಿಗೆಯಲ್ಲಿ ಭಕ್ತಿ ಭಾವಗಳೊಂದಿಗೆ ಪಾಲ್ಗೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

ಮೌನ ಮೆರವಣಿಗೆಯ ಪಾದಯಾತ್ರೆಯು ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಅಭಿಮಾನ್ ಸ್ಟುಡಿಯೋ ವರೆಗೆ ಸಾಗಲಿದೆ. ಡಿಸೆಂಬರ್ 30, 2010ರಂದು ಗುರುವಾರ ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. 

ಈ ಮೌನ ಮೆರವಣಿಗೆಯನ್ನು ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ವಿಶ್ವ ಮಹಾ ಸಂಘ ಹಮ್ಮಿಕೊಂಡಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು ಶ್ವೇತಬಣ್ಣದ ವಸ್ತ್ರಗಳನ್ನು ತೊಟ್ಟು ಬರಬೇಕೆಂದು ಸೂಚಿಸಲಾಗಿದೆ.

ಬಾರತದ ಇತಿಹಾಸದಲ್ಲಿ ೫೦ ಸೆಂಚುರಿ ಗಳನ್ನೂ ಬಾರಿಸಿ ಬಾರತ ಮಾತೆಯ ಕೀರ್ತಿ ಪತಾಕೆಯನ್ನು ದಿಗಂತದಲ್ಲಿ ಹಾರಿಸಿದ ಸಚಿನ್ ತೆಂಡೂಲ್ಕರ್ ಗೆ ಅಭಿನಂದನೆಗಳು.
ನನ್ನ ಬಗ್ಗೆ: ನಾನು ದೇವ ಹಾಗು ಕರುಣಾಮಯಿ ಚಿತ್ರಗಳನ್ನು ನೋಡಿ ವಿಷ್ಣುರವರ ಅಭಿಮಾನಿಯಾದೆ, ಮುತ್ತಿನ ಹಾರ, ನಾಗರಹಾವು, ಸಾಮ್ರಾಟ್, ಲಾಲಿ ನನ್ನ ಫೆವರೆಟ್ ಚಿತ್ರಗಳು, ನಾನು ಕನ್ನಡ ಭಾಷೆ, ಮತ್ತು ಹಿಂದೂ ಸಂಸ್ಕೃತಿ ಯಾ ಬಗ್ಗೆ ಅಭಿಮಾನ ಉಳ್ಳವನಾಗಿದ್ದು ಕಾದಂಬರಿಗಳ ಪ್ರಿಯನು ಆಗಿದ್ದೇನೆ, ಈ ಸೈಟ್ ಅನ್ನು ನಾನು ಇತ್ತೀಚಿಗೆ ಡಿಸೈನ್  ಮಾಡಿದ್ದು.., ಮುಂಬರುವ ದಿನಗಳಲ್ಲಿ ಹಿಂದೂ ದರ್ಮದ ಶ್ರೆಸ್ಟತೆ, ಕನ್ನಡದ ಅತ್ಯುತ್ತಮ ಕಾದಂಬರಿಗಳು, ಕನ್ನಡ ಮತ್ತು ಇಂಗ್ಲಿಶ್ ವ್ಯಾಕರಣ, ಮಾನವೀಯತೆ, ಸ್ಟೈಲ್, ಡ್ರೆಸ್ ಹೇಗೆ ಮಾಡಿಕೊಳ್ಳಬೇಕು, ಯಾವ ಕಳ್ಳರಿಗೆ ಯಾವ ಶಿಕ್ಷೆ ನೀಡಬೇಕು, ಮೋಕ್ಷ ಪಡೆದುಕೊಳ್ಳುವುದು ಹೇಗೆ, ಯಾವ ರೀತಿಯ ಕಲಾವಿದರನ್ನು ಗೌರವಿಸಬೇಕು, ನಮ್ಮ ಮಕ್ಕಳಿಗೆ , ಕುಟುಂಬ ಸದಸ್ಯರಿಗೆ ಯಾವ ರೀತಿಯ ಚಲನ ಚಿತ್ರಗಳನ್ನು ತೋರಿಸಬಾರದು, ಮಕ್ಕಳನ್ನು ಶಿಕ್ಷಿಸದೆಯೇ ಹೇಗೆ ತಿದ್ದಬಹುದು ಹಾಗು ನಾನು ಓದಿರುವ ಉತ್ತಮವಾದ ಕಾದಂಬರಿಗಳ ಬಗ್ಗೆಯೂ ವಿಷ್ಯ ತಿಳಿಸಲಿದ್ದೇನೆ, ಬಸ್ ಸ್ಟಾಂಡಿನಲ್ಲಿ ಹೇಗೆ ಇರಬೇಕು, ಕಾಲೇಜಿನಲ್ಲಿ ಹೇಗೆ ಇರಬೇಕು, ಮುಖಕ್ಕೆ ಏನು ಹಚ್ಚಬೇಕು, ಯಾವ ಸಾಬೂನು ಬಳಸಬೇಕು, ಇವೆ ಮುಂತಾದ ವಿಚಾರಗಳು ಅಲ್ಲದೆ, ಬಾರತದ ಇಂದಿನ ಜನಸಂಖ್ಯೆ , ಅರ್ಥಿಕ, ಕೈಗಾರಿಕೆಗಳ ಬಗ್ಗೆಯೂ ಚರ್ಚಿಸಲಿದ್ದೇನೆ, ಆಗಾಗ್ಗೆ ಬೇಟಿ ನೀಡುತ್ತಿರಿ..., 
ನನಗೆ ಎಲ್ಲಿಯಾದರೂ ಜಾಬ್ ಫೆಸಿಲಿಟಿ ಇರುವುದು ತಿಳಿದುಬಂದರೆ ಆ ವಿವರಗಳನ್ನು ಇಲ್ಲಿ ತುಂಬಲಿದ್ದೇನೆ. ನೆನಪಿಡಿ ಮುಂಬರುವ ಎಲ್ಲ ಲೇಖನಗಳನ್ನು ಕನ್ನಡದ ಜೊತೆಗೆ ಇಂಗ್ಲಿಶ್ ಅನುವಾದವನ್ನು ನೀಡಲಿದ್ದೇನೆ,


ನನ್ನ ಪ್ರೀತಿಯ ಸ್ನೇಹಿತರೆ ಮೇಲೆ ಹೇಳಿದ ಎಲ್ಲ ವಿಷಯಗಳನ್ನು ಕೆಲವೇ ಸಂದೇಶಗಳಲ್ಲಿ ವಿವರಿಸಲು ಸಾದ್ಯವಿಲ್ಲ, ಅದಕ್ಕಾಗಿ ಈ ಬ್ಲಾಗ್ ನ ಪ್ರಾರಂಭದಲ್ಲಿ ಎಲ್ಲ ವಿಷಯಗಳ ಬಗ್ಗೆ ಪೇಜ್ ಲಿಂಕ್ ಗಳನ್ನೂ ಅಳವಡಿಸಿದ್ದು, ಸಂಬಂದಪಟ್ಟ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಆ ವಿಷಯಕ್ಕೆ ಸಂಬಂದಿಸಿದ ವಿವರಗಳನ್ನು ಪಡೆಯಬಹುದಾಗಿದೆ.


ಇಂತಿ ನಿಮ್ಮ ಪ್ರೀತಿಯ ಸ್ನೇಹಿತ ಮಾರುತಿವರ್ಧನ್.

 ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೀವು ಇದಕ್ಕೆ ಅಭಿಪ್ರಾಯ ಬರೆಯಬೇಕಿದ್ದರೆ 
   ಈ  ಕೆಳಗೆ ಕಾಣುವ   comments
ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
Want to write a comment? click on the word  comments below!

1 comment:

  1. ಪ್ರಿಯ ಮಾರುತಿ, ನಿನಗೆ ವಿಷ್ಣು ಎಂದರೆ ಎಂಥಹ ಅಭಿಮಾನವಿದೆ ಎಂದು ನಿನ್ನ ಬ್ಲಾಗ್ ನೋಡಿದಾಗ ತಿಳಿಯಿತು, ನಾನು ನಿನಗಿಂತ ವಯಸ್ಸಿನಲ್ಲಿ ದೊಡ್ದವನಾಗಿರುವುದಕ್ಕೆ ಅಭಿಮಾನದಿಂದ ಸ್ವಲ್ಪ ಸಲಿಗೆ ತೆಗೆದುಕೊಳ್ಳುತಿದ್ದೇನೆ. ನಿನ್ನ ಪ್ರೊಫೈಲ್ ನೋಡಿದೆ ನಿನ್ನ ಬಗ್ಗೆ ಹೆಚ್ಚಿನ ವಿವರಗಳಿಲ್ಲ, ಟೀಚರ್ ಎಂದು ಮಾತ್ರ ಗೊತ್ತಾಯಿತ್. ನೀನು ಕೆಲವಾರು ವಿಷಯಗಳ ಬಗ್ಗೆ ತುಂಬಾ ಚನ್ನಾಗಿ ಅಸ್ತ್ರ ರವರಿಗೆ ಉತ್ತರ ಕೊಟ್ಟಿದ್ದೀಯ, ಆದರೆ ನಾವು ಉತ್ತರ ಕೊಡುವಾಗ ಎಮೋಷನಲ್ ಆಗಿ ಯೋಚಿಸುವುದಕ್ಕೆ ಹೊರಟರೆ ಮುಲ ವಿಷಯವನ್ನೇ ಮರೆತು ವಿಷಯಾಂತರವಾಗಿ ಬಿಡುತ್ತೇವೆ. ನಿನ್ನಲ್ಲಿರುವ ಕೆಚ್ಚು ಒಳ್ಳೆಯದೇ, ವಿಷಯಗಳನ್ನು ಚರ್ಚೆ ಮಾಡಬೇಕಾದಾಗ ಸ್ವಲ್ಪ ಸಹನೆ ಇರಲಿ. ಅಸ್ತ್ರ[ಆದಿ] ಆತ ಕೂಡ ಹೆಚ್ಚು ತಿಳುವಳಿಕೆಯುಳ್ಳ ವ್ಯಕ್ತಿ ಅದರಲ್ಲಿ ಎರಡು ಮಾತಿಲ್ಲ. ಅಂಥಹ ವ್ಯಕ್ತಿಗಳ ಜೊತೆ ಚರ್ಚೆಗೆ ನಿಂತಾಗ ನಾವು ವಿಷಯದ ಗಂಬೀರತೆ ಹಾಗು ಆ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ ವನ್ನು ಹೊಂದಿ ಮಾತನಾಡಬೇಕಾಗುತ್ತದೆ. ನೀನು ಹೇಳಿರುವ ಕೆಲ ವಿಷಯಗಳು ನಿಜಕ್ಕೂ ಸರಿ, ಅದನ್ನು ಹೇಳುವ ರೀತಿ ಸ್ವಲ್ಪ ನಯವಾಗಿರಬೇಕಷ್ಟೇ.
    ಮಕ್ಕಳಿಗೆ ಬೋದಿಸುವ ಒಳ್ಳೆಯ ಕೆಲಸ ನಿನ್ನದಾಗಿದೆ, ತುಂಬಾ ಒಳ್ಳೆಯದು, ನಾನು ಕೂಡ ನಿನ್ನ ವಯಸ್ಸಿನಲ್ಲಿ ವಿಷ್ಣು ಅಂದರೆ ಆತನ ಡೈಲಾಗ್ ಅಂದರೆ ಪ್ರಾಣವಾಗಿತ್ತು. ಅವರದು ಈಗ ನೆನಪು ಮಾತ್ರ. ಓ ಕೆ ಬಿಡುವಾಗಿದ್ದಾಗ ಮತ್ತೆ ಸಿಗುತ್ತೇನೆ. ತಿಳಿಯದೆ ಬಂದ ವ್ಯಕ್ತಿ ನಾನಾಗಿದ್ದೇನೆ. ತಪ್ಪಿದ್ದರೆ ಕ್ಷಮೆ ಇರಲಿ.. ನೆನಪಿರಲಿ..

    ReplyDelete